ಬ್ರೇಕಿಂಗ್ ನ್ಯೂಸ್
08-05-21 08:51 pm Mangaluru Correspondent ಕ್ರೈಂ
ಸುರತ್ಕಲ್, ಮೇ 8: ಅಪ್ರಾಪ್ತ ಬಾಲಕನ ವಿಡಿಯೋ ಮುಂದಿಟ್ಟು ಬೆದರಿಸಿದ್ದಲ್ಲದೆ, ಮನೆಯಿಂದ ಚಿನ್ನ ತರುವಂತೆ ಹೇಳಿ ಉಪಾಯದಿಂದ ಚಿನ್ನಾಭರಣ ಎಗರಿಸಿದ ಘಟನೆ ಸುರತ್ಕಲ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಸುರತ್ಕಲ್ ಠಾಣೆ ವ್ಯಾಪ್ತಿ ಮಧ್ಯ ಪರಿಸರದ ದೇವಸ್ಥಾನದ ಬಳಿ ಹುಡುಗ ಸಿಗರೇಟ್ ಸೇದುತ್ತಿದ್ದುದನ್ನು ರಂಜಿತ್ ಎನ್ನುವ ವ್ಯಕ್ತಿ ಆತನಿಗೆ ತಿಳಿಯದಂತೆ ವಿಡಿಯೋ ಮಾಡಿದ್ದಾನೆ. ಬಳಿಕ ವಿಡಿಯೋವನ್ನು ಹುಡುಗನಿಗೆ ತೋರಿಸಿ, ಇದನ್ನು ನಿನ್ನ ಮನೆಯವರಿಗೆ ತೋರಿಸುವುದಾಗಿ ಬೆದರಿಸಿದ್ದಾನೆ. ಅಲ್ಲದೆ, ವಿಡಿಯೋ ಯಾರಿಗೂ ತೋರಿಸದೆ ಮುಚ್ಚಿಡಬೇಕಾದರೆ, ನೀನು ಮನೆಯಿಂದ 20 ಸಾವಿರ ಹಣವನ್ನು ತರಬೇಕೆಂದು ಒತ್ತಡ ಹೇರಿದ್ದಾನೆ.
ರಂಜಿತ್ ಒತ್ತಡಕ್ಕೆ ಬೆದರಿದ ಹುಡುಗ ಮನೆಯಲ್ಲಿ ಹೆತ್ತವರಿಗೆ ಗೊತ್ತಾಗದಂತೆ ಹಣಕ್ಕಾಗಿ ಜಾಲಾಡಿದ್ದಾನೆ. ಬಳಿಕ ಹಣ ಸಿಗದೆ, ಮನೆಯಲ್ಲಿದ್ದ ಚಿನ್ನದ ಆಭರಣವನ್ನು ಕದ್ದು ತಂದು ರಂಜಿತ್ ಕೈಗೆ ಒಪ್ಪಿಸಿದ್ದ. ರಂಜಿತ್ ಬಳಿಕ ಚಿನ್ನವನ್ನು ಫೈನಾನ್ಸ್ ಒಂದರಲ್ಲಿ ಅಡವಿಟ್ಟು ಹಣ ಪಡೆದಿದ್ದಾನೆ. ಇದೆಲ್ಲ ನಡೆದು ವಾರದ ಬಳಿಕ ಮನೆಯವರಿಗೆ ಆಭರಣ ಕಳವಾಗಿದ್ದು ಅರಿವಿಗೆ ಬಂದಿದ್ದು, ಮನೆಯಲ್ಲಿ ಹುಡುಕಾಟ ನಡೆಸಿದ್ದಾರೆ.
ಮನೆಯ ಹುಡುಗನಲ್ಲಿಯೂ ಕೇಳಿದ್ದಾರೆ. ಆದರೆ, ಆತ ತನಗೇನು ಗೊತ್ತಿಲ್ಲವೆಂದೇ ನಾಟಕ ಮಾಡಿದ್ದ. ಬಳಿಕ ಮನೆಮಂದಿ ಪೊಲೀಸರಿಗೆ ವಿಷಯ ತಿಳಿಸಿದ್ದರು. ಮನೆಮಗ ಏನೇನೋ ಅರ್ಧಂಬರ್ಧ ಹೇಳಿದ್ದನ್ನೂ ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಕರೆದು ವಿಚಾರಿಸಿದಾಗ, ಸತ್ಯ ವಿಷಯ ಬೆಳಕಿಗೆ ಬಂದಿದೆ. ರಂಜಿತ್ ಎನ್ನುವ ಪಕ್ಕದ ಮನೆಯ ಯುವಕನೇ ಹುಡುಗನನ್ನು ಬೆದರಿಸಿ, ಚಿನ್ನಾಭರಣ ತರುವಂತೆ ಹೇಳಿ ಮೋಸ ಮಾಡಿರುವುದು ಬಯಲಾಗಿದೆ.
ಹುಡುಗ ಚಿನ್ನ ಕದ್ದಿರುವುದು ಮತ್ತು ರಂಜಿತ್ ಅದನ್ನು ಎತ್ತಿಕೊಂಡು ಹೋಗಿ ಫೈನಾನ್ಸಲ್ಲಿ ಅಡವಿಟ್ಟಿದ್ದನ್ನು ಪೊಲೀಸರಲ್ಲಿ ಒಪ್ಪಿಕೊಂಡಿದ್ದಾರೆ. ಆದರೆ, ಎರಡೂ ಮನೆಯವರು ಅಕ್ಕಪಕ್ಕದವರಾಗಿದ್ದರಿಂದ ರಂಜಿತ್ ವಿರುದ್ಧ ಹುಡುಗನ ಮನೆಯವರು ದೂರು ನೀಡಿಲ್ಲ. ಆಭರಣ ಬಿಡಿಸಿಕೊಡುವಂತೆ ಷರತ್ತು ವಿಧಿಸಿದ್ದಾರೆ. ಸುರತ್ಕಲ್ ಪೊಲೀಸರು ರಂಜಿತ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Surathkal police have detained a person in connection with the case of Blackmail and threatening a minor boy of showing his video of smoking to his parents. He was demanding him to fetch gold from his home. The detained person is identified as Ranjith.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am