ಪೊಲೀಸರ ಬಗ್ಗೆ ಅವಹೇಳನ ಪೋಸ್ಟ್ ; ಹಲ್ಲೆಗೆ ಪ್ರಚೋದಿಸಿದ ಸಿಎಎ ಪ್ರತಿಭಟನೆ ಪ್ರೇರಿತ ಆರೋಪಿ ಬಂಧನ

07-07-21 02:29 pm       Mangalore Correspondent   ಕ್ರೈಂ

2019ರಲ್ಲಿ ನಡೆದ ಸಿಎಎ, ಎನ್ಆರ್ ಸಿ ಕಾಯಿದೆ ವಿರೋಧಿಸಿ ನಡೆದ ಪ್ರತಿಭಟನೆ ಮತ್ತು ಫೇಸ್ಬುಕ್ ನಲ್ಲಿ ಪೊಲೀಸರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ ವ್ಯಕ್ತಿಯೊಬ್ಬನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. 

ಮಂಗಳೂರು, ಜುಲೈ 7: 2019ರಲ್ಲಿ ನಡೆದ ಸಿಎಎ, ಎನ್ಆರ್ ಸಿ ಕಾಯಿದೆ ವಿರೋಧಿಸಿ ನಡೆದ ಪ್ರತಿಭಟನೆ ಮತ್ತು ಮಂಗಳೂರು ಗಲಭೆಯ ಹಿನ್ನೆಲೆಯಲ್ಲಿ ಫೇಸ್ಬುಕ್ ನಲ್ಲಿ ಪೊಲೀಸರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದಲ್ಲದೆ, ಗಲಭೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಚಿತ್ರದುರ್ಗ ಮೂಲದ ವ್ಯಕ್ತಿಯೊಬ್ಬನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. 

ಯೋಗಿ ಯೋಗೇಶ್ ಎಂಬ ನಕಲಿ ಫೇಸ್ಬುಕ್ ಖಾತೆಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಲು ಮತ್ತು ಪೊಲೀಸರ ಕುಟುಂಬಸ್ಥರ ಮನೆಯಲ್ಲಿ ಭಯ ಮೂಡಿಸುವ ರೀತಿ ಪೋಸ್ಟ್ ಹಾಕಲಾಗಿತ್ತು. ಪೊಲೀಸರ ಮನೆಗೆ ನುಗ್ಗಿ ಹೆಂಗಸರನ್ನು ಅತ್ಯಾಚಾರ ಮಾಡಿ ಸುಟ್ಟಾಕಬೇಕು ಎಂದು ಬರೆದು ಮನಸ್ಸುಗಳ ಮಾತು ಮಧುರ ಎಂಬ ಫೇಸ್ಬುಕ್ ಪೇಜಿಗೆ ಟ್ಯಾಗ್ ಮಾಡಿರುವುದನ್ನು ಸ್ಕ್ರೀನ್ ಶಾಟ್ ತೆಗೆದು ವಾಟ್ಸಪ್ ಜಾಲತಾಣದಲ್ಲಿ ಪ್ರಸಾರ ಮಾಡಿ ಕೃತ್ಯಕ್ಕೆ ಪ್ರಚೋದನೆ ಮಾಡುವ ಉದ್ದೇಶದಿಂದ ಒಳಸಂಚು ಮಾಡಲಾಗಿತ್ತು. ಈ ಬಗ್ಗೆ ಮಂಗಳೂರು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಪ್ರಕರಣ ಸಂಬಂಧಿಸಿ ಜುಲೈ 2ರಂದು ಆರೋಪಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಪಾಲವ್ವನಹಳ್ಳಿ ಎಂಬ ಗ್ರಾಮದ ನಿವಾಸಿ ಯೋಗೀಶ ಎನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

Derogatory post against Police during CAA in Mangalore one arrested. Derogatory post was continually made on Police personnel and their families.