ವಿವಿಧ ಕಡೆಗಳಿಗೆ ಸಿಸಿಬಿ ಪೊಲೀಸರ ದಾಳಿ ; ಮಟ್ಕಾ ಆಡುತ್ತಿದ್ದ ಐವರ ಬಂಧನ

05-03-21 04:02 pm       Mangalore Correspondent   ಕ್ರೈಂ

ಮಂಗಳೂರಿನ ವಿವಿಧ ಕಡೆ ನಡೆಯುತ್ತಿದ್ದ ಮಟ್ಕಾ ದಂಧೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. 

ಮಂಗಳೂರು, ಮಾ.5 : ಸಿಸಿಬಿ ಪೊಲೀಸರು ಮಂಗಳೂರಿನ ವಿವಿಧ ಕಡೆ ನಡೆಯುತ್ತಿದ್ದ ಮಟ್ಕಾ ದಂಧೆಗೆ ದಾಳಿ ನಡೆಸಿ, ಐದು ಮಂದಿಯನ್ನು ಬಂಧಿಸಿದ್ದಾರೆ. 


ನಂದನ್ ನಾಯ್ಕ್ (35), ಪ್ರಶಾಂತ್ (47), ಅನಿಲ್ ಕುಮಾರ್ (44), ದಿನಕರ ಆಳ್ವ (44), ಅನಿಲ್ ಕುಮಾರ್ (42) ಬಂಧಿತರು. ಅವರಿಂದ ಮಟ್ಕಾ ಆಟಕ್ಕೆ ಬಳಸಿದ್ದ ನಗದು 30,310 ರೂ. ಹಾಗೂ ಐದು ಮೊಬೈಲ್ ಫೋನ್, ಮಟ್ಕಾ ಬರೆಯುವ ಚೀಟಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಮಂಗಳೂರು ಉತ್ತರ, ದಕ್ಷಿಣ, ಬರ್ಕೆ, ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The Ccb Mangalore police have raided the hideouts of illegal hooch makers. Five persons have been arrested.