ಬ್ರೇಕಿಂಗ್ ನ್ಯೂಸ್
02-06-21 03:22 pm Mangalore Correspondent ಕ್ರೈಂ
ಮಂಗಳೂರು, ಜೂನ್ 2: 20 ವರ್ಷದ ಹುಡುಗಿಯನ್ನು ಮದುವೆ ಮಾಡಿಕೊಡುವಂತೆ ಒತ್ತಾಯಿಸಿದ್ದಲ್ಲದೆ, ರೌಡಿಗಳನ್ನು ಕಟ್ಟಿಕೊಂಡು ಯುವತಿಯ ಮನೆಗೆ ನುಗ್ಗಿ ದಾಂಧಲೆ ನಡೆಸಿದ ಘಟನೆ ನಡೆದಿದ್ದು, ಪ್ರಕರಣ ಸಂಬಂಧಿಸಿ ಕಂಕನಾಡಿ ನಗರ ಠಾಣೆ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.


ಮಂಗಳೂರು ನಗರದ ಶಕ್ತಿನಗರದ ಬಳಿಯ ಪ್ರೀತಿ ನಗರದ ಯುವತಿಯನ್ನು ಹೇಮಂತ್ ಎಂಬಾತ ಬೈಕಿನಲ್ಲಿ ಕುಳ್ಳಿರಿಸಿಕೊಂಡು ಹೋಗುತ್ತಿದ್ದು, ಇದನ್ನು ಅರಿತ ಆಕೆಯ ಸೋದರರು ಹೇಮಂತನಿಗೆ ಫೋನ್ ಮಾಡಿ ಬೆದರಿಕೆ ಹಾಕಿದ್ದರು. ತಂಗಿಯ ವಿಚಾರಕ್ಕೆ ಬರದೆ ದೂರ ಇರುವಂತೆ ಹೇಳಿದ್ದರು. ಇದರಿಂದ ಸಿಟ್ಟಿಗೆದ್ದ ಹೇಮಂತ್, ಮೇ 30ರಂದು ರಾತ್ರಿ ಎಂಟು ಗಂಟೆಗೆ ಏಳೆಂಟು ಮಂದಿ ರೌಡಿಗಳೊಂದಿಗೆ ಯುವತಿಯ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ.





ಈ ಸಂದರ್ಭ ಯುವತಿಯ ಸೋದರರು ಮನೆಯಲ್ಲಿ ಇರಲಿಲ್ಲ. ಹೀಗಾಗಿ ಮನೆಯಲ್ಲಿದ್ದ ತಾಯಿಯನ್ನು ಬೈದಾಡಿದ್ದಲ್ಲದೆ, ನಿನ್ನ ಮಕ್ಕಳನ್ನು ಜೀವ ಸಹಿತ ಬಿಡುವುದಿಲ್ಲ ಎನ್ನುತ್ತಾ ತಲವಾರು ಮತ್ತು ರಾಡಿನಿಂದ ಮನೆಯಲ್ಲಿದ್ದ ಟಿವಿ, ಸೋಫಾ, ಮಿಕ್ಸಿಗಳಿಗೆ ಹಾನಿ ಮಾಡಿದ್ದಾರೆ. ಬಳಿಕ ತಾಯಿ ಮನೆಯ ಹಿಂಬಾಗಿಲಿನಿಂದ ಹೊರಬಂದು ಬೊಬ್ಬೆ ಹಾಕಿದ್ದು, ಸ್ಥಳೀಯರು ಸೇರುವಷ್ಟರಲ್ಲಿ ಆಗಂತುಕರು ತಾವು ಬಂದಿದ್ದ ಬೈಕ್, ಸ್ಕೂಟರಲ್ಲಿ ಪರಾರಿಯಾಗಿದ್ದಾರೆ. ಈ ಬಗ್ಗೆ ಕಂಕನಾಡಿ ಠಾಣೆಯಲ್ಲಿ ಮಹಿಳೆಯ ದೂರಿನಂತೆ ಪ್ರಕರಣ ದಾಖಲಾಗಿತ್ತು.



ಪೊಲೀಸರು ಕೋಡಿಕಲ್ ನಿವಾಸಿ, ಉರ್ವಾ ಠಾಣೆಯ ರೌಡಿಶೀಟರ್ ರಂಜಿತ್ (28), ಉರ್ವಾ ಸ್ಟೋರ್ ನಿವಾಸಿ ಅವಿನಾಶ್ (23), ಕೊಟ್ಟಾರ ಚೌಕಿಯ ಪ್ರಜ್ವಲ್(24), ಕೋಡಿಬೆಂಗ್ರೆ ನಿವಾಸಿ ದೀಕ್ಷಿತ್ (21), ಮೂಲತಃ ಬಂಟ್ವಾಳ ತಾಲೂಕಿನ ಬಾರೆಕ್ಕಾಡು ನಿವಾಸಿ ಹೇಮಂತ್ (22), ಉರ್ವಾ ಸ್ಟೋರಿನ ಧನುಷ್ (19), ಕುಂಜತ್ ಬೈಲಿನ ಯತಿರಾಜ್ (23) ಎಂಬವರನ್ನು ಬಂಧಿಸಿದ್ದಾರೆ. ಈ ಪೈಕಿ ರಂಜಿತ್ ಉರ್ವಾ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದು, ಉರ್ವಾದಲ್ಲಿ ಒಂಬತ್ತು ಪ್ರಕರಣ ಮತ್ತು ಕಾವೂರಿನಲ್ಲಿ ಒಂದು ಪ್ರಕರಣ ಎದುರಿಸುತ್ತಿದ್ದಾನೆ. ಅವಿನಾಶ್ ಕೂಡ ಉರ್ವಾ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದು ಎರಡು ಪ್ರಕರಣ ದಾಖಲಾಗಿದೆ.
Seven accused were arrested regarding the incident where a gang reportedly came armed with lethal weapons, tried to kill a woman, and vandalized her house in Shakthinagar in Mangalore.
21-09-26 12:58 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
21-09-26 01:37 pm
HK News Staffer
HYROX ಮೆನ್ಸ್ ಡಬಲ್ಸ್ ಫಿಟ್ನೆಸ್ ಸ್ಪರ್ಧೆಯಲ್ಲಿ ದಕ್...
21-09-26 10:08 am
Mangalore Eye, Project: ಕದ್ರಿಯ ನೂರಾರು ಕೋಟಿ ಜಾ...
20-09-26 08:59 pm
ಮೊಗವೀರಪಟ್ಣ- ಕೋಟೆಪುರ ರಸ್ತೆ ಕಾಂಕ್ರೀಟಿಗೆ ಗಡುವು ;...
19-09-26 09:54 pm
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
21-09-26 08:21 pm
HK News Staffer
ಕಳತ್ತೂರಿನಲ್ಲಿ ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ...
21-09-26 06:16 pm
Ramanth Rai Car Accident: ಕಾರ್ಕಳ ; ಮಾಜಿ ಸಚಿವ...
20-09-26 04:39 pm
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm