ಬ್ರೇಕಿಂಗ್ ನ್ಯೂಸ್
23-07-21 06:03 pm Headline Karnataka News Network ಕ್ರೈಂ
ಮುಂಬೈ, ಜುಲೈ 23: ತಾಯಿಗೆ ಮಕ್ಕಳು ಹೆಗ್ಗಣ ಆಗಿದ್ದರೂ ಚಿನ್ನವಂತೆ. ಆದರೆ, ಮಕ್ಕಳಿಗೆ ಹಾಗೇನೂ ಇಲ್ವಲ್ಲ. ಇಲ್ಲೊಬ್ಬ 18 ವರ್ಷದ ಹುಡುಗ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ತಾಯಿಯನ್ನು ಮನೆಯೊಳಗೆ ಕೂಡಿಹಾಕಿ ಕುತ್ತಿಗೆ ಅಮುಕಿ ಕೊಲೆ ಮಾಡಿದ್ದಾನೆ. ಹೌದು.. ಮುಂಬೈನ ವಸಾಯಿ ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಕೋಲಿವಾಡದಲ್ಲಿ ಅಮಾನುಷ ಕೃತ್ಯ ಬೆಳಕಿಗೆ ಬಂದಿದೆ.
ಒಂದು ವರ್ಷದ ಹಿಂದೆ ಗಂಡ ತೀರಿಕೊಂಡ ಬಳಿಕ 59 ವರ್ಷದ ಮಹಿಳೆ ಕುಡಿಯಲು ತೊಡಗಿದ್ದರು. ಮನೆಯಲ್ಲಿ ಮಕ್ಕಳ ಜೊತೆ ಗಲಾಟೆ ಮಾಡುತ್ತಿದ್ದಳು ಎನ್ನಲಾಗಿದೆ. ಇದೇ ವಿಚಾರ ಇಬ್ಬರು ಮಕ್ಕಳು ಮತ್ತು ತಾಯಿ ನಡುವೆ ಕಂದಕ ತಂದಿಟ್ಟಿತ್ತು. ಮೊನ್ನೆ ರಾತ್ರಿ ಹತ್ತು ಗಂಟೆ ಸುಮಾರಿಗೆ ತಾಯಿ, ಮಕ್ಕಳ ನಡುವೆ ಜಗಳ ಆಗಿತ್ತು.

ಎಂಟನೇ ಕ್ಲಾಸ್ ಓದುತ್ತಿದ್ದ 18 ವರ್ಷದ ಹುಡುಗ, ತನ್ನ ತಂಗಿಯನ್ನು ಮನೆಯಿಂದ ಹೊರಗೆ ಹೋಗುವಂತೆ ಹೇಳಿದ್ದಾನೆ. ಆಕೆ ಹೊರ ನಡೆಯುತ್ತಿದ್ದಂತೆ, ಮನೆಯ ಬಾಗಿಲನ್ನು ಒಳಗಿಂದ ಲಾಕ್ ಮಾಡಿದ್ದ ಹುಡುಗ ತಾಯಿಯ ಕುತ್ತಿಗೆ ಬೆಲ್ಟ್ ನಲ್ಲಿ ಅದುಮಿದ್ದಾನೆ. ವಿಲವಿಲ ಒದ್ದಾಡಿ ಸಾಯುವ ತನಕವೂ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.
ಸ್ವಲ್ಪ ಹೊತ್ತಿನ ಬಳಿಕ ತಂಗಿ ಮನೆಗೆ ಮರಳಿದ್ದು, ಅಲ್ಲಿನ ದೃಶ್ಯ ನೋಡಿ ಹೌಹಾರಿದ್ದಾಳೆ. ತಾಯಿಯನ್ನೇ ಕೊಲೆ ಮಾಡಿದ್ದು ನೋಡಿ ಸ್ಥಳೀಯರನ್ನು ಕರೆದಿದ್ದಾಳೆ. ಬಳಿಕ ವಸಾಯಿ ಪೊಲೀಸರು ಕೂಡ ಸ್ಥಳಕ್ಕೆ ಬಂದಿದ್ದಾರೆ. ತಾಯಿಯನ್ನು ಕೊಲೆಗೈದ ಬಳಿಕ ಅಲ್ಲಿಯೇ ಕುಳಿತಿದ್ದ ಮಗನನ್ನು ವಶಕ್ಕೆ ಪಡೆದಿದ್ದಾರೆ. ತಂದೆಯ ಉಳಿಸಿದ್ದ ಹಣವನ್ನು ತಾಯಿ ಕುಡಿತಕ್ಕೇ ಮುಗಿಸುತ್ತಿದ್ದಾಳೆಂದು ಕೊಲೆ ಮಾಡಿದ್ದಾಗಿ ಹುಡುಗ ಹೇಳಿದ್ದಾನಂತೆ.
