ಬ್ರೇಕಿಂಗ್ ನ್ಯೂಸ್
31-03-21 04:25 pm Mangalore Correspondent ಕ್ರೈಂ
ಮಂಗಳೂರು, ಮಾ.31: ಮೂಡುಬಿದ್ರೆ ಮತ್ತು ಬಜ್ಪೆ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಭಾರೀ ದರೋಡೆಗೆ ಪ್ರಯತ್ನ ನಡೆದಿದೆ. ಎರಡು ಕಾರಿನಲ್ಲಿ ಬಂದಿದ್ದ ಏಳೆಂಟು ಮಂದಿಯಿದ್ದ ತಂಡ, ಎರಡು ಮನೆಗಳಿಗೆ ಹಾನಿಗೈದು ಡಕಾಯಿತಿಗೆ ಯತ್ನಿಸಿದೆ. ಕಾರು ಮತ್ತು ಬೈಕ್ ಸವಾರನನ್ನು ಅಡ್ಡಹಾಕಿ ದರೋಡೆ ನಡೆಸಿದೆ.
ಮಂಗಳೂರು- ಮೂಡುಬಿದ್ರೆ ಹೆದ್ದಾರಿಯ ತೋಡಾರಿನಲ್ಲಿ ರಸ್ತೆ ಬದಿಯಿರುವ ಅರುಣ್ ಎಂಬವರ ಮನೆಯೊಂದಕ್ಕೆ ಕಲ್ಲೆಸೆದು ಹಾನಿಗೊಳಿಸಿದ್ದು ಹೊರಗೆ ನಿಲ್ಲಿಸಿದ್ದ ಸ್ವಿಫ್ಟ್ ಕಾರಿಗೆ ಹಾನಿಗೈದಿದ್ದಾರೆ. ಆಗಂತುಕರು ಮನೆಗೆ ಕಲ್ಲೆಸೆದ ಸಂದರ್ಭದಲ್ಲಿ ಮನೆಯವರು ಲೈಟ್ ಆನ್ ಮಾಡಿ ಬೊಬ್ಬೆ ಹೊಡೆದಿದ್ದು, ಕಳ್ಳರ ತಂಡ ಅಲ್ಲಿಂದ ಕಾರಿನಲ್ಲಿ ಪರಾರಿಯಾಗಿದೆ.
ಮೂಡುಬಿದ್ರೆ ಬಳಿಯ ಗಾಂಧಿ ನಗರದಲ್ಲಿ ಹರಿಶ್ಚಂದ್ರ ನಾಯ್ಕ್ ಎಂಬವರ ಮನೆಗೂ ಹಾನಿ ಮಾಡಿದ್ದಾರೆ. ಅಂಗಳದಲ್ಲಿ ನಿಲ್ಲಿಸಿದ್ದ ಓಮ್ನಿ ಕಾರಿಗೆ ಕಲ್ಲೆಸೆದು ಹಾನಿಗೈದಿದ್ದು, ಮನೆ ಬಾಗಿಲಿಗೆ ಕಾಲಿನಿಂದ ತುಳಿದು ಹಾನಿ ಮಾಡಿದ್ದಾರೆ. ಕಾರಿನಲ್ಲಿದ್ದ 4 ಸಾವಿರ ರೂ. ಹಣವನ್ನು ಕಳವು ಮಾಡಿದ್ದಾರೆ. ಎರಡು ಕಡೆಯೂ ಕಲ್ಲು ಹೊಡೆದ ಶಬ್ದಕೇಳಿ ಮನೆಯವರು ಎದ್ದು ಬೊಬ್ಬೆ ಹಾಕಿದಾಗ ಕಳ್ಳರು ಪರಾರಿಯಾಗಿದ್ದಾರೆ.
ಇದೇ ವೇಳೆ, ಕಡಂದಲೆಯ ಬಿ.ಸಿ.ರೋಡಿನಲ್ಲಿ ನಿರ್ಜನ ಪ್ರದೇಶದಲ್ಲಿ ತೆರಳುತ್ತಿದ್ದ ಬೈಕ್ ಸವಾರನನ್ನು ತಡೆದು ತಲವಾರು ತೋರಿಸಿ ಕಣ್ಣಿಗೆ ಮೆಣಸಿನ ಪುಡಿ ಎರಚಿ ಆತನಲ್ಲಿದ್ದ ನಗದು ಮತ್ತು ಬೈಕನ್ನು ಕಿತ್ತುಕೊಂಡು ಹೋಗಿದ್ದಾರೆ. ಗುರುಪುರ ಬಳಿಯ ಬೆಳ್ಳಿಬೆಟ್ಟು ಎಂಬಲ್ಲಿ ಆಲ್ಟೋ ಕಾರನ್ನು ತಡೆದು, ಪ್ರಯಾಣಿಕರಲ್ಲಿದ್ದ ಹಣ ಮತ್ತು ಮೊಬೈಲನ್ನು ದೋಚಿದ ಘಟನೆ ನಡೆದಿದೆ. ಈ ಪ್ರಕರಣ ಬಜ್ಪೆ ಠಾಣೆಯಲ್ಲಿ ದಾಖಲಾಗಿದೆ.
ಒಂದೇ ರಾತ್ರಿ ನಾಲ್ಕು ಕಡೆಗಳಲ್ಲಿ ಪ್ರತ್ಯೇಕ ಘಟನೆ ನಡೆದಿದ್ದು, ಮಂಗಳೂರು – ಮೂಡುಬಿದ್ರೆಯ ನಿರ್ಜನ ರಸ್ತೆಯನ್ನು ಟಾರ್ಗೆಟ್ ಮಾಡಿಕೊಂಡು ಒಂದೇ ತಂಡ ಕೃತ್ಯ ಎಸಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಕೃತ್ಯ ನಡೆದಿರುವ ನಾಲ್ಕು ಕಡೆಗಳಿಗೂ ಕಮಿಷನರ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ನಡೆದಿರುವುದನ್ನು ನೋಡಿದರೆ, ಕೃತ್ಯದಲ್ಲಿ ಏನೋ ವಿಕ್ಷಿಪ್ತ ವ್ಯಕ್ತಿಗಳು ಮಾಡಿರುವಂತೆ ಕಂಡುಬಂದಿದೆ. ಗಾಂಜಾ ನಶೆಯಲ್ಲಿ ಕೃತ್ಯ ಎಸಗಿದ್ದಾರೋ ಅನ್ನುವ ಅನುಮಾನವೂ ಕೇಳಿಬಂದಿದೆ.
ಕಳೆದ ಒಂದು ವಾರದಲ್ಲಿ ಇದೇ ರೀತಿ ಎರಡು ಮೂರು ಪ್ರಕರಣಗಳು ನಡೆದಿರುವ ಬಗ್ಗೆ ಮೂಡುಬಿದ್ರೆ ಠಾಣೆಯಲ್ಲಿ ದಾಖಲಾಗಿದ್ದು. ಆರೋಪಿಗಳು ತುಳು ಮತ್ತು ಬ್ಯಾರಿ ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ ಬಜ್ಪೆ ಮತ್ತು ಮೂಡುಬಿದ್ರೆ ಪೊಲೀಸರ ಜೊತೆಗೆ ಮಂಗಳೂರಿನ ವಿಶೇಷ ತಂಡ ಕಾರ್ಯಾಚರಣೆಗೆ ಮುಂದಾಗಿದೆ.
Video:
Moodbidri Dacoits stop car bike for robbery petal stones at homes and escape. The Moodbidri police are now investigating the case. Police commissioner Shashi Kumar also reached the venue.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm