ದೇರಳಕಟ್ಟೆ ; ಸ್ಕೂಟರ್ ನಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿ ಸೆರೆ

10-05-21 08:11 pm       Mangaluru Correspondent   ಕ್ರೈಂ

ಲಾಕ್ಡೌನ್ ಸಮಯದಲ್ಲಿ ದೇರಳಕಟ್ಟೆ, ನಾಟೆಕಲ್ ಪರಿಸರದಲ್ಲಿ ಮಾರಾಟ ಮಾಡುವುದಕ್ಕಾಗಿ ಸ್ಕೂಟರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು, ಮೇ 10: ಲಾಕ್ಡೌನ್ ಸಮಯದಲ್ಲಿ ದೇರಳಕಟ್ಟೆ, ನಾಟೆಕಲ್ ಪರಿಸರದಲ್ಲಿ ಮಾರಾಟ ಮಾಡುವುದಕ್ಕಾಗಿ ಸ್ಕೂಟರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.

ಮೇ 7 ರಂದು ದೇರಳಕಟ್ಟೆ ಬಳಿಯ ವಿದ್ಯಾರತ್ನ ಕ್ರಾಸ್ ನಲ್ಲಿ ಪೊಲೀಸರು ಲಾಕ್ಡೌನ್ ಹಿನ್ನೆಲೆಯಲ್ಲಿ ತಪಾಸಣೆ ನಡೆಸುತ್ತಿದ್ದಾಗ ಸ್ಕೂಟರ್ ಸವಾರ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದ. ಕೂಡಲೇ ಆತನನ್ನು ಹಿಡಿದು ಸ್ಕೂಟರ್ ಚೆಕ್ ಮಾಡಿದಾಗ ಅದರಲ್ಲಿ ಗಾಂಜಾ ಸಾಗಿಸುತ್ತಿರುವುದು ಕಂಡುಬಂದಿದೆ. ಆರೋಪಿ ನಾಟೆಕಲ್ ನಿವಾಸಿ ಮಹಮ್ಮದ್ ಹನೀಫ್ (33) ಎಂಬವನಾಗಿದ್ದು ಪೊಲೀಸರು ಬಂಧಿಸಿದ್ದಾರೆ.

12 ಸಾವಿರ ಬೆಲೆಯ 1 ಕೇಜಿ 215 ಗ್ರಾಂ ಇದ್ದ ಗಾಂಜಾ ಹಾಗೂ ಸ್ಕೂಟರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ‌ಉಪವಿಭಾಗದ ಎಸಿಪಿ ರಂಜಿತ್ ಕುಮಾರ್ ಬಂಡಾರು ನೇತೃತ್ವದಲ್ಲಿ ಕೊಣಾಜೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

Man arrested for carrying Ganja on a two-wheeler in Derlakatte by Konaje police. 1.25 kgs worth 12,000 Rs of Ganja and two-wheeler has been seized.