ಬ್ರೇಕಿಂಗ್ ನ್ಯೂಸ್
18-06-21 04:38 pm Headline Karnataka News Network ಕ್ರೈಂ
ಬೆಂಗಳೂರು, ಜೂನ್ 18: ಹನಿಟ್ರ್ಯಾಪ್ ಮಾಡಿ ಹಣ ಪೀಕಿಸೋಕೆ ಕೆಲವರು ಏನೆಲ್ಲ ಕಸರತ್ತು ಮಾಡುತ್ತಾರೆ ಅನ್ನುವುದನ್ನು ಪೊಲೀಸರು ಕೂಡ ಊಹಿಸಿಕೊಳ್ಳಲು ಸಾಧ್ಯವಾಗಲ್ಲ. ಇಲ್ಲೊಂದು ಯುವ ಜೋಡಿ, ಫೇಸ್ಬುಕ್ ನಲ್ಲಿ ಫ್ರೆಂಡ್ ರೀತಿ ನಾಟಕವಾಡಿ ಬಳಿಕ ಅವರನ್ನೇ ತಮ್ಮ ದಾಳಕ್ಕೆ ಬೀಳಿಸಿ ಬೋಳಿಸುವ ಕೆಲಸ ಮಾಡುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಯುವತಿಯೊಬ್ಬಳು ನೀಡಿದ ದೂರು ಆಧರಿಸಿ, ಬೆನ್ನು ಬಿದ್ದ ಚಂದ್ರಾ ಲೇಔಟ್ ಠಾಣೆಯ ಪೊಲೀಸರು ಕಾವ್ಯ ಮತ್ತು ಕೃಷ್ಣ ಎಂಬ ಹರಾಮಿ ಯುವಜೋಡಿಯನ್ನು ಬಂಧಿಸಿದ್ದಾರೆ. ಕಾವ್ಯಾ ಫೇಸ್ಬುಕ್ ನಲ್ಲಿ ಆಕ್ಟಿವ್ ಆಗಿದ್ದು, ಸುಂದರಿ ಯುವತಿಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಹೊಸತಾಗಿ ಪರಿಚಯ ಮಾಡಿಕೊಳ್ಳುತ್ತಿದ್ದಳು. ಬಳಿಕ ಪರಿಚಯ, ಸ್ನೇಹಕ್ಕೆ ತಿರುಗಿ ಮನೆಗೇ ಕರೆಯುತ್ತಾಳೆ. ಮನೆಗೆ ಕರೆಸಿ, ಮತ್ತು ಬರಿಸುವ ಜ್ಯೂಸ್ ಕೊಟ್ಟು ತನ್ನ ಗಂಡನಿಂದಲೇ ಕಿರಾತಕ ಕೆಲಸ ಮಾಡಿಸುತ್ತಾಳೆ.
ದೂರು ನೀಡಿದ್ದ ಯುವತಿಗೂ ಆರು ತಿಂಗಳ ಹಿಂದೆ ಫೇಸ್ಬುಕ್ ನಲ್ಲಿ ಕಾವ್ಯಾ ಪರಿಚಯ ಆಗಿತ್ತು. ಸ್ನೇಹ ಬೆಳೆಸಿ ಮನೆಗೆ ಬರುವಂತೆ ಕರೆದಿದ್ದು, ಅಲ್ಲಿ ತೆರಳಿದ್ದಾಗ ಜ್ಯೂಸ್ ಕುಡಿಸಿ ಮಂಪರಿನ ಸ್ಥಿತಿಗೆ ಹೋಗಿದ್ದಳು. ಏನಾಗುತ್ತಿದೆ ಅನ್ನುವ ಪರಿವೆ ಇಲ್ಲದಾಗ, ಆಕೆಯನ್ನು ವಿವಸ್ತ್ರ ಮಾಡಿ ಕಾವ್ಯಾಳ ಗಂಡ ಕೃಷ್ಣ ಮತ್ತು ಸಾಗರ್ ಎಂಬ ಮತ್ತೊಬ್ಬ ಯುವಕ ಜೊತೆಗೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಬಳಿಕ ಯುವತಿ ಬಳಿಯಿದ್ದ ಚಿನ್ನದ ಉಂಗುರ, ಸರ, ಎಟಿಎಂ ಕಾರ್ಡ್ ಅನ್ನು ಆರೋಪಿಗಳು ಕಸಿದಿದ್ದು ಫೋಟೋ ತೋರಿಸಿ ಬೆದರಿಸಿದ್ದಾರೆ. ಬಳಿಕ ಖಾಸಗಿ ಫೋಟೊ ಮತ್ತು ವಿಡಿಯೋವನ್ನು ಪೊಷಕರಿಗೆ ಕಳಿಸ್ತೀವಿ, ಫೇಸ್ಬುಕ್ ನಲ್ಲಿ ಹರಿಯಬಿಡುತ್ತೇವೆ ಎಂದು ಹೇಳಿಕ ಆರು ತಿಂಗಳಿಂದ 4 ಲಕ್ಷಕ್ಕೂ ಅಧಿಕ ಹಣ ವಸೂಲಿ ಮಾಡಿದ್ದಾರೆ.
ಕಳೆದ ಜನವರಿಯಲ್ಲಿ ಚಂದ್ರಾ ಲೇಔಟ್ ನಲ್ಲಿ ಘಟನೆ ನಡೆದಿತ್ತು. ಆನಂತರ ಬ್ಲಾಕ್ಮೇಲ್ ಮಾಡುತ್ತಾ ಯುವತಿಯಿಂದಲೇ ಯುವಜೋಡಿ ಸೇರಿ ಹಣ ಪೀಕಿಸಿದ್ದಾರೆ. ಕಳೆದ ಮೇ ತಿಂಗಳಲ್ಲಿ ಹಳೆ ವಿಡಿಯೋ ತೋರಿಸಿ ಯುವತಿ ಮೇಲೆ ಕೃಷ್ಣ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಳು. ಪೊಲೀಸರು ಈಗ ಯುವಜೋಡಿ ಮತ್ತು ಅವರಿಗೆ ಸಹಾಯ ನೀಡಿದ್ದ ಸಾಗರ್ ನನ್ನು ಬಂಧಿಸಿದ್ದಾರೆ.
Bangalore Young Couple arrested for making Honey Trap big-time business. Their target is on Facebook users by making friendship and then blackmailing. The couple have been arrested by Chandra Layout police station.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm