ಕೊರಿಯರ್ ಹೆಸರಲ್ಲಿ 1.69 ಲಕ್ಷ ರೂ. ಕಳಕೊಂಡ ಮಂಗಳೂರಿನ ವ್ಯಕ್ತಿ !!

16-06-21 02:55 pm       Mangalore Correspondent   ಕ್ರೈಂ

ಅನಾಮಿಕ ವ್ಯಕ್ತಿಯ ಮಾತು ಕೇಳಿ ಮಂಗಳೂರಿನ ವ್ಯಕ್ತಿಯೋರ್ವರು 1.69 ಲಕ್ಷ ರೂ. ಕಳೆದುಕೊಂಡ ಘಟನೆ ನಡೆದಿದೆ. 

ಮಂಗಳೂರು, ಜೂನ್ 16 : ಕೊರಿಯರ್ ಸಂಸ್ಥೆಯ ಪ್ರತಿನಿಧಿ ಎಂದು ಹೇಳಿ ಕರೆ ಮಾಡಿದ ಅನಾಮಿಕ ವ್ಯಕ್ತಿಯ ಮಾತು ಕೇಳಿ ಮಂಗಳೂರಿನ ವ್ಯಕ್ತಿಯೋರ್ವರು 1.69 ಲಕ್ಷ ರೂ. ಕಳೆದುಕೊಂಡ ಘಟನೆ ನಡೆದಿದೆ. 

ಮಂಗಳೂರಿನ ವ್ಯಕ್ತಿಯೊಬ್ಬರಿಗೆ ನಿನ್ನೆ 9339431456 ದೂರವಾಣಿ ​​​ಸಂಖ್ಯೆಯಿಂದ ಕರೆ ಬಂದಿತ್ತು. ತಾನು ಡಿಟಿಡಿಸಿ ಕೊರಿಯರ್ ಸಂಸ್ಥೆ ಪ್ರತಿನಿಧಿ ಎಂದು ಪರಿಚಯಿಸಿ, 'ತಮ್ಮ ಹೆಸರಿಗೊಂದು ಪಾರ್ಸೆಲ್​ ಬಂದಿದೆ. ಆದರೆ ಏರಿಯಾ ಪಿನ್ ತಪ್ಪಾಗಿದ್ದು ಪಾರ್ಸೆಲ್ ಡೆಲಿವರಿ ಮಾಡಬೇಕಿದ್ದಲ್ಲಿ 10 ರೂ. ಪಾವತಿಸುವಂತೆ ತಿಳಿಸಿದ್ದಾನೆ.

10 ರೂ. ಬ್ಯಾಂಕ್ ಖಾತೆಯಿಂದ ಪಾವತಿಸಲು ಲಿಂಕ್​ ಒಂದನ್ನು ಕಳುಹಿಸಿಕೊಟ್ಟಿದ್ದಾನೆ. ಅವನು ಕೊಟ್ಟ ಲಿಂಕ್ ತೆರೆದು ಯುಪಿಐ ಪಿನ್ ನಮೂದಿಸಿ 10 ರೂ. ಪಾವತಿಸಿದ್ದಾರೆ. ಆ ಬಳಿಕ ಅವರ ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿರುವ ಕೆನರಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೋಟಕ್ ಮಹೀಂದ್ರ ಬ್ಯಾಂಕ್ ಖಾತೆಗಳಿಂದ ಹಂತಹಂತವಾಗಿ 1,69,600 ರೂ. ವರ್ಗಾವಣೆಯಾಗಿದೆ. ಈಗ ಹಣ ಕಳೆದುಕೊಂಡ ವ್ಯಕ್ತಿ ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Man dupes 1.69 lakhs in the name of a courier company in Mangalore. A case has been registered at the cybercrime police station.