ಬ್ರೇಕಿಂಗ್ ನ್ಯೂಸ್
29-06-21 09:50 pm Satish, HK Staff ಕ್ರೈಂ
ಹೈದರಾಬಾದ್, ಜೂನ್ 29: ಲಾಕ್ಡೌನ್ ಆಗಿ ವರ್ಕ್ ಫ್ರಂ ಹೋಮ್ ನಡೆಸುತ್ತಿದ್ದ ಸಾಫ್ಟ್ ವೇರ್ ಇಂಜಿನಿಯರ್ ಯುವತಿ ನಾಪತ್ತೆಯಾಗಿದ್ದಳು. ಪತ್ನಿಗೆ ಕೊರೊನಾ ಡೆಲ್ಟಾ ವೈರಸ್ ಬಂದು ಸಾವು ಕಂಡಿದ್ದಾಳೆಂದು ಕತೆ ಕಟ್ಟಿದ್ದ ಪತಿ. ಆದರೆ, ಪಾಪಿ ಪತಿರಾಯನ ಕೃತ್ಯವನ್ನು ಬಿಚ್ಚಿಟ್ಟಿತ್ತು ಕೆಂಪು ಸೂಟ್ ಕೇಸ್.. ಹೌದು.. ಟೆಕ್ಕಿ ಪತ್ನಿಯನ್ನು ಗಂಡನೇ ಕೊಂದು ಹಾಕಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ ಪ್ರಕರಣ ತಿರುಪತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ರಾಮಸಮುದ್ರಂ ನಿವಾಸಿಯಾಗಿದ್ದ ಭುವನೇಶ್ವರಿ(27) ಹೈದರಾಬಾದ್ ನಲ್ಲಿ ಸಾಫ್ಟ್ ವೇರ್ ಕಂಪನಿಯಲ್ಲಿ ಟೆಕ್ಕಿ ಆಗಿದ್ದ ಯುವತಿ. 2019ರಲ್ಲಿ ಈಕೆಯನ್ನು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ಕಡಪ ಜಿಲ್ಲೆಯ ಶ್ರೀಕಾಂತ್ ರೆಡ್ಡಿ ಎಂಬಾತ ಮದುವೆಯಾಗಿದ್ದ. ಹೈದರಾಬಾದ್ ನಲ್ಲೇ ನೆಲೆಸಿದ್ದ ದಂಪತಿಗೆ ಒಂದೂವರೆ ವರ್ಷದ ಮಗುವಿತ್ತು.
ಆನ್ಲೈನ್ ಕಂಪನಿ ಒಂದರಲ್ಲಿ ಕೆಲಸಕ್ಕಿದ್ದ ಶ್ರೀಕಾಂತ್ ರೆಡ್ಡಿ ಕಳೆದ ವರ್ಷ ಲಾಕ್ಡೌನ್ ಸಂದರ್ಭದಲ್ಲಿ ಕೆಲಸ ಕಳಕೊಂಡಿದ್ದ. ಆಬಳಿಕ ಖಿನ್ನತೆಗೆ ಒಳಗಾಗಿದ್ದ ಶ್ರೀಕಾಂತ್ ಕುಡಿತದ ಚಟಕ್ಕೆ ಒಳಗಾಗಿದ್ದ. ಅಲ್ಲದೆ, ಪತ್ನಿಯ ಜೊತೆ ಜಗಳವನ್ನೂ ಆರಂಭಿಸಿದ್ದ. ಇದೇ ಕಾರಣಕ್ಕೆ ಶ್ರೀಕಾಂತ್ ರೆಡ್ಡಿ ತನ್ನ ಮನೆಯನ್ನು ಇತ್ತೀಚೆಗೆ ಹೈದರಾಬಾದ್ ನಗರದಿಂದ ದೇಗುಲ ನಗರಿ ತಿರುಪತಿಗೆ ಸ್ಥಳಾಂತರ ಮಾಡಿದ್ದ. ಆದರೆ, ಪತ್ನಿ ಹೈದಾರಾಬಾದ್ ನಲ್ಲಿ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸಕ್ಕಿದ್ದುದರಿಂದ ಶ್ರೀಕಾಂತ್ ರೆಡ್ಡಿ ಮನೆ ಬದಲಾಯಿಸಿದ್ದು ಕಷ್ಟಕ್ಕೀಡು ಮಾಡಿತ್ತು.
