ಬ್ರೇಕಿಂಗ್ ನ್ಯೂಸ್
06-03-21 11:37 am Headline Karnataka News Network ಕ್ರೈಂ
ಚಿತ್ರದುರ್ಗ, ಮಾ.6 : ಅವರು ಅಂಚೆ ಇಲಾಖೆ ನೌಕರರು. ಗೆಳೆಯರ ಮನೆಯಲ್ಲಿ ಊಟ ಮುಗಿಸಿ ಮನೆ ಕಡೆ ಹೊರಟಿದ್ದರು. ಹೆದ್ದಾರಿ ಮಧ್ಯೆ ಟರ್ನ್ ಆಗುವಾಗ ಮಂಗಳಮುಖಿಯರ ಗುಂಪು ಎದುರಾಗಿತ್ತು. ಆ ಬಳಿಕ ಮನೆಗೆ ಹೊರಟವ್ರು ಸೇರಿದ್ದು ಜಿಲ್ಲಾಸ್ಪತ್ರೆಗೆ.
ಯೆಸ್.. ಚಿತ್ರದುರ್ಗದ ಅಂಚೆ ಇಲಾಖೆ ನೌಕರರಾದ ಅನಿಲ್ ಮತ್ತು ಶಂಭುಲಿಂಗಪ್ಪ. ಗುರುವಾರ ಸಂಜೆ ವೇಳೆಗೆ ಚಿತ್ರದುರ್ಗ ತಾಲೂಕಿನ ಯಳಗೋಡು ಗ್ರಾಮದ ಗೆಳೆಯನ ಮನೆಗೆ ಊಟಕ್ಕೆ ಹೋಗಿ ವಾಪಸ್ ಆಗ್ತಿದ್ರು. ಈ ವೇಳೆ ಕಾತ್ರಾಳ್ ಕೆರೆಯ ಬಳಿ ಎದುರಾದ ಮಂಗಳಮುಖಿಯರ ಗುಂಪು ಬೈಕ್ಗೆ ಸೈಡ್ ನೀಡಿದಂತೆ ನಟಿಸಿ ದಿಢೀರ್ ಅಡ್ಡ ಬಂದಿದೆ. ಬಳಿಕ ಬೈಕಿನಲ್ಲಿದ್ದ ಇಬ್ಬರನ್ನು ಕೆಳಗೆ ಬೀಳಿಸಿ ಚಪ್ಪಲಿ, ಕಲ್ಲು ಸೇರಿದಂತೆ ಕೈಗೆ ಸಿಕ್ಕದ್ದನ್ನು ತೆಗೆದುಕೊಂಡು ಭೀಕರವಾಗಿ ಹಲ್ಲೆ ನಡೆಸಿದೆ. ಕೊರಳಲ್ಲಿದ್ದ ಚೈನು, ಉಂಗುರು, ಹಣ ಕಸಿದುಕೊಂಡಿದೆ. ಅಷ್ಟರಲ್ಲೇ ಸಮೀಪದ ಡಾಬಾದಲ್ಲಿದ್ದ ಹುಡುಗರು ಸ್ಥಳಕ್ಕೆ ಬರ್ತ್ತಿದ್ದಂತೆ ಆಟೋ ಹತ್ತಿ ಮಂಗಳಮುಖಿಯರ ಗ್ಯಾಂಗ್ ಎಸ್ಕೇಪ್ ಆಗಿದೆಯಂತೆ.
ಮಾರಣಾಂತಿಕವಾಗಿ ಹಲ್ಲೆಗೊಳಗಾಗಿರುವ ಅಂಚೆ ಇಲಾಖೆ ನೌಕರರು ಇಗ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೀತ್ತಿದ್ದಾರೆ. ಈ ಬಗ್ಗೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಗಾಯಾಳುಗಳಿಬ್ಬರೂ ಒಳ್ಳೆಯ ನಡತೆಯುಳ್ಳವರು ಅನ್ನೋದು ಸ್ಥಳೀಯರ ಅಭಿಪ್ರಾಯ. ಆದ್ರೆ ಇಂಥವರ ಮೇಲೆ ಮಂಗಳಮುಖಿಯರು ವಿನಾಕಾರಣ ಹಲ್ಲೆ ಮಾಡಿದ್ದಲ್ದೆ, ಬೆಲೆಬಾಳುವ ವಸ್ತುಗಳನ್ನ ಕದ್ದೊಯ್ದ ಆರೋಪವೂ ಕೇಳಿಬಂದಿದೆ. ಹೀಗೆ ಕೆಲವು ಮಂಗಳಮುಖಿಯರ ಕಾಟದಿಂದಾಗಿ ಹೈವೇಗಳಲ್ಲಿ ಭಯದಲ್ಲೇ ಓಡಾಡುವಂತಾಗಿದೆ ಅನ್ನೋದು ಸ್ಥಳೀಯರ ಆರೋಪ.
ಒಟ್ಟಾರೆ ಕೋಟೆನಾಡು ಚಿತ್ರದುರ್ಗ ನಗರದ ಹೈವೇಗಳಲ್ಲಿ ಮಂಗಳಮುಖಿಯರ ಹಾವಳಿ ಹೆಚ್ಚಾಗುತ್ತಿದೆ. ದುಡ್ಡಿಗೆ ಪೀಡಿಸುತ್ತಿದ್ದವರು ಈಗ ರೌಡಿಸಂಗೆ ಇಳಿದಿದ್ದಾರೆಂಬ ಆರೋಪಗಳು ಕೇಳಿಬರುತ್ತಿವೆ. ಪೊಲೀಸರು ಈಗಲಾದ್ರು ಎಚ್ಚೆತ್ತುಕೊಂಡು, ಸತ್ಯಾಸತ್ಯತೆ ಪರಿಶೀಲಿಸಬೇಕಿದೆ. ಹೈವೇಗಳಲ್ಲಿ ಓಡಾಡುವ ಸವಾರರಿಗೆ ರಕ್ಷಣೆ ಒದಗಿಸಬೇಕಿದೆ.
Two youths have been hospitalized after a gang of Eunuchs attacked two youths brutally for robbery in Chitradurga.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm