ಚಿನ್ನ ತುಂಬಿದ ಮಾತ್ರೆಗಳನ್ನು ನುಂಗಿದ್ದ ಪ್ರಯಾಣಿಕ ಅರೆಸ್ಟ್​ ; 13 ಲಕ್ಷ ರೂ. ಮೌಲ್ಯದ ಬಂಗಾರ ವಶಕ್ಕೆ

18-03-21 10:49 am       Headline Karnataka News Network   ಕ್ರೈಂ

ದುಬೈನಿಂದ ಆಗಮಿಸಿದ ಪ್ರಯಾಣಿಕನೊಬ್ಬನಿಂದ 13 ಲಕ್ಷ ರೂ ಮೌಲ್ಯದ ಚಿನ್ನ ಹಾಗೂ 19.85 ಲಕ್ಷದ ಎಲೆಕ್ಟ್ರಾನಿಕ್​​ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಚೆನ್ನೈ,ಮಾ.18: ಪ್ರಯಾಣಿಕನೊಬ್ಬನಿಂದ 13 ಲಕ್ಷ ರೂ. ಮೌಲ್ಯದ 281 ಗ್ರಾಂ ಚಿನ್ನ ಹಾಗೂ 19.85 ಲಕ್ಷದ ಎಲೆಕ್ಟ್ರಾನಿಕ್​​ ವಸ್ತುಗಳನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಮಾರ್ಚ್ 10 ರಂದು ದುಬೈನಿಂದ ಆಗಮಿಸಿದ ಮೊಹಮ್ಮದ್ ರಿಯಾಸ್​ ಪೇಸ್ಟ್​ ರೂಪದಲ್ಲಿನ ಚಿನ್ನವನ್ನು ತುಂಬಿದ ಮಾತ್ರೆ​ಗಳನ್ನು ​​ನುಂಗಿಕೊಂಡು ಬಂದಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಆತನ ಬ್ಯಾಗ್​ನಲ್ಲಿದ್ದ ನಾಲ್ಕು ಐಫೋನ್, ಆರು ಆ್ಯಪಲ್ ವಾಚ್‌ಗಳು ಹಾಗೂ ಐದು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ನುಂಗಿದ ಕ್ಯಾಪ್ಸುಲ್‌ಗಳಿಂದ ಚಿನ್ನವನ್ನು ವಶಪಡಿಸಿಕೊಳ್ಳಲು ರಿಯಾಸ್‌ನನ್ನು ಅದೇ ದಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಸುಮಾರು ಒಂದು ವಾರದ ನಂತರ 372 ಗ್ರಾಂ ತೂಕದ 34 ಸಿಲಿಂಡರ್​ ಆಕಾರದ ಮಾತ್ರೆಗಳನ್ನು ಹೊರತೆಗೆಯಲಾಗಿದ್ದು, ಅದರೊಳಗೆ 281 ಗ್ರಾಂ ಬಂಗಾರವಿತ್ತು. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

The Chennai Air Customs has seized gold from swallowed capsules and electronics goods worth Rs 19.85 lakhs from the Chennai Airport, informed the Chennai Air Customs on Wednesday.