ಆದರೆ, ಈ ಬಾರಿ ಲಾಕ್ಡೌನ್ ಆಗಿದ್ದರಿಂದ ಭುವನೇಶ್ವರಿ ಮನೆಯಿಂದಲೇ ವರ್ಕ್ ಮಾಡುತ್ತಿದ್ದಳು. ವಾರದ ಹಿಂದೆ ಇದೇ ವಿಚಾರದಲ್ಲಿ ದಂಪತಿಯ ಮಧ್ಯೆ ಜಗಳ ನಡೆದಿದೆ ಎನ್ನಲಾಗಿದ್ದು, ಜೂನ್ 22- 23ರಂದು ರಾತ್ರಿ ಶ್ರೀಕಾಂತ್ ರೆಡ್ಡಿ ತನ್ನ ಫ್ಲಾಟ್ ನಲ್ಲಿ ಭುವನೇಶ್ವರಿಯನ್ನು ಕೊಲೆ ಮಾಡಿದ್ದಾನೆ. ಕೊಲೆಯ ಬಳಿಕ ಶವವನ್ನು ತುಂಡರಿಸಿ, ಸೂಟ್ ಕೇಸ್ ಬಾಕ್ಸ್ ನಲ್ಲಿಟ್ಟು ಹೊರಗಡೆ ಸಾಗಿಸಿದ್ದಾನೆ. ಬಾಡಿಗೆ ವಾಹನದಲ್ಲಿ ಸೂಟ್ ಕೇಸ್ ಬಾಕ್ಸನ್ನು ತುಸು ದೂರದ ಆಸ್ಪತ್ರೆಯೊಂದರ ಆವರಣಕ್ಕೆ ಕೊಂಡೊಯ್ದು ಪೆಟ್ರೋಲ್ ಸುರಿದು ಬೆಂಕಿ ಕೊಟ್ಟು ಸುಟ್ಟಿದ್ದಾನೆ. ಕೃತ್ಯಕ್ಕೆ ಬಾಡಿಗೆ ಕಾರಿನಲ್ಲಿ ಬಂದಿದ್ದ ಚಾಲಕ ಸಾಥ್ ನೀಡಿದ್ದ.
ಎರಡು ದಿನಗಳ ಬಳಿಕ ಆಸ್ಪತ್ರೆ ಆವರಣದಲ್ಲಿ ಅರೆಬರೆ ಸುಟ್ಟ ಶವ ಪತ್ತೆಯಾಗಿದ್ದು ತಿರುಪತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಯಾರ ಶವ ಎನ್ನುವುದು ತಿಳಿಯದೇ ಆಸ್ಪತ್ರೆ ಆವರಣದ ಸಿಸಿಟಿವಿ ಪರಿಶೀಲನೆ ನಡೆಸಿದ್ದರು. ಆ ಸಂದರ್ಭದಲ್ಲಿ ಟ್ಯಾಕ್ಸಿ ಕಾರು ಬಂದಿದ್ದು, ಅದರಲ್ಲಿ ಭಾರದ ಸೂಟ್ ಕೇಸ್ ಒಂದನ್ನು ದೂಡಿಕೊಂಡು ಹೋಗಿದ್ದು ಕಂಡುಬಂದಿತ್ತು. ಪೊಲೀಸರು ಕಾರು ಚಾಲಕನನ್ನು ಪತ್ತೆ ಮಾಡಿ, ವಿಚಾರಣೆ ನಡೆಸಿದಾಗ ಕೊಲೆ ವಿಷಯ ಬೆಳಕಿಗೆ ಬಂದಿದೆ.
