ಬ್ರೇಕಿಂಗ್ ನ್ಯೂಸ್
22-06-21 04:32 pm Mangalore Correspondent ಕ್ರೈಂ
ಉಳ್ಳಾಲ, ಜೂ.22: ಮನೆ ಮಂದಿ ಮಲಗಿದ್ದ ವೇಳೆ ಮೇಲ್ಛಾವಣಿಯ ಹಂಚು ಸರಿಸಿ ಒಳನುಗ್ಗಿ 120 ಗ್ರಾಂ ಚಿನ್ನ ಮತ್ತು ಮೊಬೈಲ್ ಗಳನ್ನ ಕಳವುಗೈದಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ನಂದಾವರ ನಿವಾಸಿ ಉಬೇದುಲ್ಲಾ(27) ಬಂಧಿತ ಆರೋಪಿ. ಮಾ.19 ರಂದು ನಸುಕಿನ ವೇಳೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಯ ನಿವಾಸಿ ನಿವೃತ್ತ BSNL ಉದ್ಯೋಗಿ ಜಯರಾಜ್ ಕೆ. ಅವರ ಮನೆಯ ಹಿಂಭಾಗದ ಹಂಚು ಸರಿಸಿ ಒಳ ನುಗ್ಗಿದ್ದ ಆರೋಪಿ ಮನೆಯೊಳಗಿದ್ದ ಕೀ ಗೊಂಚಲಿನಿಂದ ಕಪಾಟು ತೆರೆದು 120 ಗ್ರಾಂ ಚಿನ್ನದ ಒಡವೆಗಳು ಹಾಗೂ ಮೂರು ಮೊಬೈಲ್ಗಳನ್ನ ದೋಚಿ ಪರಾರಿಯಾಗಿದ್ದ. ಜಯರಾಜ್ ಅವರ ಪತ್ನಿ ಮರಣ ಹೊಂದಿದ್ದು ಅಮ್ಮ, ಇಬ್ಬರು ತಂಗಿಯಂದಿರ ಜೊತೆ ನೆಲೆಸಿದ್ದಾರೆ. ಮನೆ ಮಂದಿ ನಿದ್ರೆಯ ಮಂಪರಿನಲ್ಲಿರುವಾಗಲೇ ಉಬೇದುಲ್ಲ ಕೈಚಳಕ ತೋರಿಸಿದ್ದ.
ಕದ್ದ ಮೊಬೈಲ್ ಬಳಸಿ ತಗಲಾಕ್ಕೊಂಡ ಉಬೇದುಲ್ಲ !
ಉಬೇದುಲ್ಲ ರಿಕ್ಷಾ ಚಾಲಕನಾಗಿದ್ದು ಕುಡಿತದ ಚಟ ಮೈಗೂಡಿಸಿದ್ದ. ಕಳ್ಳತನ ನಡೆಸಿದ ಮುಂಚಿನ ರಾತ್ರಿ ತೊಕ್ಕೊಟ್ಟಿನ ಬಾರ್ ಒಂದರಲ್ಲಿ ಕಂಠ ಪೂರ್ತಿ ಕುಡಿದಿದ್ದು ಮಾ.19 ರ ಮುಂಜಾನೆ ವೇಳೆ ಜಯರಾಜ್ ಅವರ ಮನೆಯ ಹಿಂಭಾಗದ ದೇವರ ಕೋಣೆಯ ಹಂಚನ್ನು ಸರಿಸಿ ಒಳನುಗ್ಗಿದ್ದಾನೆ. ಒಳಗಿದ್ದ ಚಿನ್ನದ ಒಡವೆಗಳಲ್ಲದೆ ಮೂರು ಮೊಬೈಲ್ ಗಳನ್ನು ಎಗರಿಸಿದ್ದ. ಅದರಲ್ಲಿ ಒಂದು ಮೊಬೈಲನ್ನು ತನ್ನ ಭಾವ ಇಸ್ಮಾಯಿಲ್ ಎಂಬಾತನಿಗೆ ನೀಡಿದ್ದು ಆತ ಅದಕ್ಕೆ ಸಿಮ್ ಹಾಕಿ ಬಳಕೆ ಮಾಡುತ್ತಿದ್ದ. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ಉಳ್ಳಾಲ ಪೊಲೀಸ್ ಇನ್ಸ್ ಪೆಕ್ಟರ್ ಸಂದೀಪ್, ಕಳವಾಗಿದ್ದ ಮೊಬೈಲ್ ಫೋನಿನ ಐಎಂಇಐ ನಂಬರ್ ಟ್ರೇಸ್ ಮಾಡಿದಾಗ ಆರೋಪಿ ಉಬೇದುಲ್ಲಾನ ಬಗ್ಗೆ ಸುಳಿವು ದೊರೆತಿದ್ದು ನಿನ್ನೆ ಸಂಜೆ ಆತನನ್ನ ಬಂಧಿಸಿದ್ದಾರೆ.
