ಬ್ರೇಕಿಂಗ್ ನ್ಯೂಸ್
28-07-21 05:33 pm Mangaluru Correspondent ಕ್ರೈಂ
ಮಂಗಳೂರು, ಜುಲೈ 28: ಇದೊಂದು ವಿಭಿನ್ನ ರೀತಿಯ ