ಬ್ರೇಕಿಂಗ್ ನ್ಯೂಸ್
22-06-21 01:05 pm Headline Karnataka News Network ಕ್ರೈಂ
ಬೆಂಗಳೂರು, ಜೂನ್ 22 : ಮೆಟ್ರೋ ಸಿಟಿ ಬೆಂಗಳೂರಿನಲ್ಲಿ ಮೋಸದ ಜಾಲ ಹೆಚ್ಚುತ್ತಲೇ ಬರುತ್ತಿದೆ. ಮನಿ ಡಬ್ಲಿಂಗ್ ಇನ್ವೆಸ್ಟ್ಮೆಂಟ್ ಅಂತ ಪುಂಗಿ ಬಿಟ್ಟು ಸಾಮಾನ್ಯ ಜನರಿಗೆ ಟೋಪಿ ಹಾಕುವ ಖದೀಮರು ಹುಟ್ಟಿಕೊಂಡಿದ್ದಾರೆ. ಶೇ. 25ರಷ್ಟು ಲಾಭಾಂಶದ ಆಮಿಷವೊಡ್ಡಿ ಎರಡು ಸಾವಿರಕ್ಕೂ ಅಧಿಕ ಜನರಿಗೆ ಮೋಸಗೈದ ಘಟನೆ ಬೆಳಕಿಗೆ ಬಂದಿದೆ.
ಆನ್‌ಲೈನ್ ಡಿಜಿಟೆಕ್ ಮಾರ್ಕ್ ಕಂಪನಿ ಹೆಸರಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನರಿಗೆ ವಂಚಿಸಿದ ಡಿ.ಎಸ್.ರಂಗನಾಥ್ ಎಂಬಾತನನ್ನು ಬೆಂಗಳೂರು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿ ನಿರ್ದಿಷ್ಟ ಕಚೇರಿ ಇಲ್ಲದೆ ಜಾಹೀರಾತು ಮೂಲಕ ವಂಚನೆ ಮಾಡುತ್ತಿದ್ದ ಎಂದು ದೂರಲಾಗಿದೆ.

ಶೇಕಡಾ 25ರಷ್ಟು ಲಾಭಾಂಶದ ಆಮಿಷವೊಡ್ಡಿ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದರು. ಆರಂಭದಲ್ಲಿ 15 ಸಾವಿರ ಹೂಡಿಕೆ ಮಾಡಿ ಸದಸ್ಯತ್ವ ಪಡೀಬೇಕು. ಬಳಿಕ ವರ್ಷಕ್ಕೆ ಹೂಡಿಕೆ ಮಾಡುಲಿದ ಲೆಕ್ಕದಲ್ಲಿ ಲಾಭಾಂಶ ಪಡೆಯಬಹುದು ಎಂದು ಹೇಳುತ್ತಿದ್ದರು. 2021ರ ಡಿಸೆಂಬರ್ ನಲ್ಲಿ 1 ಲಕ್ಷ ಲಾಭಾಂಶ ನೀಡಿಕೆ, 2022ರಲ್ಲಿ 5 ಲಕ್ಷ ರೂಪಾಯಿ, 2023ರಲ್ಲಿ 12 ಲಕ್ಷ ರೂ, 2025ಕ್ಕೆ 25 ಲಕ್ಷ ರೂಪಾಯಿ ಲಾಭ ಎಂದು ಪುಂಗಿ ಬಿಟ್ಟು ವಂಚನೆ ಮಾಡಿದ್ದಾರೆ. ಇನ್ನು ಹೆಚ್ಚಿನ ಬಡ್ಡಿ ಬೇಕಾದರೆ 1 ಲಕ್ಷ ಹೂಡಿಕೆ ಮಾಡಲು ಹೇಳುತ್ತಿದ್ದರು.

