ಬ್ರೇಕಿಂಗ್ ನ್ಯೂಸ್
05-03-21 02:49 pm Mangalore Correspondent ಕ್ರೈಂ
ಮಂಗಳೂರು, ಮಾ.5:ಎರಡೇ ತಿಂಗಳ ಅಂತರದಲ್ಲಿ ಮತ್ತೆರಡು ಕಾಲೇಜಿನಲ್ಲಿ ರ್‍ಯಾಗಿಂಗ್ ಪ್ರಕರಣ ದಾಖಲಾಗಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ಒಟ್ಟು ಏಳು ಮಂದಿಯನ್ನು ಬಂಧಿಸಿದ್ದಾರೆ.
ಸುರತ್ಕಲ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಮುಕ್ಕದಲ್ಲಿರುವ ಶ್ರೀನಿವಾಸ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಮೂರನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದ ಕೆ.ಯು.ಶಮೀಲ್(23), ಮಹಮ್ಮದ್ ಬಾಝಿಲ್ (22), ಸಂಭ್ರಮ್ ಆಳ್ವಾ(20), ಅಶ್ವಿತ್ ಜಾನ್ಸನ್(21) ಬಂಧಿತರು.
ಆರೋಪಿಗಳು ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೊದಲ ವರ್ಷದ ವಿದ್ಯಾರ್ಥಿಯಾಗಿರುವ ಕಾರ್ತಿಕ್ ಶೆಟ್ಟಿ ಎಂಬಾತನಿಗೆ ರ್‍ಯಾಗಿಂಗ್ ಮಾಡುತ್ತಿದ್ದ ಬಗ್ಗೆ ಕಾಲೇಜಿನ ಆಡಳಿತಕ್ಕೆ ದೂರು ನೀಡಲಾಗಿತ್ತು. ಕಾಲೇಜಿನಲ್ಲಿ ರ್‍ಯಾಗಿಂಗ್ ವಿರೋಧಿ ಕಮಿಟಿಯಿದ್ದು, ಅದರಲ್ಲಿ ಪ್ರಮುಖರಾಗಿರುವ ಕೆಮಿಸ್ಟ್ರಿ ವಿಭಾಗದ ಪ್ರೊಫೆಸರ್ ಡಾ.ಪ್ರವೀಣ್, ಆರೋಪಿತ ವಿದ್ಯಾರ್ಥಿಗಳನ್ನು ಕರೆದು ವಾರ್ನ್ ಮಾಡಿದ್ದಾರೆ. ಆದರೆ, ವಿದ್ಯಾರ್ಥಿಗಳು ಮತ್ತು ಪ್ರೊಫೆಸರ್ ಮಧ್ಯೆ ವಾಗ್ವಾದ ನಡೆದಿದ್ದು, ಈ ವೇಳೆ ಪ್ರೊಫೆಸರ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಈ ಬಗ್ಗೆ ಮಾಹಿತಿ ಪಡೆದ ಕಾಲೇಜಿನ ಡೀನ್ ಥಾಮಸ್ ಪಿಂಟೋ, ಆರೋಪಿತ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಿದ್ದಾರೆ. ಅಲ್ಲದೆ, ಸುರತ್ಕಲ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಹಲ್ಲೆ ಮತ್ತು ರ್ಯಾಗಿಂಗ್ ನಡೆಸಿರುವ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಿಸಿದ್ದು, ಬಂಧಿಸಿ ಕೋರ್ಟಿಗೆ ಹಾಜರುಪಡಿಸಿದ್ದಾರೆ.
ತಲೆ, ಗಡ್ಡ ಮೀಸೆ ಬೋಳಿಸದಿದ್ದರೆ ಬಿಡಲ್ಲ !
ಇನ್ನೊಂದು ಪ್ರಕರಣ ಕಂಕನಾಡಿ ನಗರ ಠಾಣೆಯಲ್ಲಿ ದಾಖಲಾಗಿದ್ದು, ಬಲ್ಮಠದಲ್ಲಿರುವ ಯೇನಪೋಯ ಪದವಿ ಕಾಲೇಜಿನಲ್ಲಿ ಮೊದಲ ವರ್ಷದ ಬಿಬಿಎ ವಿದ್ಯಾರ್ಥಿಗಳಾಗಿದ್ದ 9 ಮಂದಿಗೆ ಅದೇ ಕಾಲೇಜಿನವರು ರ್‍ಯಾಗಿಂಗ್ ನಡೆಸಿದ್ದಾರೆ. 9 ಜನ ವಿದ್ಯಾರ್ಥಿಗಳು ಪಂಪ್ವೆಲ್ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮಾ.4ರಂದು ಈ ಬಾಡಿಗೆ ಮನೆಗೆ ದ್ವಿತೀಯ ವರ್ಷದ ಮೂರು ವಿದ್ಯಾರ್ಥಿಗಳು ಬಂದಿದ್ದು, ತಾವು ಸೀನಿಯರ್ಸ್ ಎಂದು ಹೇಳಿ ನಿಮ್ಮಲ್ಲಿ ಐದು ಜನ ಗಡ್ಡ ಮೀಸೆ ಬೋಳಿಸಿಕೊಂಡು ಬರಬೇಕೆಂದು ಸೂಚನೆ ನೀಡಿದ್ದಾರೆ. ಅಲ್ಲದೆ ಅವಾಚ್ಯವಾಗಿ ನಿಂದಿಸಿ, ಅವರ ಕೈಯಲ್ಲೇ ಟೀ ಮಾಡಿಸಿ ಕುಡಿದಿದ್ದಾರೆ. ನೀವು ನಾಳೆ ಸಂಜೆ 5 ಗಂಟೆ ಒಳಗಡೆ ತಲೆಕೂದಲು, ಗಡ್ಡ, ಮೀಸೆ ಬೋಳಿಸಿ ಬರಬೇಕು. ಇಲ್ಲದಿದ್ದರೆ ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದಾರೆ.
ಈ ಬಗ್ಗೆ ಪ್ರಥಮ ವರ್ಷದ ಕೆವಿನ್ ಮಥಲಾ ಜೇಕಬ್ ಎಂಬಾತ ಕಂಕನಾಡಿ ಠಾಣೆಗೆ ದೂರು ನೀಡಿದ್ದ. ಪ್ರಕರಣ ದಾಖಲಿಸಿದ ಪೊಲೀಸರು, ಕೇರಳ ಮೂಲದ ಕಣ್ಣೂರು ಜಿಲ್ಲೆಯ ನಿವಾಸಿ ಮಹಮ್ಮದ್ ಆದಿಲ್ (20), ಕ್ಯಾಲಿಕಟ್ ನಿವಾಸಿ ರಿಜಿನ್ ರಿಯಾಸ್ (20), ಮಹಮ್ಮದ್ ನಿಜಾಮುದ್ದೀನ್ ಬಿ.ಪಿ (20) ಎಂಬವರನ್ನು ಬಂಧಿಸಿದ್ದಾರೆ.
Seven students have been arrested by Mangalore City Police in two different cases. Also students assaulted the principal for questioning at srinivas college of engineering.
22-09-25 07:07 pm
Bangalore Correspondent
ಚಾಮುಂಡೇಶ್ವರಿ ಹೆಣ್ಣಿನ ಶಕ್ತಿಯ ಪ್ರತೀಕ, ದಸರಾ ನ್ಯಾ...
22-09-25 03:31 pm
ಬಿಜೆಪಿ ವಿರೋಧ ನಡುವೆಯೇ ಚಾಮುಂಡಿ ತಾಯಿಗೆ ಕೈಮುಗಿದು...
22-09-25 10:54 am
ಪಂಚಮಸಾಲಿ ಲಿಂಗಾಯತರಲ್ಲಿ ಮತ್ತೆ ಒಡಕು ; ಲಿಂಗಾಯತ ಪೀ...
21-09-25 10:23 pm
ಅಳಂದ ವಿಧಾನಸಭೆ ಕ್ಷೇತ್ರದಲ್ಲಿ ಮತ ಕಳ್ಳತನ ; ತನಿಖೆಗ...
21-09-25 01:28 pm
22-09-25 06:58 pm
HK News Desk
ದೇಶಾದ್ಯಂತ ಬಿಹಾರ ಮಾದರಿ ಮತದಾರ ಪಟ್ಟಿ ಪರಿಷ್ಕರಣೆ ;...
22-09-25 10:50 am
ಮಲಯಾಳಂ ಸೂಪರ್ಸ್ಟಾರ್ ಮೋಹನ್ ಲಾಲ್ ಗೆ ದಾದಾ ಸಾಹೇಬ್...
20-09-25 11:03 pm
ಪಾಕಿಸ್ತಾನಕ್ಕೆ ಹೋದರೆ ನನ್ನ ಮನೆಗೆ ಹೋದ ಅನುಭವ ಆಗುತ...
20-09-25 11:42 am
ಸಿಂಗಾಪುರದಲ್ಲಿ ಸ್ಕ್ಯೂಬಾ ಡೈವಿಂಗ್ ಅವಘಡ: ಬಾಲಿವುಡ್...
19-09-25 05:45 pm
22-09-25 10:08 pm
Mangalore Correspondent
ಜಿಎಸ್ಟಿ 2.0 ಜನಸಾಮಾನ್ಯರ ಹಿತದೃಷ್ಟಿಯಿಂದ ತೆರಿಗೆ ಸ...
22-09-25 04:09 pm
ದೋಷಯುಕ್ತ ಇಲೆಕ್ಟ್ರಿಕ್ ವಾಹನ ; ಓಲಾ ಕಂಪನಿ ವಿರುದ್...
22-09-25 01:51 pm
ಸೆ.22ರಿಂದ ಮಂಗಳೂರು ದಸರಾ ವೈಭವ ; ಸಾಂಸ್ಕೃತಿಕ ಕಲಾವ...
20-09-25 10:39 pm
Scdcc Bank, Mangalore: ಎಸ್ಸಿಡಿಸಿಸಿ ಬ್ಯಾಂಕ್ ನಿ...
20-09-25 09:37 pm
22-09-25 08:16 pm
Mangalore Correspondent
IAS Officer Manivannan, Cyber Fraud: ಹಿರಿಯ ಐಎ...
21-09-25 02:30 pm
ತುಂಬೆ, ಉಪ್ಪಿನಂಗಡಿಯಲ್ಲಿ ಹಟ್ಟಿಯಿಂದ ದನ ಕದ್ದು ಮಾಂ...
20-09-25 05:11 pm
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm