ಕೇಂದ್ರದ ಮಾಜಿ ಸಚಿವ ಕುಮಾರಮಂಗಲಂ ಪತ್ನಿಯ ಬರ್ಬರ ಕೊಲೆ

07-07-21 11:46 am       Headline Karnataka News Network   ಕ್ರೈಂ

ಕೇಂದ್ರದ ಮಾಜಿ ಸಚಿವ ಪಿ.ಆರ್. ಕುಮಾರಮಂಗಲಂ ಅವರ ಪತ್ನಿಯನ್ನು ದೆಹಲಿಯ ಮನೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ನವದೆಹಲಿ, ಜುಲೈ 07: ಕೇಂದ್ರದ ಮಾಜಿ ಸಚಿವ ಪಿ.ಆರ್. ಕುಮಾರಮಂಗಲಂ ಅವರ ಪತ್ನಿಯನ್ನು ದೆಹಲಿಯ ಮನೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಕುಮಾರಮಂಗಲಂ ಪತ್ನಿ ಕಿಟ್ಟು ಕುಮಾರಮಂಗಲಂ ಮಂಗಳವಾರ ರಾತ್ರಿ ಅವರ ವಸಂತ ವಿಹಾರದಲ್ಲಿರುವ ನಿವಾಸದಲ್ಲಿ ಹತ್ಯೆಯಾಗಿರುವ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದ್ದು, ಮತ್ತಿಬ್ಬರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಸೌತ್‌ವೆಸ್ಟ್ ಡಿಸಿಪಿ ಮಾಹಿತಿ ನೀಡಿದ್ದಾರೆ.

ಅವರ ಪತಿ ಪಿಆರ್ ಕುಮಾರಮಂಗಲಂ ಅವರು ಪಿವಿ ನರಸಿಂಹರಾವ್ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಬಿಜೆಪಿಗೆ ಸೇರ್ಪಡೆಯಾಗಿದ್ದರು. ವಾಜಪೇಯಿ ಸರ್ಕಾರದಕ್ಕೂ ಸಚಿವರಾಗಿದ್ದರು.

ಮಂಗಳವಾರ ರಾತ್ರಿ 9ರ ಸುಮಾರಿಗೆ ಕಿಟ್ಟಿ ಕುಮಾರಮಂಗಲಂ (67) ಅವರು ಮನೆಯಲ್ಲಿ ಮನೆಗೆಲಸದಾಕೆ ಜತೆಗೆ ಇದ್ದರು. ಅವರ ಬಟ್ಟೆಗಳನ್ನು ಸ್ವಚ್ಚಗೊಳಿಸುವ ಪರಿಚಿತ ಧೋಬಿ, ಇನ್ನಿಬ್ಬರೊಂದಿಗೆ ಮನೆಯೊಳಗೆ ನುಗ್ಗಿದ್ದ ಎಂದು ಮನೆಗೆಲಸದ ಸಹಾಯಕಿ ತಿಳಿಸಿದ್ದಾಳೆ.

ಧೋಬಿಯು ತನ್ನನ್ನು ಕೊಠಡಿಯೊಂದರಲ್ಲಿ ಕಟ್ಟಿಹಾಕಿ, ಕಿಟ್ಟಿ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ದಾಳಿಯ ಸೂಚನೆ ಅರಿತ ಕಿಟ್ಟಿ ಅವರು ಅಲಾರಂ ಸ್ವಿಚ್ ಒತ್ತಿದ್ದರು. ಇದರಿಂದ ಗಾಬರಿಗೊಂಡ ದುಷ್ಕರ್ಮಿಗಳು ಅವರನ್ನು ದಿಂಬು ಒತ್ತಿಹಿಡಿದು ಉಸಿರುಗಟ್ಟಿಸಿ ಕೊಂದು ಪರಾರಿಯಾಗಿದ್ದಾರೆ. ಅವರು ದರೋಡೆ ಉದ್ದೇಶದಿಂದ ಬಂದಿದ್ದರು ಎಂದು ಸಹಾಯಕಿ ತಿಳಿಸಿದ್ದಾಳೆ. ರಾತ್ರಿ 11ರ ಸುಮಾರಿಗೆ ಮಾಹಿತಿ ತಿಳಿದು ಬಂದ ಪೊಲೀಸರು, ಮನೆಗೆಲಸದಾಕೆ ನೀಡಿದ ಸುಳಿವಿನ ಆಧಾರದಲ್ಲಿ ಧೋಬಿಯನ್ನು ಬಂಧಿಸಿದ್ದಾರೆ. ಆತನಿಗೆ ಸಹಾಯ ಮಾಡಿದ ಇನ್ನಿಬ್ಬರು ನಾಪತ್ತೆಯಾಗಿದ್ದಾರೆ.

