ಯುವಕರ ಆಟಕ್ಕೂ ಕೋಮು ಬಣ್ಣ ; ಜೊತೆಗೂಡಿ ಆಡುತ್ತಿದ್ದ ಯುವಕನನ್ನು ಮೈದಾನದಿಂದ ಹೊರದಬ್ಬಿದ ಕೋಮುವಾದಿ !

14-07-21 11:50 am       Mangalore Correspondent   ಕ್ರೈಂ

ದೇವಸ್ಥಾನದ ಆವರಣದಲ್ಲಿ ಅನ್ಯಕೋಮಿನ ಯುವಕನನ್ನು ಆಡದಂತೆ ಬೆದರಿಸಿ ಹೊರದಬ್ಬಿದ ಘಟನೆ ಸುಳ್ಯದ ಜಯನಗರ ಎಂಬಲ್ಲಿ ನಡೆದಿದೆ. 

ಸುಳ್ಯ, ಜುಲೈ 14 : ದೇವಸ್ಥಾನದ ಆವರಣದಲ್ಲಿ ಅನ್ಯಕೋಮಿನ ಯುವಕನನ್ನು ಆಡದಂತೆ ಬೆದರಿಸಿ ಹೊರದಬ್ಬಿದ ಘಟನೆ ಸುಳ್ಯದ ಜಯನಗರ ಎಂಬಲ್ಲಿ ನಡೆದಿದ್ದು, ಇದರ ವೀಡಿಯೋ ವೈರಲ್ ಆಗಿದೆ. 

ಮೂರು ದಿನಗಳ ಹಿಂದೆ ಘಟನೆ ನಡೆದಿದ್ದು ಜಯನಗರದ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ಹಾಗೂ ಸ್ವಾಮಿ ಕೊರಗಜ್ಜ ದೇವಸ್ಥಾನ ಕೊರಂಬಡ್ಕದ ಮೈದಾನದಲ್ಲಿ ಆಡವಾಡುತ್ತಿದ್ದ ಅನ್ಯಕೋಮಿನ ಯುವಕನನ್ನು ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ಎನ್ನಲಾದ ಪ್ರವೀಣ್ ಕುಮಾರ್ ಎಂಬ ವ್ಯಕ್ತಿ ನಿಂದಿಸಿ ಮೈದಾನದಿಂದ ಹೊರಹಾಕಿರುವ ವಿಡಿಯೋ ವೈರಲ್ ಆಗಿದೆ. 

ಹಿಂದೂ ಯುವಕರೊಂದಿಗೆ ಆಟವಾಡುತ್ತಿದ್ದ ಕ್ರಿಸ್ತಿಯನ್ ಯುವಕನನ್ನು ತರಾಟೆಗೆತ್ತಿಕೊಂಡು, ಈ ಮೈದಾನದಲ್ಲಿ ಯಾವುದೇ ಅನ್ಯಜಾತಿಯವರು ಆಡಬಾರದು ಎಂದು ತಾಕೀತು ಮಾಡುತ್ತಿರುವ ದೃಶ್ಯ ಸೆರೆಯಾಗಿದೆ. ಈ ವೇಳೆ ಇತರೇ ಹಿಂದು ಯುವಕರು ಆಕ್ಷೇಪಿಸಿದ್ದು ಆಟದಲ್ಲಿ ಕೋಮು ವಿಷ ಯಾಕೆ ತರುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ, ಯುವಕರ ಮಾತನ್ನು ಕೇಳದೆ ಕ್ರಿಸ್ತಿಯನ್ ಯುವಕನನ್ನು ಮೈದಾನದಿಂದ ಹೊರಗೆ ಹೋಗುವಂತೆ ಹೇಳಿ ದಬಾಯಿಸಿದ್ದಾನೆ. 

ಆಟಕ್ಕೆ ಯಾವುದೇ ಜಾತಿ, ಧರ್ಮದ ಹಂಗಿಲ್ಲ. ಆದರೆ ಹುಡುಗರು ಆಟವಾಡುತ್ತಿದ್ದಾಗ ದೇವಸ್ಥಾನಕ್ಕೆ ಸಂಬಂಧಪಟ್ಟ ವ್ಯಕ್ತಿಯೊಬ್ಬ ತರಾಟೆಗೆತ್ತಿಕೊಂಡು ಕೋಮು ವೈಷಮ್ಯ ಹುಟ್ಟಿಸುವ ರೀತಿ ಮಾತನಾಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Video: 

Temple authorities in Sullia Dakshin Kannada object to Hindu boys playing with Christian youths at the temple playground. Praveen Kumar of Swami Koragajja temple directs the Christian boy to get out of the ground. Asks him to go play at church ground & not to come here. This incident has created massive outrage among Christians on social media for inhuman religious tolerance.