ಅಶ್ಲೀಲ ಚಿತ್ರ ನಿರ್ಮಾಣ ಕೇಸ್ ; ಜುಲೈ 23ರ ವರೆಗೂ ರಾಜ್ ಕುಂದ್ರಗೆ ಪೊಲೀಸ್ ಕಸ್ಟಡಿಗೆ

20-07-21 06:01 pm       Headline Karnataka News Network   ಕ್ರೈಂ

ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣ ಸಂಬಂಧ ಬಂಧಿಸಲ್ಪಟ್ಟಿರುವ ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರ ಅವರನ್ನು ಜುಲೈ 23ರ ವರೆಗೂ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.

ಮುಂಬೈ; ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣ ಸಂಬಂಧ ಬಂಧಿಸಲ್ಪಟ್ಟಿರುವ ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರ ಅವರನ್ನು ಇಂದು ಮಂಗಳವಾರ ಎಸ್ಪ್ಲನೇಡ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಜುಲೈ 23ರ ವರೆಗೂ ರಾಜ್ ಕುಂದ್ರ ಅವರನ್ನು ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.

ನಿನ್ನೆ (ಜುಲೈ 19) ರಾತ್ರಿ ರಾಜ್ ಕುಂದ್ರ ಅವರನ್ನು ಬಂಧಿಸಿದ ಬಳಿಕ ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಾಗ್ರೇಲ್ ಈ ಬಗ್ಗೆ ಖಚಿತ ಪಡಿಸಿದ್ದರು. ರಾಜ್ ಕುಂದ್ರ ವಿರುದ್ಧ ಅಗತ್ಯ ಸಾಕ್ಷ್ಯ ಇದ್ದ ಕಾರಣ ಅವರನ್ನು ಬಂಧಿಸಲಾಗಿದೆ'' ಎಂದಿದ್ದರು.

'ನೀಲಿ ಚಿತ್ರಗಳನ್ನು ಚಿತ್ರೀಕರಿಸಿ ಅವುಗಳನ್ನು ವಿದೇಶಿ ಸರ್ವರ್‌ಗಳನ್ನು ಬಳಸಿ ಮೊಬೈಲ್‌ ಆಪ್‌ಗಳಿಗೆ ಅಪ್‌ಲೋಡ್ ಮಾಡಲಾಗುತ್ತಿತ್ತು. ಈ ಬಗ್ಗೆ ಇದೇ ಫೆಬ್ರವರಿಯಲ್ಲಿ ಮುಂಬೈ ಸೈಬರ್ ಕ್ರೈಂನಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಕ್ರೈಂ ಬ್ರ್ಯಾಂಚ್ ಮಾಡಿದ್ದು, ಪ್ರಕರಣದ ಮುಖ್ಯ ರೂವಾರಿಯಾದ ರಾಜ್ ಕುಂದ್ರಾ ಅನ್ನು ಬಂಧಿಸಲಾಗಿದೆ'' ಎಂದಿದ್ದರು.

ರಾಜ್ ಕುಂದ್ರಾ ಬಂಧನ ಆಗುತ್ತಿದ್ದಂತೆ, ಕುಂದ್ರಾ, ಪೋರ್ನ್ (ನೀಲಿ ಚಿತ್ರ) ಬಗ್ಗೆ ಮಾಡಿದ್ದ ಹಳೆಯ ಟ್ವೀಟ್ ಗಳು ವೈರಲ್ ಆಗುತ್ತಿವೆ. ವೇಶ್ಯಾವಾಟಿಕೆ ಮತ್ತು ಪೋರ್ನ್ ವಿಡಿಯೋಗಳ ಬಗ್ಗೆ 2012ರಲ್ಲಿ ರಾಜ್ ಕುಂದ್ರಾ ಟ್ವೀಟ್ ಮಾಡಿದ್ದರು, ''ಕ್ಯಾಮೆರಾದಲ್ಲಿ ಸೆರೆಯಾದ ಸೆಕ್ಸ್‌ ನೋಡಲು ಹಣ ತೆರುವುದು ಕಾನೂನುಬದ್ಧ ಆಗಿರುವಾಗ ವೇಶ್ಯಾವಾಟಿಕೆ ಏಕೆ ಕಾನೂನು ಬಾಹಿರ'' ಎಂದು ರಾಜ್ ಕುಂದ್ರಾ ಪ್ರಶ್ನೆ ಮಾಡಿದ್ದರು. ಆ ಮೂಲಕ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಟ್ವೀಟ್ ಈಗ ವೈರಲ್ ಆಗುತ್ತಿವೆ.

Raj Kundra sent to police custody till July 23 alleged chats become key evidence in case