ಸದಸ್ಯತ್ವ ಪಡೆದವರಿಗೆ ಯೂಸರ್ ನೇಮ್, ಪಾಸ್ ವರ್ಡ್ ನೀಡಲಾಗುತ್ತಿತ್ತು. ಆ ಮೂಲಕ ಚೈನ್ ಲಿಂಕ್ ಆಧಾರದಲ್ಲಿ ಹೂಡಿಕೆ ಮಾಡಲಾಗುತ್ತಿತ್ತು. ಹೂಡಿಕೆಯಾದ ಕೋಟ್ಯಾಂತರ ಹಣವನ್ನು ಕ್ರಿಪ್ಟೊ ಕರೆನ್ಸಿಯ ಟ್ರೋನ್ ಕಾಯಿನ್ ರೂಪದಲ್ಲಿ ತೋರಿಸಲಾಗುತ್ತಿತ್ತು. ಬಳಿಕ ಕಂಪೆನಿ ಹೆಸರಿನಲ್ಲಿ ಡಿಟಿಎಂ ಟೋಕನ್ ಎಂದು ರೂಪಿಸಿ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಲಾಗಿದೆ. ಈ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಅರೆಸ್ಟ್ ಆಗ ರಂಗನಾಥ್ ನನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Bangalore Man cheats two thousand people of Money Doubling online Digitech CEO arrested. He was arrested by the CCB Police, The accused has been identified as Ranganath.
02-01-26 01:58 pm
Bangalore Correspondent
ಎಲ್ಲರಂತೆ ನನಗೂ ಆಕಾಂಕ್ಷೆ ಇದೆ ; ಕುರ್ಚಿ ಫೈಟ್ ನಡು...
01-01-26 06:21 pm
ಜನವರಿ 15ರ ನಂತರ ಸಂಪುಟ ವಿಸ್ತರಣೆ ಆಗಲಿದೆ, ನನಗೂ ಮಂ...
01-01-26 05:18 pm
ಬೆಂಗಳೂರಿನಿಂದ ಕನ್ಯಾಕುಮಾರಿಗೆ ಸೈಕಲ್ ಸವಾರಿ ; 70ರ...
01-01-26 03:05 pm
ಕೋಗಿಲು ಬಡಾವಣೆ ವಿವಾದ ; ಬಿಜೆಪಿಯಿಂದ ಸತ್ಯಶೋಧನಾ ಸಮ...
31-12-25 10:57 pm
01-01-26 09:34 pm
HK News Desk
ಸ್ವಿಟ್ಜರ್ಲ್ಯಾಂಡ್ ನಲ್ಲಿ ಶೋಕವಾಗಿ ಮಾರ್ಪಟ್ಟ ಹೊಸ...
01-01-26 09:30 pm
ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದು ಯುವಕನ ಹತ್ಯೆ ;...
30-12-25 06:48 pm
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
ರಸ್ತೆ ಬದಿ ನಮಾಜ್ ಮಾಡುತ್ತಿದ್ದ ಪ್ಯಾಲೆಸ್ತೀನ್ ವ್...
27-12-25 04:29 pm
02-01-26 02:02 pm
Mangalore Correspondent
Dr Vinaya Hegde Death, NItte Mangalore: ನಿಟ್ಟ...
01-01-26 09:43 am
ಧರ್ಮಸ್ಥಳ ಪ್ರಕರಣದಲ್ಲಿ ಕ್ಷೇತ್ರದ ಪರ ಬೆಳ್ತಂಗಡಿ ಕೋ...
31-12-25 10:57 pm
ಕೋಗಿಲು ಬಡಾವಣೆಯ ಅಕ್ರಮ ವಲಸಿಗರು ಎಲ್ಲಿಯವರು? ಇಲ್ಲಿ...
31-12-25 09:16 pm
ಕೋಟೆಕಾರು ಪ.ಪಂ ಸಭೆ ; ಸರ್ಕಾರಿ ಜಮೀನು ಅತಿಕ್ರಮಣ ಪರ...
31-12-25 03:35 pm
02-01-26 12:58 pm
Mangalore Correspondent
ಮುಂಬೈ ಪೊಲೀಸ್ ಹೆಸರಲ್ಲಿ ಹೆದರಿಸಿ ಡಿಜಿಟಲ್ ಅರೆಸ್ಟ್...
02-01-26 12:32 pm
ಹೊಸ ವರ್ಷ ಸಂಭ್ರಮಾಚರಣೆ ; ಮಂಗಳೂರಿನಲ್ಲಿ ಒಂದು ಸಾವಿ...
01-01-26 08:25 pm
ಕಾರು ಬಾಡಿಗೆ ನೆಪದಲ್ಲಿ ಸುಳ್ಯದಿಂದ ಯುವಕನ ಕರೆದೊಯ್ದ...
31-12-25 07:05 pm
ಶಿರ್ವದಲ್ಲಿ ಸ್ಕೂಟರ್ ಕಳ್ಳತನ ; ಅಂತರ್ ಜಿಲ್ಲಾ ಕಳ್ಳ...
31-12-25 07:05 pm