ಬ್ರೇಕಿಂಗ್ ನ್ಯೂಸ್
24-06-21 12:55 pm Headline Karnataka News Network ಕ್ರೈಂ
ಬೆಂಗಳೂರು, ಜೂನ್ 24: ಬಿಜೆಪಿ ನಾಯಕಿ, ಬಿಬಿಎಂಪಿಯ ಛಲವಾದಿ ಪಾಳ್ಯ ವಾರ್ಡಿನ ಮಾಜಿ ಕಾರ್ಪೊರೇಟರ್ ಆಗಿದ್ದ ರೇಖಾ ಕದಿರೇಶ್ ಎಂಬವರನ್ನು ರೌಡಿಗಳ ತಂಡ ಮನೆಯೆದುರಲ್ಲೇ ಕೊಚ್ಚಿ ಕೊಲೆಗೈದಿರುವ ಘಟನೆ ನಡೆದಿದೆ. ಛಲವಾದಿ ಪಾಳ್ಯದ ಫ್ಲವರ್ ಗಾರ್ಡನ್ ಬಳಿಯಿರುವ ರೇಖಾ ಕದಿರೇಶ್ ಅವರನ್ನು ಮನೆಗೆ ಬಂದಿದ್ದ ಆಗಂತಕರ ತಂಡ ಹೊರಗೆ ಕರೆದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಸಂಬಂಧಿಕರು ಆಸ್ಪತ್ರೆಗೆ ಸಾಗಿಸಿದ್ದು, ಅಷ್ಟರಲ್ಲಿ ಆಕೆ ಮೃತಪಟ್ಟಿದ್ದಾರೆ. ರೇಖಾ ಮೃತಪಟ್ಟ ಬಗ್ಗೆ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಪಾಟೀಲ್ ದೃಢಪಡಿಸಿದ್ದಾರೆ. ಕಾಟನ್ ಪೇಟೆ ಪೊಲೀಸರು ಸ್ಥಳಕ್ಕಾಗಮಿಸಿ, ಪರಿಶೀಲನೆ ಕೈಗೊಂಡಿದ್ದಾರೆ.


ಪಕ್ಕಾ ಪ್ಲಾನ್ ಮಾಡ್ಕೊಂಡೇ ಕೊಲೆ ಕೃತ್ಯ
ರೌಡಿಗಳು ರೇಖಾರನ್ನು ಕೊಲೆ ಮಾಡುವ ಬಗ್ಗೆ ಪ್ಲಾನ್ ಹಾಕ್ಕೊಂಡೇ ಬಂದಿದ್ದರು ಎನ್ನಲಾಗುತ್ತಿದೆ. ಕೊಲೆ ನಡೆದ ಸ್ಥಳದಲ್ಲಿ ಎರಡು ಸಿಸಿಟಿವಿಗಳಿದ್ದೂ ಅವೆರಡನ್ನೂ ಕೊಲೆ ದೃಶ್ಯ ಕಾಣದಂತೆ ತಿರುಗಿಸಿರುವುದು ಪತ್ತೆಯಾಗಿದೆ. ಮನೆಯ ಒಳಗಿದ್ದ ರೇಖಾ ಅವರನ್ನು ಟೆಂಡರ್ ವಿಚಾರದಲ್ಲಿ ಮಾತನಾಡಲೆಂದು ಹೊರಗೆ ಕರೆದಿದ್ದು, ಅಲ್ಲಿಯೇ ಕೊಲೆ ಮಾಡಲಾಗಿದೆ.

ಎರಡು ವರ್ಷಗಳ ಹಿಂದೆ ಪತಿಯ ಕೊಲೆ
2018ರ ಫೆಬ್ರವರಿ 8ರಂದು ರೇಖಾ ಪತಿ ಕದಿರೇಶ್ ನನ್ನು ಮುನೇಶ್ವರ ದೇವಸ್ಥಾನದ ಬಳಿ ಕೊಲೆ ಮಾಡಲಾಗಿತ್ತು. ವಿರೋಧಿ ಗ್ಯಾಂಗಿನ ರೌಡಿಗಳು ಸೇರಿ ಕೊಲೆ ಕೃತ್ಯ ನಡೆಸಿದ್ದರು. ಕದಿರೇಶ್ ಕೊಲೆ ಮಾಡಿದ್ದ ಗ್ಯಾಂಗ್ ಸದಸ್ಯರು ತಾವೇ ಕೃತ್ಯ ನಡೆಸಿದ್ದಾಗಿ ಬಳಿಕ ಕೋರ್ಟಿಗೆ ಶರಣಾಗಿದ್ದರು. ಇದೀಗ ಮೂರು ವರ್ಷಗಳ ಬಳಿಕ ಪತ್ನಿ ರೇಖಾ ಅವರನ್ನೂ ಕೊಲೆ ಮಾಡಿದ್ದು, ಅದೇ ತಂಡದ ಕೃತ್ಯವೇ ಅನ್ನುವ ಬಗ್ಗೆ ಪೊಲೀಸರು ಅನುಮಾನಿಸಿದ್ದಾರೆ. ಹಳೆ ರೌಡಿ ಶೀಟರ್ ಆಗಿದ್ದ ಕದಿರೇಶ್ ಫೆ.8ರಂದು ಶಿವರಾತ್ರಿ ಉತ್ಸವಕ್ಕೆಂದು ತೋರಣ ಕಟ್ಟುವ ಸಡಗರದಲ್ಲಿದ್ದಾಗ ಹಳೆದ್ವೇಷ ಹೊಂದಿದ್ದ ರೌಡಿಗಳ ತಂಡ ಹಾಡಹಗಲೇ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೈದಿತ್ತು.
ತಿಂಗಳಲ್ಲಿ ಮುಯ್ಯಿ ತೀರಿಸಿದ್ದ ಹಂತಕರು
ಕದಿರೇಶ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಶೋಭನ್ ಎಂಬಾತನನ್ನು ಆನಂತರ ಒಂದೇ ತಿಂಗಳ ಅಂತರದಲ್ಲಿ ಕದಿರೇಶ್ ಬೆಂಬಲಿಗರು ಕೊಲೆಗೈದಿದ್ದರು. ಕೆ.ಆರ್. ಮಾರ್ಕೆಟಿನಲ್ಲಿ ತರಕಾರಿ ವ್ಯಾಪಾರಿಯಾಗಿದ್ದ ಶೋಭನ್ ಕೂಡ ಕದಿರೇಶ್ ನಿವಾಸದ ಬಳಿಯಲ್ಲೇ ಮನೆ ಹೊಂದಿದ್ದ. 2018ರ ಮಾರ್ಚ್ 9ರಂದು ತರಕಾರಿ ವ್ಯಾಪಾರ ಮುಗಿಸಿ ಮಧ್ಯಾಹ್ನ 3.30ಕ್ಕೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಎರಡು ಬೈಕಿನಲ್ಲಿ ಬಂದಿದ್ದ ಆರು ಮಂದಿ ಯದ್ವಾತದ್ವಾ ಕಡಿದು ಕೊಲೆಗೈದಿದ್ದರು. ಕದಿರೇಶ್ ಕೊಲೆ ಪ್ರಕರಣದಲ್ಲಿ ಹಂತಕರಿಗೆ ಮಾಹಿತಿ ನೀಡಿದ್ದೇ ಶೋಭನ್ ಎಂಬ ಆರೋಪ ಇತ್ತು. ಅಲ್ಲದೆ, ಕೊಲೆಗೆ ಸಾಥ್ ನೀಡಿದ್ದ ಅನ್ನುವ ಕಾರಣಕ್ಕಾಗಿ ಸುಲಭದ ತುತ್ತಾಗಿದ್ದ ಶೋಭನನ್ನು ಒಂದೇ ತಿಂಗಳಲ್ಲಿ ಕದಿರೇಶ್ ಪಡೆ ಮುಗಿಸಿ ಹಾಕಿತ್ತು.