ಡೆಲ್ಟಾ ವೈರಸಿಗೆ ಸಾವು ಕಂಡಿದ್ದಳೆಂದು ಕತೆಕಟ್ಟಿದ್ದ
ಇದಕ್ಕೂ ಮುನ್ನ ಶ್ರೀಕಾಂತ್ ರೆಡ್ಡಿ ತನ್ನ ಪತ್ನಿ ಭುವನೇಶ್ವರಿಗೆ ಕೊರೊನಾ ರೂಪಾಂತರಿ ಡೆಲ್ಟಾ ಸೋಂಕು ಆಗಿದ್ದು, ಅದರಿಂದ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾಳೆ. ಶವವನ್ನು ಆಸ್ಪತ್ರೆಯಿಂದ ಮರಳಿ ಕೊಡದೇ ಅಲ್ಲಿಯೇ ಸುಟ್ಟು ಹಾಕಿದ್ದಾರೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದ. ಕೊರೊನಾ ಸೋಂಕಿನ ತೀವ್ರತೆ ಹೆಚ್ಚಿದ್ದರಿಂದ ಆಕೆಯ ಕುಟುಂಬಸ್ಥರು ಕೂಡ ಅದನ್ನೇ ನಂಬಿದ್ದರು. ಆದರೂ ಕೂಡ ಯಾವ ಆಸ್ಪತ್ರೆಯಲ್ಲಿ ಸಾವು ಆಗಿದೆ ಅನ್ನೋದ್ರ ಬಗ್ಗೆ ಹುಡುಕಾಟವನ್ನೂ ನಡೆಸಿದ್ದರು. ಶ್ರೀಕಾಂತ್ ರೆಡ್ಡಿ ಯಾವ ಆಸ್ಪತ್ರೆಯೆಂದು ಸರಿಯಾದ ಮಾಹಿತಿ ನೀಡಿರಲಿಲ್ಲ.
ಇದೇ ವೇಳೆಗೆ, ಸುಟ್ಟು ಹೋಗಿದ್ದ ಶವ ಪತ್ತೆಯಾಗಿದ್ದು ಸುದ್ದಿಯಾಗಿತ್ತು. ಅಲ್ಲದೆ, ಒಂದೇ ದಿನದ ಅಂತರದಲ್ಲಿ ಕಾರು ಚಾಲಕ ಬಂಧನ ಆಗಿದ್ದು, ಭುವನೇಶ್ವರಿ ಕೊಲೆ ವಿಚಾರವನ್ನು ಬಾಯ್ಬಿಟ್ಟಿದ್ದ. ಆದರೆ, ಸಾಕ್ಷ್ಯ ಕಲೆ ಹಾಕುವುದಕ್ಕಾಗಿ ಪೊಲೀಸರು ಶ್ರೀಕಾಂತ್ ರೆಡ್ಡಿ ವಾಸವಿದ್ದ ಅಪಾರ್ಟ್ಮೆಂಟ್ ಆವರಣದ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿಯಲ್ಲಿ ಕೆಂಪು ಬಣ್ಣದ ರಿಲಯನ್ಸ್ ಮಾರ್ಟಿನ ದೊಡ್ಡ ಗಾತ್ರದ ಸೂಟ್ ಕೇಸನ್ನು ಮನೆಗೆ ತರುತ್ತಿರುವುದು ಪತ್ತೆಯಾಗಿದೆ. ಅದಲ್ಲದೆ, ಬ್ಯಾಗನ್ನು ಸಾದಾ ಸೀದಾ ಹಿಡಿದುಕೊಂಡು ಬಂದಿದ್ದ ಶ್ರೀಕಾಂತ್, ಅದೇ ದಿನ ಮರಳಿ ಒಯ್ಯುತ್ತಿದ್ದಾಗ ಭಾರ ಇದ್ದುದರಿಂದ ಒಂದು ಕೈಯಲ್ಲಿ ಮಗುವನ್ನು ಹಿಡಿದುಕೊಂಡು ಬ್ಯಾಗನ್ನು ಎಳೆದುಕೊಂಡು ಹೋಗಿದ್ದು ಕಂಡುಬಂದಿತ್ತು. ಇಷ್ಟಾಗುತ್ತಿದ್ದಂತೆ, ಶ್ರೀಕಾಂತ್ ರೆಡ್ಡಿ ತಿರುಪತಿಯಿಂದ ಎಸ್ಕೇಪ್ ಆಗಿದ್ದು ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
Hyderabad Man sets techie wife on fire says his family died of the Delta Plus variant. Police have identified the charred body found stuffed inside a suitcase near SVRR Government Hospital five days ago as that of a 27-year-old techie from Hyderabad. The main suspect in the case is her husband, who is believed to have killed her and fled.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm