ಬ್ರೇಕಿಂಗ್ ನ್ಯೂಸ್
22-02-21 02:45 pm Bangalore Correspondent ಕ್ರೈಂ
ಬೆಂಗಳೂರು, ಫೆಬ್ರವರಿ 22: ಅಮೆರಿಕಾದಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಉಡುಗೊರೆ ಬಂದಿದೆ. ಕಸ್ಟಮ್ಸ್ ಕ್ಲಿಯರ್ ಮಾಡೋಕೆ ಹತ್ತು ಸಾವಿರ ಕಟ್ಟಿ ಎಂದು ಯಾರಾದ್ರೂ ಕರೆ ಮಾಡಿದ್ರೆ, ಅಂತಹ ಕರೆಗಳನ್ನು ತಿರಸ್ಕರಿಸಿ. ಸ್ವಲ್ಪ ಯಾಮಾರಿದ್ರೆ ಬ್ಯಾಂಕ್ ಖಾತೆಯಲ್ಲಿರುವ ಹಣ ಮಾಯ ಮಾಡಿ ಬೀದಿಗೆ ತಂದು ನಿಲ್ಲಿಸುತ್ತಾರೆ. ಕಸ್ಟಮ್ಸ್ ಅಧಿಕಾರಿಗಳ ಹೆಸರಿನಲ್ಲಿ ಸೈಬರ್ ಕಳ್ಳರು ವೃದ್ಧ ಅಜ್ಜನಿಗೆ ಹೆದರಿಸಿ 39 ಲಕ್ಷ ರೂಪಾಯಿ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಹಾಕಿಸಿಕೊಂಡು ಮೋಸ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.
ಫೇಸ್ ಬುಕ್ ನಲ್ಲಿ ವೃದ್ಧ ಅಜ್ಜನಿಗೆ ರೇವ್ ಸಿಸ್ಟರ್ ಜಿನಾ ಮ್ಯಾಥ್ಯೂ ಎಂಬುವರು ಪರಿಚಯವಾಗಿದ್ದರು. ಇಬ್ಬರು ಪರಿಚಯವಾದ ಬಳಿಕ ಮೆಸೇಂಜರ್ ನಲ್ಲಿ ಚಾಟ್ ಮಾಡುತ್ತಿದ್ದರು. ಬಳಿಕ ವಾಟ್ಸಪ್ ನಂಬರ್ ಪಡೆದು ಇಬ್ಬರೂ ತಿಂಗಳಾನುಗಟ್ಟಲೇ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಹೀಗೆ ಚಾಟಿಂಗ್ ಮಾಡುತ್ತಿರುವಾಗಲೇ ಅಮೆರಿಕಾ ಕ್ಯಾಲಿಪೋರ್ನಿಯಾದಿಂದ ಉಡುಗೊರೆ ಕಳಿಸಿ ಕೊಡುತ್ತಿರುವುದಾಗಿ ಕರೆ ಮಾಡಿದ್ದ ಜಿನಾ. ಆಕೆಯ ಮಾತು ಕೇಳಿ ಖುಷಿಯಲ್ಲಿ ತೇಲಾಡಿದ್ದ ವೃದ್ಧ ಅಜ್ಜ ಉಡುಗರೆ ಸ್ವೀಕರಿಸುವ ತವಕದಲ್ಲಿದ್ದರು.
ಇದೇ ವೇಳೆ ಕಸ್ಟಮ್ಸ್ ಅಧಿಕಾರಿಗಳ ಹೆಸರಿನಲ್ಲಿ ಕರೆ ಬಂದಿದ್ದು, ನಿಮಗೆ ಅಮೆರಿಕಾದಿಂದ ಗಿಫ್ಟ್ ಬಂದಿದೆ. ಅದನ್ನು ನೀವು ಸ್ವೀಕರಿಸಬೇಕಾದರೆ 30 ಸಾವಿರ ರೂ. ಕಸ್ಟಮ್ಸ್ ಶುಲ್ಕ ಪಾವತಿಸಬೇಕು. ಹಣ ಪಾವತಿ ಮಾಡದಿದ್ದರೆ ಮನಿ ಲ್ಯಾಂಡ್ರಿಗ್ ಪ್ರಕರಣದಲ್ಲಿ ಬಂಧಿಸುವುದಾಗಿ ಹೆದರಿಸಿದ್ದರು. ಇದಕ್ಕೆ ಹೆದರಿದ ವೃದ್ಧ ಅಜ್ಜ, ತನ್ನ ಬ್ಯಾಂಕ್ ಖಾತೆಯಲ್ಲಿದ್ದ 30 ಸಾವಿರ ಹಣವನ್ನು ಪಾವತಿ ಮಾಡಿದ್ದರು. ಕಸ್ಟಮ್ಸ್ ಅಧಿಕಾರಿಗಳ ಹೆಸರಿನಲ್ಲಿ ಪದೇ ಪದೇ ಕರೆ ಮಾಡುತ್ತಿದ್ದ ಸೈಬರ್ ವಂಚಕರು, ಲಕ್ಷ ಲಕ್ಷ ಹಣ ಪೀಕಿದ್ದಾರೆ.
ಹೀಗೆ ಹಂತ ಹಂತವಾಗಿ 39.73 ಲಕ್ಷ ರೂ. ಹಣ ವಸೂಲಿ ಮಾಡಿದ್ದಾರೆ. ಜೀವನಾಧಾಕ್ಕೆಂದು ಇಟ್ಟುಕೊಂಡಿದ್ದ ಎಲ್ಲಾ ಹಣ ಕಳೆದುಕೊಂಡಿದ್ದಾರೆ. ಆನಂತರ ತಾನು ಹಣ ಹಾಕಿದ್ದು ಕಸ್ಟಮ್ಸ್ ಅಧಿಕಾರಿಗಳ ಅಲ್ಲ, ಬದಲಿಗೆ ಕೊಟ್ಟಿದ್ದು ಸೈಬರ್ ವಂಚಕರಿಗೆ ಎಂದು ಅರಿವಾಗಿದೆ. ಜಿನಾಗೆ ಮತ್ತೆ ಕರೆ ಮಾಡಿದರೆ ನಂಬರ್ ಸ್ವಿಚ್ ಆಫ್ ಆಗಿದೆ. ಸೈಬರ್ ವಂಚಕರು ಜಿನಾ ಹೆಸರಿನಲ್ಲಿ ವೃದ್ಧ ಅಜ್ಜನ ಜತೆ ನಿರಂತರ ಚಾಟ್ ಮಾಡಿ ನಲವತ್ತು ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ್ದಾರೆ. ಹಣ ಕಳೆದುಕೊಂಡ ಬಳಿಕ ಅರಿವಿಗೆ ಬಂದ ಬಳಿಕ ಬ್ಯಾಂಕ್ ನಲ್ಲಿ ಪರಿಶೀಲನೆ ನಡೆಸಿದಾಗ, ಉತ್ತರ ಭಾರತದ ರಾಜ್ಯಗಳಿಗೆ ಹಣ ವರ್ಗಾವವಣೆ ಮಾಡಿರುವುದು ಗೊತ್ತಾಗಿದೆ. ಈ ಕುರಿತು ಅಜ್ಜ ವೈಟ್ ಫೀಲ್ಡ್ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
A old man from Bangalore was duped Rs 34 lakh by a woman he met on social networking site. The accused committed online fraud with the help of a fake customs official.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
13-05-25 06:46 pm
HK News Desk
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
13-05-25 07:33 pm
Mangalore Correspondent
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm