ಬ್ರೇಕಿಂಗ್ ನ್ಯೂಸ್
23-03-21 12:39 pm Mangalore Correspondent ಕ್ರೈಂ
ಮಂಗಳೂರು, ಮಾ.23: ಮನೆ ಬಾಡಿಗೆ ಕೇಳುವ ನೆಪದಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಮನೆಯಲ್ಲಿದ್ದ ಚಿನ್ನದ ಸರ ಎಗರಿಸಿದ ಪ್ರಕರಣ ನಡೆದಿದ್ದು, ಆರೋಪಿಯನ್ನು ಕೋಣಾಜೆ ಪೊಲೀಸರು ಬಂಧಿಸಿದ್ದಾರೆ.
ಮುಜೀಬ್ ರೆಹಮಾನ್ (30) ಬಂಧಿತ ಆರೋಪಿ. ಮೂಲತಃ ಮಂಜೇಶ್ವರದ ಉಪ್ಪಳ ನಿವಾಸಿಯಾಗಿರುವ ಈತ ನರಿಂಗಾನ ಗ್ರಾಮದ ಕಲ್ಲರಕೋಡಿ ಎಂಬಲ್ಲಿ ವಾಸವಿದ್ದ. ಮಾ.16ರಂದು ಬೆಳ್ಮ ಗ್ರಾಮದ ನಿತ್ಯಾನಂದ ನಗರದಲ್ಲಿ ಮನೆ ಬಾಡಿಗೆ ಕೇಳುವ ನೆಪದಲ್ಲಿ ಮೂರು ಮನೆಗೆ ಹೋಗಿದ್ದಾನೆ. ಅಜ್ಜಿ ಮಾತ್ರ ಇದ್ದ ಮನೆಗೆ ಬಂದಿದ್ದ ಯುವಕ ಮುಜೀಬ್, ಮನೆ ಬಾಡಿಗೆ ಕೊಡುತ್ತೀರಾ ಎಂದು ಕೇಳಿದ್ದಾನೆ. ಇಲ್ಲಪ್ಪಾ ನಾವೇ ಬಾಡಿಗೆ ಮನೆಯಲ್ಲಿದ್ದೇವೆ. ನಾವು ಖಾಲಿ ಮಾಡಿದಾಗ ಹೇಳುತ್ತೀವಿ ಎಂದಿದ್ದಾರೆ. ಅಲ್ಲದೆ, ಆತನ ನಂಬರ್ ಬರೆದಿಡುವಂತೆ ಹೇಳಿದ್ದಾರೆ. ಇದೇ ವೇಳೆ, ನಾನೊಮ್ಮೆ ಮನೆ ಒಳಗೆ ನೋಡುತ್ತೇನೆ ಎಂದು ಒಳಗೆ ಬಂದು ಕೋಣೆ ಒಳಗೆಲ್ಲ ಸುತ್ತಾಡಿದ್ದಾನೆ.
ಇದೇ ವೇಳೆ, ಮನೆಯ ಒಳಗಿಟ್ಟಿದ್ದ ಬ್ಯಾಗಿನಲ್ಲಿದ್ದ ಎರಡು ಚಿನ್ನದ ಸರವನ್ನು ಕಳವು ಮಾಡಿದ್ದಾನೆ. ಬಳಿಕ ಅಜ್ಜಿಯಲ್ಲಿ ಮತ್ತೆ ಬರುತ್ತೇನೆ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದ. ಮನೆಗೆ ಮರಳಿದ್ದ ಸೋದರಿಯರು, ತಪಾಸಣೆ ನಡೆಸಿದಾಗ ಮನೆಯಲ್ಲಿದ್ದ ಚಿನ್ನದ ಸರ ನಾಪತ್ತೆಯಾಗಿರುವುದು ಕಂಡುಬಂದಿದೆ. ಕೋಣಾಜೆ ಠಾಣೆಗೆ ವೀಣಾ ಎಂಬವರು ದೂರು ನೀಡಿದ್ದರು.
ಪೊಲೀಸರು ಸಿಸಿಟಿವಿ ಆಧರಿಸಿ ತನಿಖೆ ನಡೆಸಿದಾಗ, ಯುವಕನೊಬ್ಬ ಅಲ್ಲಿನ ಮೂರ್ನಾಲ್ಕು ಮನೆಗಳಿಗೆ ತೆರಳಿದ್ದು ಕಂಡುಬಂದಿದೆ. ಅಲ್ಲದೆ, ಮಾಡೂರಿನಲ್ಲೂ ಇದೇ ರೀತಿ ಕೆಲವು ಮನೆಗಳಿಗೆ ತೆರಳಿದ್ದು ಕಂಡುಬಂದಿತ್ತು. ಚಹರೆ ಆಧರಿಸಿ, ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ. ಮೂರುವರೆ ಪವನ್ ತೂಕದ ಕರಿಮಣಿ ಸರ ಮತ್ತು ಒಂದು ಪವನ್ ತೂಕದ ಸರ ಕಳವಾಗಿತ್ತು. ಅದನ್ನು ಪೊಲೀಸರು ಆರೋಪಿಯಿಂದ ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಆತನ ಬಳಿಯಿದ್ದ ಏಕ್ಟಿವಾ ಹೊಂಡಾ ವಶಕ್ಕೆ ಪಡೆದಿದ್ದಾರೆ.
police arrest thief who flee with gold from a house in Ullal at Mangalore. The arrested has been identified as Majib.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 02:28 pm
HK News Desk
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
15-07-25 01:13 pm
HK News Desk
Mangalore Crime, Police: ದುಬೈನಲ್ಲಿ ವಹಿವಾಟು ;...
15-07-25 11:38 am
ಮ್ಯಾಟ್ರಿಮನಿ ಸೈಟಲ್ಲಿ ಸಿಕ್ಕ ಗೆಳತಿಯಿಂದಲೇ ಮೋಸ ; ಆ...
13-07-25 05:23 pm
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm