ಬ್ರೇಕಿಂಗ್ ನ್ಯೂಸ್
19-03-21 12:55 pm Mangalore Correspondent ಕ್ರೈಂ
Photo credits : Representative Image
ಮಂಗಳೂರು, ಮಾ.19:ಮಂಗಳೂರಿನ ಸಿಸಿಬಿ ಪೊಲೀಸರ ಕಾರು ಮಾರಾಟ ಪ್ರಕರಣದ ವಿಚಾರದಲ್ಲಿ ಬೆಂಗಳೂರಿನ ಸಿಐಡಿ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ. ಮಾರಾಟ ಮಾಡಿರುವ ಜಾಗ್ವಾರ್ ಕಾರನ್ನು ಸಿಐಡಿ ಅಧಿಕಾರಿಗಳು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದು, ಖರೀದಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಪೊಲೀಸರು ವಶಕ್ಕೆ ಪಡೆದ ಕಾರನ್ನು ದಿವ್ಯದರ್ಶನ್ ಎಂಬಾತ ಮಧ್ಯವರ್ತಿಯಾಗಿ ಡೀಲ್ ಮಾಡಿದ್ದ. ಕಾರು ಖರೀದಿಸಿದ ತೇಜಿಂದರ್ ಸಿಂಗ್ ತನಗೆ ಕಾರು ತಂದುಕೊಟ್ಟಿದ್ದು ಮತ್ತು ಡೀಲ್ ಕುದುರಿಸಿದ್ದು ಮಧ್ಯವರ್ತಿ ಎನ್ನುವ ವಿಚಾರವನ್ನು ಬಾಯಿಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಡೀಲ್ ರಾಜ ದಿವ್ಯದರ್ಶನ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ಮಾಹಿತಿ ಪ್ರಕಾರ, ಹೈಎಂಡ್ ಜಾಗ್ವಾರ್ ಕಾರನ್ನು ಕೇವಲ 14.5 ಲಕ್ಷಕ್ಕೆ ಮಾರಾಟ ಮಾಡಲಾಗಿತ್ತು ಎನ್ನಲಾಗುತ್ತಿದೆ. ಈ ಮಾಹಿತಿಯನ್ನು ಖರೀದಿದಾರ ತೇಜಿಂದರ್ ಸಿಂಗ್ ಅಧಿಕಾರಿಗಳ ಬಳಿ ಹಂಚಿಕೊಂಡಿದ್ದಾನೆ. ಇದೇ ಕಾರಣಕ್ಕೆ ಮಂಗಳೂರು ಪೊಲೀಸರ ಬ್ರೋಕರ್ ಆಗಿದ್ದ ದಿವ್ಯದರ್ಶನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ಲಂಚದ ಹಣ ಸಂಗ್ರಹ ಮತ್ತು ಈ ರೀತಿಯ ಡೀಲಿಂಗ್ ನಡೆಸುತ್ತಿದ್ದ ಕಾರಣಕ್ಕೆ ಡಿಪಾರ್ಟ್ಮೆಂಟ್ ಒಳಗೆ ಈತನಿಗೆ ಡೀಡಿ ಎಂದೇ ನಿಕ್ ನೇಮ್ ಇತ್ತು.
ಕಾರು ಮಾರಾಟದಲ್ಲಿ ಬಂದ ಹಣವನ್ನು ಯಾರೆಲ್ಲಾ ಹಂಚಿಕೊಂಡಿದ್ದಾರೆ ಎಂಬ ಬಗ್ಗೆ ಆತನ ಬಾಯಿ ಬಿಡಿಸುತ್ತಿದ್ದಾರೆ. ಈ ಹಿಂದೆ ಸಿಸಿಬಿಯಲ್ಲಿ ಎಸ್ಐ ಆಗಿದ್ದ ಕಬ್ಬಾಳರಾಜ್ ಮತ್ತು ನಾರ್ಕೋಟಿಕ್ ಠಾಣೆಯಲ್ಲಿ ಇನ್ ಸ್ಪೆಕ್ಟರ್ ಆಗಿದ್ದ ರಾಮಕೃಷ್ಣ ಎಷ್ಟು ಹಣ ಪಡೆದಿದ್ದಾರೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆರಂಭದಲ್ಲಿ ರಾಮಕೃಷ್ಣ ಕಾರು ಡೀಲಿಂಗ್ ವ್ಯವಹಾರದಲ್ಲಿ ಭಾಗಿಯಾಗಿಲ್ಲ ಎನ್ನಲಾಗಿತ್ತು. ಆದರೆ, ಸಿಸಿಬಿಯ ಗೋಲ್ಮಾಲ್ ತಂಡಕ್ಕೆ ಸಾಥ್ ನೀಡಿದ್ದು ಮತ್ತು ವಶಕ್ಕೆ ಪಡೆದ ಕಾರನ್ನು ಎಫ್ಐಆರ್ ನಲ್ಲಿ ತೋರಿಸದೆ ಕರ್ತವ್ಯ ಲೋಪ ಎಸಗಿದ್ದರು ಎಂಬ ಆರೋಪಿಗಳಿದ್ದವು. ಸದ್ಯಕ್ಕೆ ಇವರಿಬ್ಬರು ಸೇರಿದಂತೆ ನಾಲ್ವರನ್ನು ಸಸ್ಪೆಂಡ್ ಮಾಡಲಾಗಿದೆ.
ಡೀಲಿನಲ್ಲಿ ಪತ್ರಕರ್ತರಿಗೆಷ್ಟು ಪಾಲು ?
ಸಿಸಿಬಿಯ ಗೋಲ್ಮಾಲ್ ತಂಡಕ್ಕೆ ಮಂಗಳೂರಿನ ಇಬ್ಬರು ಪತ್ರಕರ್ತರು ಸಾಥ್ ನೀಡಿದ್ದರು ಎನ್ನೋ ವಿಚಾರ ಬಯಲಾಗಿತ್ತು. ದಿವ್ಯದರ್ಶನ್ ಇವೆಲ್ಲದಕ್ಕೂ ಕೊಂಡಿಯಾಗಿದ್ದ ಮತ್ತು ಲಾಡ್ಜ್ ಗಳಲ್ಲಿಯೂ ಪೊಲೀಸ್ ಅಧಿಕಾರಿಗಳಿಗೆ ಬೇಕು- ಬೇಡಗಳನ್ನು ಪೂರೈಸುತ್ತಿದ್ದ ಎನ್ನುವ ಮಾಹಿತಿಗಳಿದ್ದವು. ಈಗ 14 ಲಕ್ಷ ಹಣದಲ್ಲಿ ಪತ್ರಕರ್ತರಿಗೆಷ್ಟು ಬಂದಿದೆ, ಪೊಲೀಸರಿಗೆ ಎಷ್ಟು ಸಂದಾಯವಾಗಿದೆ ಎನ್ನೋದ್ರ ಬಗ್ಗೆ ದಿವ್ಯದರ್ಶನ್ ಬಾಯಿಬಿಟ್ಟರೆ ಹಣ ಪಡೆದಿರುವ ಎಲ್ಲರಿಗೂ ಶಾಸ್ತಿ ಆಗಲಿದೆ. ಇಲ್ಲಿ ಕಾರು ಖರೀದಿಸಿದ ವ್ಯಕ್ತಿಗಿಂತಲೂ ಬ್ರೋಕರ್ ಕೆಲಸ ಮಾಡಿದ್ದವರು ಬಂಧನ ಆಗುವ ಸಾಧ್ಯತೆ ಹೆಚ್ಚು. ಖರೀದಿದಾರನಿಗೆ ಗೋಲ್ಮಾಲ್ ಪ್ರವರ ಗೊತ್ತಿರದ ಕಾರಣ ಆತನನ್ನು ವಿಚಾರಣೆ ನಡೆಸಿ, ಬಿಟ್ಟುಬಿಡುವ ಸಾಧ್ಯತೆಯೂ ಇದೆ.
ಇದೇ ವೇಳೆ, ಮನಿ ಡಬ್ಲಿಂಗ್ ಪ್ರಕರಣದ ಸೂತ್ರಧಾರರು ಎನ್ನಲಾದ, ಎಲಿಯಾ ಕನ್ ಸ್ಟ್ರಕ್ಷನ್ ಹೆಸರಿನಲ್ಲಿ ಗೋಲ್ಮಾಲ್ ವಹಿವಾಟು ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನೂ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ಬಚಾವ್ ಮಾಡಲು ಸಿಸಿಬಿ ತಂಡ ಎಷ್ಟು ಹಣ ಪಡೆದಿತ್ತು ಹಾಗೂ ಗೋಲ್ಮಾಲ್ ಮಾಡಿದ್ದ ಹಣವನ್ನು ಕೇರಳ ಮತ್ತು ಕರ್ನಾಟಕದ ಎಲ್ಲೆಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಮಾಹಿತಿ ಕಲೆಹಾಕುತ್ತಿದ್ದಾರೆ.
CID seize Luxury car Jaguar in Bangalore that was missing from CCB police custody in Mangalore. Mediator Divya Darshan has been taken into custody.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm