ಬ್ರೇಕಿಂಗ್ ನ್ಯೂಸ್
26-01-21 02:45 pm Mangalore Correspondent ಕ್ರೈಂ
ಮಂಗಳೂರು, ಜ.26: ಕಾವೂರು ಠಾಣೆ ವ್ಯಾಪ್ತಿಯ ಶಾಂತಿನಗರದಲ್ಲಿ ನಿನ್ನೆ ರಾತ್ರಿ ಪುಂಡಾಟಿಕೆ ನಡೆದಿದೆ. ಯುವಕನೊಬ್ಬ ಇಬ್ಬರ ಮೇಲೆ ವಿನಾಕಾರಣ ಸೋಂಟೆಯಲ್ಲಿ ಹಲ್ಲೆ ನಡೆಸಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ರಾತ್ರೋರಾತ್ರಿ ಶಾಂತಿನಗರದಲ್ಲಿ ಭಾರೀ ಸಂಖ್ಯೆಯಲ್ಲಿ ಯುವಕರು ಸೇರಿದ್ದು, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ರಾತ್ರಿ 11 ಗಂಟೆ ಸುಮಾರಿಗೆ ನಿಕಿತ್ ಮತ್ತು ಇನ್ನೊಬ್ಬ ಕಾರಿನಲ್ಲಿ ಬರುತ್ತಿದ್ದಾಗ ಶಾಂತಿನಗರದಲ್ಲಿ ಅಶ್ರಫ್ ಎಂಬ ಯುವಕ ರಸ್ತೆಯಲ್ಲಿ ಕುಳಿತು ಸಿಗರೇಟು ಸೇದುತ್ತಿದ್ದ. ಈ ಬಗ್ಗೆ ರಸ್ತೆಯಲ್ಲಿ ಕುಳಿತಿರುವ ವ್ಯಕ್ತಿಯನ್ನು ಕಾರಿನಲ್ಲಿದ್ದ ಮಂದಿ ಪ್ರಶ್ನೆ ಮಾಡಿದ್ದಾರೆ. ಈ ವೇಳೆ, ಮಾತಿನ ಚಕಮಕಿ ನಡೆದಿದ್ದು, ಅಶ್ರಫ್ ಅಲ್ಲಿ ಕೈಗೆ ಸಿಕ್ಕ ಮರದ ಸೋಂಟೆಯಲ್ಲಿ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ.
ಇಷ್ಟಾಗುತ್ತಿದ್ದಂತೆ, ಕಾವೂರಿನ ಹಿಂದು ಸಂಘಟನೆ ಕಾರ್ಯಕರ್ತರು ಸ್ಥಳದಲ್ಲಿ ಸೇರಿದ್ದು, ಪೊಲೀಸರಿಗೂ ಸುದ್ದಿ ಮುಟ್ಟಿಸಿದ್ದಾರೆ. ಕಾವೂರು ಪೊಲೀಸರು ಬಂದು ಉದ್ರಿಕ್ತರನ್ನು ಮನವೊಲಿಸಿ, ಚದುರಿಸಿದ್ದಾರೆ. ಅಲ್ಲದೆ, ಅಶ್ರಫ್ ವಿರುದ್ಧ ಕೇಸು ದಾಖಲಿಸುವುದಾಗಿ ಹೇಳಿದ್ದಾರೆ. ರಾತ್ರಿ 12 ಗಂಟೆ ವೇಳೆಗೆ ಪೆಟ್ಟು ತಿಂದ ಯುವಕರಿಬ್ಬರ ಮನೆಯಿಂದ ಮಹಿಳೆಯರೇ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಅಲ್ಲದೆ, ಹಲ್ಲೆಗೊಳಗಾದ ಯುವಕರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಪೊಲೀಸರ ನಿರ್ಲಕ್ಷ್ಯಕ್ಕೆ ಗಾಂಜಾ ಅಡ್ಡೆ !
