ಬಸ್ ಚಾಲಕನಿಗೆ ಪೆಟ್ರೋಲ್ ಎರಚಿದ ಆರೋಪಿ ಅರೆಸ್ಟ್ ; ರೌಡಿಶೀಟ್ ಬುಕ್

21-01-21 07:48 pm       Mangaluru Correspondent   ಕ್ರೈಂ

ಬಸ್ ಚಾಲಕನಿಗೆ ಪೆಟ್ರೋಲ್ ಎರಚಿ ಬೆಂಕಿ ಕೊಡಲು ಪ್ರಯತ್ನಿಸಿದ ಪ್ರಕರಣದಲ್ಲಿ ಆರೋಪಿ ಫೈಸಲ್ ನಗರದ ಮಹಮ್ಮದ್ ಅಶ್ರಫ್ (26)ನನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು, ಜ.21: ಬಸ್ ಚಾಲಕನಿಗೆ ಪೆಟ್ರೋಲ್ ಎರಚಿ ಬೆಂಕಿ ಕೊಡಲು ಪ್ರಯತ್ನಿಸಿದ ಪ್ರಕರಣದಲ್ಲಿ ಆರೋಪಿ ಫೈಸಲ್ ನಗರದ ಮಹಮ್ಮದ್ ಅಶ್ರಫ್ (26)ನನ್ನು ಪೊಲೀಸರು ಬಂಧಿಸಿದ್ದಾರೆ.

ಜ.19ರಂದು ರಾತ್ರಿ 8.30ರ ಸುಮಾರಿಗೆ ಸ್ಟೇಟ್ ಬ್ಯಾಂಕ್ ಕಡೆಯಿಂದ 23 ನಂಬರಿನ ಸುವರ್ಣ ಹೆಸರಿನ ಖಾಸಗಿ ಬಸ್ ಪಡೀಲ್ ಫೈಸಲ್ ನಗರಕ್ಕೆ ತೆರಳುತ್ತಿದ್ದಾಗ, ಸೈಡ್ ಕೊಡದ ವಿಚಾರದಲ್ಲಿ ಬೈಕ್ ಸವಾರ ರೌಡಿಸಂ ತೋರಿಸಿದ್ದ. ಬಸ್ಸಿಗೆ ಬೈಕನ್ನು ಅಡ್ಡ ಇಟ್ಟು ಬೈದಿದ್ದಲ್ಲದೆ, ಬೈಕ್ ಸವಾರ ಅಶ್ರಫ್ ತನ್ನ ಕೈಲಿದ್ದ ಪೆಟ್ರೋಲ್ ಬಾಟಲಿಯಿಂದ ಚಾಲಕ ಸಂಪತ್ ಮತ್ತು ಬಸ್ಸಿನ ಮುಂಭಾಗಕ್ಕೆ ಎರಚಿದ್ದ. ಇದರಿಂದ ಅಪಾಯ ಅರಿತ ಚಾಲಕ ಕೂಡಲೇ ಅಲ್ಲಿಂದ ಪರಾರಿಯಾಗಿದ್ದ. ಆನಂತರ ಸ್ಥಳೀಯರು ಮತ್ತು ಬಸ್ ಸಿಬಂದಿ ಆರೋಪಿಯನ್ನು ತರಾಟೆಗೆತ್ತಿಕೊಂಡಿದ್ದರು. ಆರೋಪಿ ಅಶ್ರಫ್ ಅಲ್ಲಿಂದ ಪರಾರಿಯಾಗಿದ್ದ. ಈ ಬಗ್ಗೆ ಬಸ್ ಸಿಬಂದಿ ಕಂಕನಾಡಿ ಪೊಲೀಸರಿಗೆ ದೂರು ನೀಡಿದ್ದರು.

ಕಂಕನಾಡಿ ಫೈಸಲ್ ನಗರ ನಿವಾಸಿ ಅಶ್ರಫ್ ನನ್ನು ಬಂಧಿಸಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಕಮಿಷನರ್ ಶಶಿಕುಮಾರ್ ಆರೋಪಿಯನ್ನು ಹಾಜರುಪಡಿಸಿ, ಘಟನೆಯ ವಿವರ ನೀಡಿದರು. ಅಲ್ಲದೆ ಬಸ್ಸಿಗೆ ಮತ್ತು ಚಾಲಕನಿಗೆ ಪೆಟ್ರೋಲ್ ಎರಚುವುದು ಗಂಭೀರ ಪ್ರಕರಣವಾಗಿದ್ದು, ಆರೋಪಿ ವಿರುದ್ಧ ರೌಡಿಶೀಟ್ ತೆರೆಯುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ. 

ಸಿಟಿ ಬಸ್ ಚಾಲಕನ ಜೊತೆ ಜಟಾಪಟಿ ; ಬೈಕ್ ಸವಾರನಿಂದ ಪೆಟ್ರೋಲ್ ಸ್ಪ್ರೇ !! 

ಪೆಟ್ರೋಲ್ ಸುರಿದು ಬಸ್ ಚಾಲಕನ ಹತ್ಯೆಗೆ ಯತ್ನ ; ತಕ್ಷಣ ಆರೋಪಿ ಬಂಧಿಸಲು ಒತ್ತಾಯ 

The biker who poured petrol on bus driver Sampath in a case of road rage has been arrested in Mangalore. The arrested has been identified as Mohammed Ashraf (26), a resident of Bajal, who works as a welder.