ಜನಾಭಿವೃದ್ಧಿ ರಕ್ಷಣಾ ವೇದಿಕೆ ಹೆಸರಲ್ಲಿ ಹಣಕ್ಕಾಗಿ ಡಿಮಾಂಡ್ ; ರಾಜ್ಯಾಧ್ಯಕ್ಷ ಸೇರಿ ಮೂವರು ಬಂಧನ

10-03-21 12:56 pm       Bangalore Correspondent   ಕ್ರೈಂ

ಯುವಕರನ್ನು ಕಿಡ್ನಾಪ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಕರ್ನಾಟಕ ಜನಾಭಿವೃದ್ಧಿ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು, ಮಾ.10 : ಕರ್ನಾಟಕ ಜನಾಭಿವೃದ್ಧಿ ರಕ್ಷಣಾ ವೇದಿಕೆ ಹೆಸರಿನಲ್ಲಿ ಯುವಕರನ್ನು ಕಿಡ್ನಾಪ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಸಂಘಟನೆಯ ರಾಜ್ಯಾಧ್ಯಕ್ಷ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. 

ಜನಾಭಿವೃದ್ಧಿ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಾಬುರೆಡ್ಡಿ, ಸಹಚರರಾದ ಲಕ್ಷ್ಮೀಪತಿ, ನಾಗೇಶ್ ಬಂಧಿತರು. ಈ ಬಗ್ಗೆ ದೇವನಹಳ್ಳಿಯ ಸೂಲಿಬೆಲೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಪಿಎಸ್ಐ ರಮೇಶ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ. ಕಾರಿಗೆ ಕಪ್ಪು ಬಣ್ಣದ ಟಿಂಟ್ ಇರುವ ಗ್ಲಾಸ್ ಹಾಕಿ, ಕಿಡ್ನಾಪ್ ಮಾಡಲಾಗಿತ್ತು. ಆರೋಪಿಗಳು ಕರ್ನಾಟಕ ಜನಾಭಿವೃದ್ದಿ ರಕ್ಷಣಾ ವೇದಿಕೆ ಎಂಬ ಹೆಸರಿನಲ್ಲಿ ಸಂಘಟನೆ ಕಟ್ಟಿಕೊಂಡು ಅಮಾಯಕರ ಜೀವ ಹಿಂಡುತ್ತಿದ್ದರು. ಇವರಿಂದ ಹಲವಾರು ಮಂದಿ ಪೀಡನೆಗೆ ಒಳಗಾಗಿದ್ದು ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. 

ಇದೀಗ ಮೂವರನ್ನು ವಶಕ್ಕೆ ಪಡೆದು ಸೂಲಿಬೆಲೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮತ್ತಷ್ಟು ಕಡೆ ಇದೇ ರೀತಿ ಹಣ ಕಿತ್ತಿರುವ ಶಂಕೆ ವ್ಯಕ್ತವಾಗಿದೆ.

Three including president of Karnataka Janaabhivrudhi rakshan vedike state president arrested in kidnap case in Bangalore.