ಶಾಂತಿನಗರದಲ್ಲಿ ಸಂಜೆ ಹೊತ್ತಿಗೆ ಯುವತಿಯರು, ಮಹಿಳೆಯರು ನಡೆದುಕೊಂಡು ಹೋಗಲು ಭಯ ಪಡುತ್ತಿದ್ದಾರೆ. ಯುವಕರು ಸೇರಿಕೊಂಡು ಚುಡಾಯಿಸುವುದು, ಕಿಚಾಯಿಸುವುದನ್ನು ಮಾಡುತ್ತಾ ಕೀಟಲೆ ಮಾಡುತ್ತಾರೆ. ಅಲ್ಲದೆ, ಗಾಂಜಾ ಸೇದಿಕೊಂಡು ಪೊಲೀಸರಿಗೂ ಭಯ ಪಡದ ವಾತಾವರಣ ಅಲ್ಲಿದೆ ಎಂದು ಸ್ಥಳೀಯರು ಹೇಳುತ್ತಾರೆ. ಈ ಭಾಗದಲ್ಲಿ ಪೊಲೀಸರು ಬೀಟ್ ಮಾಡುವುದಿಲ್ಲ. ಸಂಜೆಯಿಂದ ರಾತ್ರಿಯಾದರೂ ಅಲ್ಲಿ ಬೀದಿಯಲ್ಲಿ ನಿಂತು, ರಸ್ತೆಯಲ್ಲಿ ಕುಳಿತು ಯುವಕರು ಕೀಟಲೆ ನಡೆಸುತ್ತಾರೆ. ಮಂಗಳೂರು ನಗರ ಭಾಗದಲ್ಲಿ ಬೀಟ್ ಮಾಡುವ ಪೊಲೀಸರು ಈ ಭಾಗದಲ್ಲಿ ಯಾಕೆ ಮಾಡುವುದಿಲ್ಲ. ಪೊಲೀಸರ ನಿರ್ಲಕ್ಷ್ಯದಿಂದಲೇ ಶಾಂತಿನಗರ ಗಾಂಜಾ ಅಡ್ಡೆಯಾಗಿದೆ ಎಂದು ದೂರುತ್ತಾರೆ.
ಆರೋಪಿ ಅಶ್ರಫ್ ಮೂಲತಃ ಮೂಲ್ಕಿಯ ಕಾರ್ನಾಡು ನಿವಾಸಿ ಎನ್ನಲಾಗುತ್ತಿದೆ. ಕೆಲಸದ ನಿಮಿತ್ತ ಕಾವೂರಿನಲ್ಲಿ ಸಂಬಂಧಿಕರ ಮನೆಯಲ್ಲಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡ ಬಳಿಕ ತಲೆಮರೆಸಿಕೊಂಡಿದ್ದಾನೆ. ಈ ಬಗ್ಗೆ ಕಾವೂರು ಪೊಲೀಸರಲ್ಲಿ ಕೇಳಿದರೆ, ಅದು ಗಾಂಜಾ ಗಲಾಟೆ, ದೊಡ್ಡ ವಿಷ್ಯ ಏನಿಲ್ಲ ಎನ್ನುತ್ತಾರೆ. ಪೊಲೀಸರ ನಿರ್ಲಕ್ಷ್ಯವೇ ಅಪರಾಧಿಗಳ ಆಟಾಟೋಪಕ್ಕೆ ಕಾರಣವಾಗುತ್ತದೆ ಅನ್ನುವುದನ್ನು ಪೊಲೀಸರು ಮನಗಂಡಂತಿಲ್ಲ.
Ganja Consumption in car has lead to fight between two groups at Shantinagar in Kavoor. A case has been filed and the accused is said to be absconding.
06-09-25 08:28 pm
HK News Desk
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
06-09-25 10:59 pm
Mangalore Correspondent
Mangalore, Dharmasthala, Vittal Gowda, Skull:...
06-09-25 10:15 pm
ಗೋಮಾಂಸ ಭಕ್ಷಕರಿಗೆ ರಾಜ್ಯ ಸರ್ಕಾರ ಶಾದಿ ಭಾಗ್ಯ ರೀತಿ...
06-09-25 05:56 pm
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
Ullal News, Warrant, Video, Mangalore: ಮೊದಲ ಪ...
05-09-25 08:12 pm
06-09-25 08:32 pm
Bangalore Correspondent
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm
ಮುಂಬೈಗೆ 14 ಲಷ್ಕರ್ ಉಗ್ರರ ಎಂಟ್ರಿ ಬೆದರಿಕೆ ! 400...
06-09-25 10:37 am