ಗಡಿಭಾಗದಲ್ಲಿ ಡ್ರಗ್ ಮಾರಲು ಯತ್ನ ; ಉಪ್ಪಳ ಮೂಲದ ಇಬ್ಬರ ಬಂಧನ

02-04-21 02:15 pm       Mangalore Correspondent   ಕ್ರೈಂ

ತಲಪಾಡಿಯ ತಚ್ಚಣಿ ಬಳಿ ನಿಷೇಧಿತ ಎಂಡಿಎಂ ಡ್ರಗ್ ಪೌಡರನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಉಪ್ಪಳ ಮೂಲದ ಇಬ್ಬರನ್ನು ಬಂಧಿಸಿದ್ದಾರೆ.

ಉಳ್ಳಾಲ, ಎ.2; ಗಡಿಭಾಗ ತಲಪಾಡಿಯ ತಚ್ಚಣಿ ಬಳಿಯ ವಿಲೇಜ್ ಬಾರ್ ಬಳಿ ನಿಷೇಧಿತ ಎಂಡಿಎಂ ಡ್ರಗ್ ಪೌಡರನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಉಪ್ಪಳ ಮೂಲದ ಇಬ್ಬರನ್ನು ಎ.ಸಿ.ಪಿ ರಂಜಿತ್ ಬಂಡಾರು ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ. 

ಕಳೆದ ವಾರ ತಲಪಾಡಿಯ ತಚ್ಚಣಿಯ ವಿಲೇಜ್ ಬಾರ್ ಬಳಿ ಆರೋಪಿಗಳಾದ ಉಪ್ಪಳ ಪಚ್ಚಿಲ ಮಾರ್ ನಿವಾಸಿ ಫಝಲ್ ಪಿ.ಎಮ್(27) ಮತ್ತು ಉಪ್ಪಳ ಮಜಲ್ ನಿವಾಸಿ ಮಹಮ್ಮದ್ ನೌಫಾಲ್(38) ಎಂಬಿಬ್ಬರು ನಿಷೇಧಿತ MDM ಮಾತ್ರೆಗಳನ್ನು ಮಾರಾಟ ನಡೆಸಲು ಯತ್ನಿಸುತ್ತಿದ್ದು ಖಚಿತ ಮಾಹಿತಿ ಆಧಾರದಲ್ಲಿ ಮಂಗಳೂರು ದಕ್ಷಿಣ ಸಹಾಯಕ ಪೊಲೀಸ್ ಆಯುಕ್ತರಾದ ರಂಜಿತ್ ಬಂಡಾರು ನೇತೃತ್ವದ ತಂಡ ಮತ್ತು ಉಳ್ಳಾಲ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ 9,000 ರೂಪಾಯಿ ಮೌಲ್ಯದ MDM ಪೌಡರ್, ಒಂದು ಸ್ವಿಪ್ಟ್ ಕಾರು ಮತ್ತು ದ್ವಿಚಕ್ರ ವಾಹನವನ್ನ ವಶ ಪಡಿಸಲಾಗಿದೆ.

ಮಂಗಳೂರು ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ನಿರ್ದೇಶನದಂತೆ ಡಿ.ಸಿ.ಪಿಗಳಾದ ಹರಿರಾಂ ಶಂಕರ್, ವಿನಯ್ ಗಾಂವ್ಕರ್  ಮಾರ್ಗದರ್ಶನದಲ್ಲಿ ಎಸಿಪಿ ನೇತೃತ್ವದ ತಂಡ  ಕಾರ್ಯಾಚರಣೆ ನಡೆಸಿದೆ.

Two have been arrested by Ullal police for selling drugs near talapady