02-01-26 10:24 pm
HK News Desk
CM Siddaramaiah, Ballari Clash, MLA Bharat Re...
02-01-26 06:09 pm
Ballari Banner Fight, FIR, Death: ಬ್ಯಾನರ್ ವಿಚ...
02-01-26 04:13 pm
ಕೋಗಿಲು ಬಡಾವಣೆ ನಿರಾಶ್ರಿತರಿಗೆ ಮನೆ ಹಂಚಿಕೆ ; ವ್ಯಾ...
02-01-26 01:58 pm
ಎಲ್ಲರಂತೆ ನನಗೂ ಆಕಾಂಕ್ಷೆ ಇದೆ ; ಕುರ್ಚಿ ಫೈಟ್ ನಡು...
01-01-26 06:21 pm
02-01-26 06:43 pm
HK News Desk
ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದು ವ್ಯಕ್ತಿಗೆ ಬೆಂಕಿ ಹ...
01-01-26 09:34 pm
ಸ್ವಿಟ್ಜರ್ಲ್ಯಾಂಡ್ ನಲ್ಲಿ ಶೋಕವಾಗಿ ಮಾರ್ಪಟ್ಟ ಹೊಸ...
01-01-26 09:30 pm
ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದು ಯುವಕನ ಹತ್ಯೆ ;...
30-12-25 06:48 pm
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
02-01-26 09:32 pm
HK News Desk
ಕಿಲಿಮಂಜಾರೋ ಬಳಿಕ ಮೌಂಟ್ ಕೆನ್ಯಾ ಹತ್ತಿದ 11ರ ಪೋರ ;...
02-01-26 02:02 pm
Dr Vinaya Hegde Death, NItte Mangalore: ನಿಟ್ಟ...
01-01-26 09:43 am
ಧರ್ಮಸ್ಥಳ ಪ್ರಕರಣದಲ್ಲಿ ಕ್ಷೇತ್ರದ ಪರ ಬೆಳ್ತಂಗಡಿ ಕೋ...
31-12-25 10:57 pm
ಕೋಗಿಲು ಬಡಾವಣೆಯ ಅಕ್ರಮ ವಲಸಿಗರು ಎಲ್ಲಿಯವರು? ಇಲ್ಲಿ...
31-12-25 09:16 pm
02-01-26 12:58 pm
Mangalore Correspondent
ಮುಂಬೈ ಪೊಲೀಸ್ ಹೆಸರಲ್ಲಿ ಹೆದರಿಸಿ ಡಿಜಿಟಲ್ ಅರೆಸ್ಟ್...
02-01-26 12:32 pm
ಹೊಸ ವರ್ಷ ಸಂಭ್ರಮಾಚರಣೆ ; ಮಂಗಳೂರಿನಲ್ಲಿ ಒಂದು ಸಾವಿ...
01-01-26 08:25 pm
ಕಾರು ಬಾಡಿಗೆ ನೆಪದಲ್ಲಿ ಸುಳ್ಯದಿಂದ ಯುವಕನ ಕರೆದೊಯ್ದ...
31-12-25 07:05 pm
ಶಿರ್ವದಲ್ಲಿ ಸ್ಕೂಟರ್ ಕಳ್ಳತನ ; ಅಂತರ್ ಜಿಲ್ಲಾ ಕಳ್ಳ...
31-12-25 07:05 pm