ನೀರುಮಾರ್ಗ ಭಜನಾ ಮಂದಿರಕ್ಕೆ ನುಗ್ಗಿದ ಕಳ್ಳರು ; ಸಿಸಿ ಕ್ಯಾಮರಾದಲ್ಲಿ ಕಳವು ದೃಶ್ಯ ಸೆರೆ 

21-07-21 10:42 pm       Mangaluru Correspondent   ಕ್ರೈಂ

ಭಜನಾ ಮಂದಿರಕ್ಕೆ ಕಳ್ಳರು ನುಗ್ಗಿ ಕಾಣಿಕೆ ಡಬ್ಬಿ ಕಳವುಗೈದ ಘಟನೆ ನೀರುಮಾರ್ಗದಲ್ಲಿ ನಡೆದಿದ್ದು ಇದರ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.

ಮಂಗಳೂರು, ಜುಲೈ 21: ಭಜನಾ ಮಂದಿರಕ್ಕೆ ಕಳ್ಳರು ನುಗ್ಗಿ ಕಾಣಿಕೆ ಡಬ್ಬಿ ಕಳವುಗೈದ ಘಟನೆ ನೀರುಮಾರ್ಗದಲ್ಲಿ ನಡೆದಿದ್ದು ಇದರ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.

ನೀರುಮಾರ್ಗ ಜಂಕ್ಷನ್ ಬಳಿಯ ಸುಬ್ರಹ್ಮಣ್ಯ ಭಜನಾ ಮಂದಿರದ ಮುಂಭಾಗಕ್ಕೆ ಬುಧವಾರ ನಸುಕಿನ 1.45ರ ಸುಮಾರಿಗೆ ಬಂದಿದ್ದ ಕಳ್ಳರು ಬಾಗಿಲು ಬೀಗ ಮುರಿದು ಒಳನುಗ್ಗಿದ್ದಾರೆ‌. ಬಳಿಕ ಉತ್ತರದ ಬಾಗಿಲು ತೆರೆದು ಪ್ರಧಾನ ಗುಡಿಯ ಮುಂಭಾಗದಲ್ಲಿರುವ ಕಾಣಿಕೆ ಡಬ್ಬಿಯನ್ನು ಹೊರಗೆ ಸಾಗಿಸಿದ್ದಾರೆ. ಒಬ್ಬಾತ ಹರಿತವಾದ ಅಸ್ತ್ರವೊಂದರಿಂದ ಗರ್ಭಗುಡಿಯ ಬಾಗಿಲು ಮುರಿದು ಜಾಲಾಡಿದ್ದಾನೆ. ಕಾಣಿಕೆ ಡಬ್ಬಿಯಲ್ಲಿ ಮೂರೂವರೆ ಸಾವಿರ ರೂ.ಗೂ ಅಧಿಕ ಕಾಣಿಕೆ ಹಣ ಇತ್ತೆಂದು ತಿಳಿದು ಬಂದಿದೆ.

ಕಳ್ಳರ ಚಲನವಲನಗಳ ಸುಮಾರು 45 ನಿಮಿಷಗಳ ವೀಡಿಯೋ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಕೃತ್ಯದಲ್ಲಿ ಮೇಲ್ನೋಟಕ್ಕೆ ಇಬ್ಬರು ಶಾಮೀಲಾಗಿರುವುದು ತಿಳಿದು ಬಂದಿದೆ. ಚಪ್ಪಲಿ ಹಾಕಿಕೊಂಡೇ ಭಜನಾ ಮಂದಿರದ ಪ್ರಧಾನ ಗುಡಿ ಪ್ರವೇಶಿಸಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಇನ್ ಸ್ಪೆಕ್ಟರ್ ಜಾನ್ಸನ್ ಡಿಸೋಜ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ.

Mangalore Thieves steal Gold from Neermarga Bhajana Mandira recorded in CCTV. Case filed at Kankandy Rural police station.