ಅತ್ತೆಗೆ ಟೆಸ್ಟ್ ಮಾಡಿಸಿ ಪಾಸಿಟಿವ್ ಬರಿಸಿದ್ದೇ ನೀನು, ಇದ್ರಿಂದ ನಿಂಗೆ ಹಣ ಬರ್ತದಲ್ಲಾ..! ಧಮ್ಕಿ ಹಾಕಿದ ಇಬ್ಬರ ಬಂಧನ

08-05-21 09:05 pm       Mangaluru Correspondent   ಕ್ರೈಂ

ಕೋವಿಡ್ ಕರ್ತವ್ಯದಲ್ಲಿ ಇದ್ದ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆಗೆ ಮುಂದಾಗಿ ಜೀವ ಬೆದರಿಕೆ ಒಡ್ಡಿದ ಆರೋಪದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬಂಟ್ವಾಳ, ಮೇ 8: ಕೋವಿಡ್ ಕರ್ತವ್ಯದಲ್ಲಿ ಇದ್ದ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆಗೆ ಮುಂದಾಗಿ ಜೀವ ಬೆದರಿಕೆ ಒಡ್ಡಿದ ಆರೋಪದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಸರಪಾಡಿ ಗ್ರಾಮದ ನಿವಾಸಿಗಳಾದ ಸಂದೀಪ್‌ ಮತ್ತು ಸಂತೋಷ‌ ಬಂಧಿತ ಆರೋಪಿಗಳು. ಸರಪಾಡಿಯ ಮನೆಯೊಂದರಲ್ಲಿ ಕರೋನ ಪಾಸಿಟಿವ್‌ ಬಂದ ಮಹಿಳೆಯ ಆರೋಗ್ಯ ವಿಚಾರಿಸಿ, ಮನೆಯಿಂದ ಹೊರ ಹೋಗದಂತೆ ತಿಳಿಸಿ ವಾಪಸ್ ಬರುತ್ತಿದ್ದ ವೇಳೆ ಆಶಾ ಕಾರ್ಯಕರ್ತೆಯನ್ನು ಅಡ್ಡಗಟ್ಟಿದ ಸೋಂಕಿತ ಮಹಿಳೆಯ ಸಂಬಂಧಿಕರಾದ ಸಂದೀಪ್ ಮತ್ತು ಸಂತೋಷ್, ಅತ್ತೆಗೆ ಕರೋನಾ ಟೆಸ್ಟ್‌ ಮಾಡಿಸಿ ಪಾಸಿಟಿವ್‌ ಬರಿಸಿದ್ದೇ ನೀನು. ಪಾಸಿಟಿವ್‌ ಬರಿಸಿದರೆ ನಿನಗೆ ಭಾರೀ ಹಣ ಬರುತ್ತದಲ್ಲಾ ಎಂದು ಹೇಳಿ ಹಲ್ಲೆಗೆ ಮುಂದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಐ.ಪಿ.ಸಿ ಕಲಂ 354, 506, 269, 270 ಮತ್ತು ಕಲಂ 5 [1] ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020ರಂತೆ ಪ್ರಕರಣ ದಾಖಲಾಗಿದೆ.

Two arrested by Bantwal Police for attempting to Assault and threaten Asha Workers. The arrested are identified as Santosh and Sandeep.