ಬ್ರೇಕಿಂಗ್ ನ್ಯೂಸ್
27-01-21 02:21 pm Udupi Correspondent ಕ್ರೈಂ
ಉಡುಪಿ, ಜ.27: ಬೈಕಿನಲ್ಲಿ ಬಂದ ಮೂರು ಮಂದಿ ಯುವಕರು ಒಂಟಿ ಮಹಿಳೆಯರಿದ್ದ ಮನೆಗಳಿಂದ ಕಳವು ಮಾಡಲು ಹೊಂಚು ಹಾಕುತ್ತಿರುವುದನ್ನು ತಿಳಿದ ಗ್ರಾಮಸ್ಥರು ಅವರನ್ನು ಹಿಡಿದು ಕೂಡಿಹಾಕಿದ ಘಟನೆ ಬ್ರಹ್ಮಾವರ ಬಳಿಯ ಶಿರಿಯಾರದಲ್ಲಿ ನಡೆದಿದೆ.
ಶಿರಿಯಾರದ ಗುಡ್ಡಟ್ಟು ಎಂಬಲ್ಲಿ ಘಟನೆ ನಡೆದಿದ್ದು, ಸ್ಥಳೀಯರು ಇಬ್ಬರನ್ನು ಹಿಡಿದು ಬ್ರಹ್ಮಾವರ ಪೊಲೀಸರಿಗೆ ಒಪ್ಪಿಸಿದ್ದಾರೆ. ಸುರೇಶ್ ಮತ್ತು ಬೆಂಗಳೂರು ಮೂಲದ ರಾಕೇಶ್ ಬಂಧಿತರು. ಇನ್ನೊಬ್ಬ ನಂದೀಶ್ ಅಲಿಯಾಸ್ ವಿಶ್ವ ಎಂಬಾತ ಓಡಿ ತಪ್ಪಿಸಿಕೊಂಡಿದ್ದಾನೆ.
ಒಂಟಿ ಮಹಿಳೆಯರು ವಾಸವಿದ್ದ ಮನೆಗಳಿಗೆ ಬರುತ್ತಿದ್ದ ಯುವಕರು ಅಲ್ಲಿಂದ ವಸ್ತುಗಳನ್ನು ಕದಿಯಲು ಹೊಂಚು ಹಾಕುತ್ತಿದ್ದರು. ಈ ಬಗ್ಗೆ ಸ್ಥಳೀಯರು ಪ್ರಶ್ನೆ ಮಾಡಿದ್ದಲ್ಲದೆ, ಹಿಡಿಯಲು ಯತ್ನಿಸಿದಾಗ ಚೂರಿ ತೋರಿಸಿ ಬೆದರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಕೂಡಲೇ ಬ್ರಹ್ಮಾವರ ಠಾಣೆಗೆ ಮಾಹಿತಿ ನೀಡಿದ್ದು, ಅಲ್ಲದೆ ಸ್ಥಳೀಯ ಯುವಕರು ಒಟ್ಟಾಗಿ ಯುವಕರ ಪತ್ತೆಗೆ ಮುಂದಾಗಿದ್ದಾರೆ. ಕೊನೆಗೆ ಸ್ಥಳೀಯರು ಮತ್ತು ಪೊಲೀಸರು ಬೆನ್ನಟ್ಟಿ ಜಪ್ತಿ ಎನ್ನುವ ಗ್ರಾಮದಲ್ಲಿ ಇಬ್ಬರನ್ನು ಹಿಡಿದಿದ್ದಾರೆ. ನಂದೀಶ್ ಓಡಿ ತಪ್ಪಿಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇದೇ ವೇಳೆ, ಯುವಕರು ಸಣ್ಣ ಮಕ್ಕಳನ್ನು ಹಿಡಿಯಲು ಯತ್ನಿಸುತ್ತಿದ್ದರು ಎನ್ನುವ ವದಂತಿಯೂ ಹಬ್ಬಿದೆ. ಆದರೆ, ಪೊಲೀಸರು ಅದನ್ನು ನಿರಾಕರಿಸಿದ್ದಾರೆ. ಆರು ವರ್ಷದ ಮಗುವಿನ ಜೊತೆಗೆ ಯುವಕರು ಮಾತನಾಡುತ್ತಿದ್ದರು. ಮಗುವನ್ನು ಹಿಡಿಯಲು ಯತ್ನಿಸುತ್ತಿದ್ದಾಗ ಸ್ಥಳೀಯರು ಸೇರಿದ್ದು ಯುವಕರು ಅಲ್ಲಿಂದ ಕಾಲ್ಕಿತ್ತಿದ್ದರು. ಬಳಿಕ ಸ್ಥಳೀಯರು ಆಟೋದಲ್ಲಿ ಬೆನ್ನಟ್ಟಿದ್ದು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು ಎನ್ನಲಾಗುತ್ತಿದೆ.
ಘಟನೆ ಬಗ್ಗೆ ಯಾರು ಕೂಡ ಪೊಲೀಸರಿಗೆ ದೂರು ದಾಖಲು ಮಾಡಿಲ್ಲ. ಆದರೂ, ಪೊಲೀಸರು ತನಿಖೆ ನಡೆಸುತ್ತಿದ್ದು, ವಶಕ್ಕೆ ಪಡೆದ ಆರೋಪಿಗಳನ್ನು ಮಂಗಳೂರಿನ ಉರ್ವಾ ಠಾಣೆಗೆ ಹಸ್ತಾಂತರಿಸಲು ಯೋಜನೆ ಹಾಕಿದ್ದಾರೆ. ಉರ್ವಾ ಠಾಣೆ ವ್ಯಾಪ್ತಿಯಲ್ಲಿ ಮೂವರು ಯುವಕರು ಬೈಕಿನಲ್ಲಿ ಬಂದು ಕಳವು ಕೃತ್ಯದಲ್ಲಿ ಭಾಗಿಯಾದ ಬಗ್ಗೆ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ವಿಚಾರಣೆಗಾಗಿ ವಶಕ್ಕೆ ಪಡೆಯುವ ಸಾಧ್ಯತೆಯಿದೆ. ಬಂಧಿತರ ಪೈಕಿ ಸುರೇಶ್ ಸ್ಥಳೀಯನಾಗಿದ್ದು, ಉಳಿಬ್ಬರು ಬೆಂಗಳೂರು ಮೂಲದ ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದ ಎನ್ನಲಾಗಿದೆ.
Three young men who arrived in a motorbike reportedly tried to steal items from a few houses located at Brahmavar, Guddattu, near Shiriyara in the taluk in Udupi where held by Pulic on Tuesday January 26.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm