ಬ್ರೇಕಿಂಗ್ ನ್ಯೂಸ್
08-07-21 03:21 pm Bangalore Correspondent ಕ್ರೈಂ
ಬೆಂಗಳೂರು, ಜುಲೈ 8 : ಸಬ್ಇನ್ಸ್ಪೆಕ್ಟರ್ ಹುದ್ದೆ ಕೊಡಿಸುವುದಾಗಿ ಹೇಳಿ ಆರು ಜನರಿಂದ ಒಂದು ಕೋಟಿ ರೂಪಾಯಿ ಲಂಚ ಪಡೆದು ವಂಚಿಸಿದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಎಂದು ಕೆಪಿಎಸ್ಸಿ ಹೆಸರು ಹೇಳಿಕೊಂಡು ನಂಬಿಸಿದ್ದ ಅರುಣ್ ಕುಮಾರ್ ಎಂಬಾತ ಬಂಧಿತ ವ್ಯಕ್ತಿ. ತಾನು ಪ್ರಭಾವಿ ವ್ಯಕ್ತಿಯೆಂದೂ, ಎಸ್ಐ ಹುದ್ದೆ ಕೊಡಿಸುವೆನೆಂದೂ ಹೇಳಿ ಲಂಚ ಪಡೆದಿದ್ದ. ಆತನನ್ನು ನಂಬಿದ್ದ ಆರು ಜನ ಒಟ್ಟು ಒಂದು ಕೋಟಿ ರೂಪಾಯಿ ನೀಡಿದ್ದರು.
ಈ ಬಗ್ಗೆ ಮೋಸ ಹೋದ ದಾವಣಗೆರೆಯ ಬಿ.ಜಯದೇವ ಎಂಬವರು ಪೊಲೀಸರಿಗೆ ದೂರು ನೀಡಿದ್ದರು. ಕೆ.ಹೆಚ್.ಅರುಣ್ ಕುಮಾರ್ ಮಾತನ್ನು ನಂಬಿ ಜಯದೇವ ಅವರ ಸ್ನೇಹಿತರಾದ ಲಕ್ಷ್ಮಪ್ಪ ಮತ್ತು ಚಂದ್ರಪ್ಪ ಎಂಬ ಇಬ್ಬರು ಎಸ್ಐ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ತನಗೆ ಎಲ್ಲರ ಲಿಂಕ್ ಇದೆ ಎಂದು ಹೇಳಿಕೊಂಡಿದ್ದ ಅರುಣ್ ಕುಮಾರ್, ಸ್ನೇಹಿತರಿಗೆ ಎಸ್ಐ ಹುದ್ದೆ ಕೊಡಿಸುತ್ತೇನೆ ಎಂದು ಹೇಳಿ 70 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ.
2020ನೇ ಇಸವಿಯ ಜನವರಿ 30ರಂದು 15 ಲಕ್ಷ ರೂ. ಹಣ ವರ್ಗಾವಣೆ ಮಾಡಿಸಿಕೊಂಡಿದ್ದ ಅರುಣ್ ಕುಮಾರ್, ಕೆಲ ದಿನಗಳ ನಂತರ ಮತ್ತೆ 20 ಲಕ್ಷ ರೂಪಾಯಿ ಹಣವನ್ನು ತರಿಸಿಕೊಂಡಿದ್ದ. ಇಷ್ಟು ಕೊಟ್ಟ ನಂತರವೂ ಮತ್ತೆ 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಇದೇ ರೀತಿ ಒಟ್ಟು 6 ಜನರಿಗೆ ಮೋಸ ಮಾಡಿದ್ದ ಆತ ಒಂದು ಕೋಟಿ ರೂಪಾಯಿಗೂ ಹೆಚ್ಚು ವಂಚಿಸಿದ್ದಾನೆ ಎಂಬ ಆರೋಪಗಳಿವೆ.
ಈ ಬಗ್ಗೆ ದೂರು ದಾಖಲಿಸಿದ್ದ ದಾವಣಗೆರೆಯ ಬಿ.ಜಯದೇವ ಎನ್ನುವವರು ಅರುಣ್ ಕುಮಾರ್ ವಿರುದ್ಧ ವಂಚನೆ ಆರೋಪ ಮಾಡಿದ್ದರು. ಇದಕ್ಕೆ ಸಂಬಂಧಿಸಿ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿ ಅರುಣ್ ಕುಮಾರ್ನನ್ನು ಕೆಲವು ದಿನಗಳ ಹಿಂದೆ ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದೀಗ ಆತನನ್ನು ವಿಧಾನಸೌಧ ಪೊಲೀಸರಿಗೆ ಹಸ್ತಾಂತರ ಮಾಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
The Bangalore CCB Police have succeeded in arresting a person who was cheating people of giving Sub Inspector Job in the Police department. The arrested has been identified as Arun Kumar.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm