ಅರುಣಾಚಲ ; ಜೈಲು ಸಿಬಂದಿಗೆ ಮೆಣಸಿನ ಪುಡಿ ಎರಚಿ ಕೈದಿಗಳು ಪರಾರಿ !

13-07-21 12:30 pm       Headline Karnataka News Network   ಕ್ರೈಂ

ಅರುಣಾಚಲ ಪ್ರದೇಶದ ಜೈಲಿನಲ್ಲಿ ಏಳು ಕೈದಿಗಳು ಅಲ್ಲಿನ ಕಾವಲು ಸಿಬಂದಿಗೆ ಮೆಣಸಿನಕಾಯಿ ಪುಡಿ ಎರಚಿ ತಪ್ಪಿಸಿಕೊಂಡಿರುವ ಘಟನೆ ನಡೆದಿದೆ. 

ಇಟಾನಗರ, ಜು.13 : ಅರುಣಾಚಲ ಪ್ರದೇಶದ ಜೈಲಿನಲ್ಲಿ ಏಳು ಕೈದಿಗಳು ಅಲ್ಲಿನ ಕಾವಲು ಸಿಬಂದಿಗೆ ಮೆಣಸಿನಕಾಯಿ ಪುಡಿ ಎರಚಿ ತಪ್ಪಿಸಿಕೊಂಡಿರುವ ಘಟನೆ ನಡೆದಿದೆ. 

ರಾಜ್ಯದ ಪೂರ್ವ ಸಿಯಾಂಗ್ ಜಿಲ್ಲೆಯಲ್ಲಿ ಭಾನುವಾರ ಘಟನೆ ನಡೆದಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಕೈದಿಗಳು ತಪ್ಪಿಸುವ ವೇಳೆ ಐದು ಮಂದಿ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ.

ಕೈದಿಗಳು ತಪ್ಪಿಸಿಕೊಳ್ಳಲು ಮುಂಚಿತವಾಗಿಯೇ ತಯಾರಿ ನಡೆಸುತ್ತಿದ್ದರು ಎನ್ನಲಾಗಿದೆ. ತಪ್ಪಿಸಿಕೊಂಡ ಕೈದಿಗಳನ್ನು ಅಭಿಜಿತ್ ಗೊಗೊಯ್, ತಾರೋ ಹಮಾಮ್, ಕಲೋಮ್ ಅಪಾಂಗ್, ತಾಲೂಮ್ ಪ್ಯಾನಿಂಗ್, ಸುಬಾಶ್ ಮೊಂಡಾಲ್, ರಾಜಾ ತೆಯೆಂಗ್, ಮತ್ತು ಡ್ಯಾನಿ ಗಮ್ಲಿನಾ ಎಂದು ಗುರುತಿಸಲಾಗಿದೆ.

ಭಾನುವಾರ ಸಂಜೆ 6.30 ರ ಸುಮಾರಿಗೆ ಈ ಘಟನೆ ನಡೆದಿದೆ. ಮೂಲಗಳ ಪ್ರಕಾರ, ಏಳು ಮಂದಿ ಕೈದಿಗಳು ಒಂದೇ ಸ್ಥಳದಲ್ಲಿ ಇದ್ದರು. ಊಟಕ್ಕೆ ಸೆಲ್‌ ತೆರೆದ ಸಂದರ್ಭದಲ್ಲಿ ಜೈಲಿನಲ್ಲಿದ್ದ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ ಓಡಿ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿದೆ.

'ಜೈಲಿನಿಂದ ಪರಾರಿಯಾದವರ ಪತ್ತೆ ಕಾರ್ಯವನ್ನು ಪ್ರಾರಂಭಿಸಲಾಗಿದೆ. ರಿಸರ್ವ್ ಬೆಟಾಲಿಯನ್‌ ಪೊಲೀಸರು ಮತ್ತು ಸಿಬ್ಬಂದಿಗಳು ಪೂರ್ವ ಸಿಯಾಂಗ್ ಪಟ್ಟಣದಲ್ಲಿ ಕಾರ್ಯಚರಣೆ ನಡೆಸುತ್ತಿದ್ದಾರೆ. ಎಲ್ಲಾ ನಿರ್ಗಮನ ಸ್ಥಳಗಳನ್ನು ಬಂದ್‌ ಮಾಡಲಾಗಿದೆ. ನಾವು ಶೀಘ್ರದಲ್ಲೇ ಕೈದಿಗಳನ್ನು ವಶಕ್ಕೆ ಪಡೆಯುತ್ತೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Seven under-trials have managed to escape from an Arunachal Pradesh jail, attacking and injuring at least five security personnel in the process. The prison break was reported on Sunday from the state's East Siang district, sources have said.