Bjp former Corporator Rekha Kadiresh Murdered Brutally in Bangalore. 2018 Her husband was hacked to death. Rekha was murdered by calling her out of her office at Chalavadhipalya in Bengaluru.
04-12-25 05:36 pm
HK News Desk
Bagalakote Accident, Four Killed: ಬಾಗಲಕೋಟೆ ;...
03-12-25 03:01 pm
ಜೈಷ್-ಇ-ಮೊಹಮ್ಮದ್ ಹೆಸರಲ್ಲಿ ಬೆಂಗಳೂರು ಏರ್ಪೋರ್ಟ್,...
02-12-25 10:17 pm
ಸಂಪುಟ ಪುನಾರಚನೆಯಾದ್ರೆ ಮುನಿಯಪ್ಪ, ಮಹದೇವಪ್ಪ, ಪರಮೇ...
02-12-25 06:29 pm
ಕೃತಕ ಬುದ್ಧಿಮತ್ತೆ ಎಫೆಕ್ಟ್ ; ಭವಿಷ್ಯದಲ್ಲಿ ಜನರು ಕ...
01-12-25 10:59 pm
04-12-25 05:39 pm
HK News Desk
IndiGo Cancels Nearly 200 Flights Nationwide;...
04-12-25 11:15 am
Nationwide Census: ಎರಡು ಹಂತಗಳಲ್ಲಿ ದೇಶಾದ್ಯಂತ ಜ...
03-12-25 07:19 pm
Jawaharlal Nehru, Babri Masjid, Sardar Patel,...
03-12-25 07:14 pm
ಅಮೆರಿಕದ ಡಾಲರ್ ಎದುರು ನೈಂಟಿ ಕ್ರಾಸ್ ಮಾಡಿದ ರೂಪಾಯಿ...
03-12-25 05:32 pm
04-12-25 06:39 pm
Mangalore Correspondent
ಅಜ್ಜನ ಕೈಹಿಡಿದು ಹೆದ್ದಾರಿ ದಾಟಿ ತಿಂಡಿಗೆ ಹೋಗಿದ್ದ...
04-12-25 12:38 pm
Cm Siddaramaiah Mangalore: ಆಹ್ವಾನ ಇಲ್ಲದೆ ನಾನೇ...
03-12-25 10:35 pm
Mangalore, CM Siddaramaiah, High Court: ಮಂಗಳೂ...
03-12-25 07:23 pm
CM Siddaramaiah, Mangalore, Narayan Guru: ದೇವ...
03-12-25 04:52 pm
04-12-25 04:18 pm
Bangalore Correspondent
ಹೊಸ ವರ್ಷದ ಸಂಭ್ರಮಾಚರಣೆಗೆ ಡ್ರಗ್ಸ್ ಮಾರಾಟ ಮಾಡಲು ಸ...
03-12-25 01:41 pm
ಲೈಂಗಿಕ ಸಮಸ್ಯೆಗಳಿಗೆ ಆಯುರ್ವೇದ ಔಷಧ ನೆಪದಲ್ಲಿ ವಂಚನ...
02-12-25 10:48 pm
ಇನ್ನೋವಾ ಕಾರಿನಲ್ಲಿ ನಾಲ್ಕು ಕರುಗಳನ್ನು ಸಾಗಿಸುತ್ತಿ...
02-12-25 06:37 pm
ರೈಲಿನಲ್ಲಿ ಬಂದು ನಿಲ್ಲಿಸಿದ್ದ ಸ್ಕೂಟರ್ ಕಳವುಗೈದು ಪ...
02-12-25 02:26 pm