ಕಸ ಎತ್ತುವ ಪೌರ ಕಾರ್ಮಿಕರ ಮೇಲೆ ಇಲೆಕ್ಟ್ರಾನಿಕ್ ಶಾಪ್ ಮಾಲಕನಿಂದ ಹಲ್ಲೆ !

13-03-21 11:24 am       Udupi Correspondent   ಕ್ರೈಂ

ಕಸ ಹೆಕ್ಕಲು ಬಂದಿದ್ದ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ಘಟನೆ ಉಡುಪಿ ನಗರದ ಬಸ್ ನಿಲ್ದಾಣ ಪರಿಸರದಲ್ಲಿ ನಡೆದಿದೆ. 

ಉಡುಪಿ, ಮಾ.13: ಕಸ ಹೆಕ್ಕಲು ಬಂದಿದ್ದ ಪೌರ ಕಾರ್ಮಿಕರ ಮೇಲೆ ಇಲೆಕ್ಟ್ರಾನಿಕ್ ಶಾಪ್ ಮಾಲೀಕ ಮತ್ತು ಸಿಬಂದಿ ಸೇರಿ ಹಲ್ಲೆ ನಡೆಸಿದ ಘಟನೆ ಉಡುಪಿ ನಗರದ ಬಸ್ ನಿಲ್ದಾಣ ಪರಿಸರದಲ್ಲಿ ನಡೆದಿದೆ. 

ಒಣ ಕಸ, ಹಸಿ ಕಸದ ಬಗ್ಗೆ ಕೇಳಿದ ಪೌರ ಕಾರ್ಮಿಕರ ಪ್ರಶ್ನೆಗೆ, ಇಲೆಕ್ಟ್ರಾನಿಕ್ ಶಾಪ್ ಓನರ್ ಎಗರಾಡಿದ್ದಾನೆ. ಕಸ ಎತ್ತುವ ವಾಹನದ ಚಾಲಕ ಸಂಜು ಮಾದಾರ ಮತ್ತು ಇನ್ನೊಬ್ವ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಘಟನೆಯನ್ನು ಸ್ಥಳೀಯರು ವಿಡಿಯೋ ಮಾಡಿದ್ದು ಅದು ವೈರಲ್ ಆಗುತ್ತಿದ್ದಂತೆ ಅಂಗಡಿ ಮಾಲೀಕರ ವಿರುದ್ಧ ಆಕ್ರೋಶ ಕೇಳಿಬಂದಿದೆ. 

ವಿಷಯ ತಿಳಿದು ನಗರಸಭೆ ಆರೋಗ್ಯಧಿಕಾರಿ ಕರುಣಾಕರ್ ಸ್ಥಳಕ್ಕೆ ಬಂದಿದ್ದು ವಿಚಾರಣೆ ನಡೆಸಿದ್ದಾರೆ. ಅಧಿಕಾರಿ ಪ್ರಶ್ನೆ ಮಾಡುತ್ತಿದ್ದಾಗಲೇ ಪೌರ ಕಾರ್ಮಿಕರ ಮೇಲೆ ಮತ್ತೆ ಅಂಗಡಿ ಮಾಲೀಕ ಹಲ್ಲೆಗೆ ಮುಂದಾಗಿದ್ದಾನೆ. 

ವಿಡಿಯೋ ಮತ್ತು ಪೌರ ಕಾರ್ಮಿಕರಿಗೆ ಹಲ್ಲೆ ನಡೆಸಿದ ಘಟನೆ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದೆ. ಟ್ವಿಟರ್ ನಲ್ಲಿಯೂ ಆಕ್ರೋಶ ವ್ಯಕ್ತವಾಗಿದೆ. ‌ಟ್ವಿಟರ್ ನಲ್ಲಿ ಸಾರ್ವಜನಿಕರ ಪ್ರಶ್ನೆಗೆ ಉತ್ತರ ನೀಡಿರುವ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ಎಸ್ಪಿ ಅವರಲ್ಲಿ ಈ ಬಗ್ಗೆ ಮಾತನಾಡಿದ್ದೇನೆ. ಆರೋಪಿಗಳನ್ನು ಬಚಾವ್ ಮಾಡಲಾಗುತ್ತಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಶಿಸ್ತು ಕ್ರಮಕ್ಕೆ ಒತ್ತಾಯಿಸಿದ್ದೇನೆ. ಇದರ ಜೊತೆಗೆ ನಮ್ಮ ನಗರವನ್ನು ಕ್ಲೀನ್ ಮಾಡುವ ಪೌರ ಕಾರ್ಮಕರಿಗೆ ರಕ್ಷಣೆ ನೀಡುವಂತೆ ಒತ್ತಾಯ ಮಾಡಿದ್ದೇನೆ ಎಂದು ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ. 

ಘಟನೆ ಸಂಬಂಧಿಸಿ ಉಡುಪಿ ಪೊಲೀಸರು ನೇಜಾರು ನಿವಾಸಿ ಇಸ್ಮಾಯಿಲ್ (55) ಮತ್ತು ಹೂಡೆಯ ಸುಹೈಲ್ (28) ಎಂಬವರನ್ನು ಬಂಧಿಸಿದ್ದಾರೆ.

Video:

An owner of a reputed electronic shop and his staff in Udupi reportedly attacked a civic worker over a Garbage issue near Udupi City Bus Stand.