ಕಿಟ್ಟಿ ಕುಮಾರಮಂಗಲಂ ಅವರು ಸುಪ್ರೀಂಕೋರ್ಟ್ ವಕೀಲೆಯಾಗಿ ಕಾರ್ಯನಿರ್ವಹಿಸಿದ್ದರು. ಅವರ ಪತಿ ಪಿ. ರಂಗರಾಜನ್ ಕುಮಾರಮಂಗಲಂ ಅವರು 1984ರಲ್ಲಿ ಮೊದಲ ಬಾರಿ ಲೋಕಸಭೆಗೆ ಚುನಾಯಿತರಾಗಿದ್ದರು. 1991-92ರ ಅವಧಿಯಲ್ಲಿ ರಾಜ್ಯ, ಸಂಸದೀಯ ವ್ಯವಹಾರಗಳು ಮತ್ತು ಕಾನೂನು, ನ್ಯಾಯ ಹಾಗೂ ಕಂಪೆನಿ ವ್ಯವಹಾರಗಳ ಸಚಿವರಾಗಿದ್ದರು. 1992-93ರಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರೆ, 1998ರಲ್ಲಿ ಕೇಂದ್ರ ವಿದ್ಯುತ್ ಸಚಿವರಾಗಿದ್ದರು.

ತಮಿಳುನಾಡು ಮೂಲದವರಾದ ಕುಮಾರಮಂಗಲಂ ಅವರು 2000ದ ಆಗಸ್ಟ್ 23ರಂದು ತಮ್ಮ 48ನೇ ವಯಸ್ಸಿನಲ್ಲಿ ರಕ್ತ ಕ್ಯಾನ್ಸರ್‌ನಿಂದ ನಿಧನರಾಗಿದ್ದರು. ಆ ವೇಳೆ ಅವರು ವಾಜಪೇಯಿ ಸರಕಾರದಲ್ಲಿ ವಿದ್ಯುತ್ ಖಾತೆ ಸಚಿವರಾಗಿದ್ದರು. ಮೂಲತಃ ಕಾಂಗ್ರೆಸ್ ನಾಯಕರಾಗಿದ್ದ ಅವರು ಬಳಿಕ ಬಿಜೆಪಿ ಸೇರ್ಪಡೆಯಾಗಿದ್ದರು.

ತಮಿಳುನಾಡು ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಲ್ಲಿ ಒಬ್ಬರಾಗಿರುವ ಅವರ ಮಗ ಮೋಹನ್ ಕುಮಾರಮಮಂಗಲಂ ಅವರು ದಿಲ್ಲಿಗೆ ತೆರಳಿದ್ದಾರೆ.

Kitty Kumaramangalam (in pic 1), wife of late ex-Union Min P Rangarajan Kumaramangalam murdered last night.

Her house help said that laundryman came to the house around 8.30 pm. 2 more persons came who tied the maid & murdered Kitty Kumaramangalam. Laundryman arrested: Police pic.twitter.com/bQnHVhPawH

— ANI (@ANI) July 7, 2021

Kitty Kumaramangalam, the wife of late former Union minister P. Rangarajan Kumaramangalam, was found murdered at her home in southwest Delhi’s Vasant Vihar, police said on Wednesday.