ತೊಕ್ಕೊಟ್ಟು ಬೀಫ್ ಸ್ಟಾಲ್ ಬೆಂಕಿ ಪ್ರಕರಣ ; ಆರೋಪಿ ಬಂಧನ

16-01-21 02:41 pm       Mangalore Correspondent   ಕ್ರೈಂ

ತೊಕ್ಕೊಟ್ಟು ಒಳಪೇಟೆಯ ಬೀಫ್ ಸ್ಟಾಲ್ ಗೆ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಮಂಗಳೂರು, ಜ.16: ತೊಕ್ಕೊಟ್ಟು ಒಳಪೇಟೆಯ ಬೀಫ್ ಸ್ಟಾಲ್ ಗೆ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ನಾಗರಾಜ್ (32) ಎಂದು ಗುರುತಿಸಲಾಗಿದೆ.

ಮೊಹಮ್ಮದ್ ಹನೀಫ್ ಎಂಬವರ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧಿಸಿ ಪೊಲೀಸರು ಸಿಸಿಟಿವಿ ಆಧರಿಸಿ ತನಿಖೆ ಕೈಗೊಂಡಿದ್ದರು. ಜ.8ರಂದು ರಾತ್ರಿ ಕೃತ್ಯ ನಡೆದಿದ್ದ ದಿನ ನಾಗರಾಜ್ ಆ ಭಾಗದಲ್ಲಿ ಸುತ್ತಾಡುವುದು ಕಂಡುಬಂದಿದ್ದರಿಂದ ಆತನನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಈ ವೇಳೆ, ತಾನೇ ಕೃತ್ಯ ಮಾಡಿದ್ದಾಗಿ ಒಪ್ಪಿದ್ದಾಗಿ ಹೇಳಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ನಾಗರಾಜ್ ಬೀಫ್ ಪಡೆಯುವುದಕ್ಕಾಗಿ ಅದೇ ಅಂಗಡಿಗೆ ಬಂದಿದ್ದ. ಬೀಫ್ ಕಡಿಮೆ ಕೊಟ್ಟಿದ್ದಕ್ಕೆ ಆಕ್ಷೇಪಿಸಿದ್ದ. ಅದೇ ದ್ವೇಷದಲ್ಲಿ ಬೆಂಕಿ ಹಾಕಿರುವ ಸಾಧ್ಯತೆಯಿದೆ ಎಂದು ಪೊಲೀಸರು ಸಂಶಯಿಸಿದ್ದಾರೆ. ಆತನನ್ನು ಇನ್ನಷ್ಟು ವಿಚಾರಣೆ ನಡೆಸುತ್ತಿದ್ದಾರೆ.

ಲೋಕಲ್ ಕುಡುಕನಂತೆ..!

ಆದರೆ, ತೊಕ್ಕೊಟ್ಟಿನ ಸ್ಥಳೀಯರ, ನಾಗರಾಜ್ ಅಲ್ಲಿ ಲೋಕಲ್ ಕುಡುಕನಂತೆ. ರಾತ್ರಿ ಹಗಲೆನ್ನದೆ ಕುಡಿದು ತೂರಾಡುತ್ತಿರುವ ವ್ಯಕ್ತಿಯಾಗಿದ್ದು, ತೊಕ್ಕೊಟ್ಟಿನಲ್ಲೇ ತಿರುಗಾಡುತ್ತಿರುತ್ತಾನೆ. ಈ ವ್ಯಕ್ತಿ ಬೆಂಕಿ ಹಚ್ಚಿರಲಿಕ್ಕಿಲ್ಲ ಎಂದು ಹೇಳುತ್ತಾರೆ. ಪೊಲೀಸರು ಸಿಸಿಟಿವಿ ಆಧರಿಸಿ ಎಳ್ಕೊಂಡು ಹೋಗಿದ್ದಾರೆ. ನೈಜ ಆರೋಪಿ ಆಗಿರಲಿಕ್ಕಿಲ್ಲ ಎನ್ನುತ್ತಿದ್ದಾರೆ. 

Video: 

Beef stall fire case in Thokkottu one atrested by Ullal police