ಕಳ್ಳತನ ನಡೆಸಿದ 120 ಗ್ರಾಂ ಚಿನ್ನದಲ್ಲಿ ಪೊಲೀಸರು ಆರೋಪಿಯಿಂದ 95 ಗ್ರಾಂ ಚಿನ್ನವನ್ನ ವಶಪಡಿಸಿದ್ದಾರೆ. ಉಳಿದ ಚಿನ್ನವನ್ನು ಆರೋಪಿ ಉಬೇದುಲ್ಲ ಮಾರಾಟ ಮಾಡಿ ಹೊಸ ಬೈಕ್ ಖರೀದಿಸಿದ್ದು ಬೈಕ್, ರಿಕ್ಷಾ ಮತ್ತು ಎರಡು ಮೊಬೈಲ್ಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಕಳ್ಳತನದ ಅನೇಕ ಪ್ರಕರಣಗಳು ಸಮರ್ಪಕ ಸಾಕ್ಷಾಧಾರ, ಸುಳಿವು ದೊರಕದೆ ಹಳ್ಳ ಹಿಡಿಯುವುದೇ ಜಾಸ್ತಿಯಾಗಿದ್ದು, ತೊಕ್ಕೊಟ್ಟಿನಲ್ಲಿ ನಡೆದ ದೊಡ್ಡ ಕಳ್ಳತನ ಪ್ರಕರಣವನ್ನು ಚಾಣಾಕ್ಷತನದಿಂದ ಭೇದಿಸಿ ಆರೋಪಿಯನ್ನು ಬಂಧಿಸಿದ ಉಳ್ಳಾಲ ಪೊಲೀಸರ ಕಾರ್ಯಕ್ಕೆ ದೂರುದಾರ ಕೆ.ಜಯರಾಜ್ ಸೇರಿದಂತೆ ಜನಸಾಮಾನ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
16 Grams of Gold robbery case at Ullal Police arrest accused by tracing IMEI number. The arrested has been identified as Ubedulla (27) from Bantwal.
07-09-25 10:17 am
Bangalore Correspondent
Mandya Suicide, Marriage: ಮದುವೆ ಕ್ಯಾನ್ಸಲ್ ಆಗಿ...
07-09-25 10:11 am
Sirsi Airgun, Murder, Crime: ಶಿರಸಿ; ಏರ್ಗನ್ ಗ...
06-09-25 08:28 pm
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
06-09-25 10:59 pm
Mangalore Correspondent
Mangalore, Dharmasthala, Vittal Gowda, Skull:...
06-09-25 10:15 pm
ಗೋಮಾಂಸ ಭಕ್ಷಕರಿಗೆ ರಾಜ್ಯ ಸರ್ಕಾರ ಶಾದಿ ಭಾಗ್ಯ ರೀತಿ...
06-09-25 05:56 pm
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
Ullal News, Warrant, Video, Mangalore: ಮೊದಲ ಪ...
05-09-25 08:12 pm
06-09-25 08:32 pm
Bangalore Correspondent
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm
ಮುಂಬೈಗೆ 14 ಲಷ್ಕರ್ ಉಗ್ರರ ಎಂಟ್ರಿ ಬೆದರಿಕೆ ! 400...
06-09-25 10:37 am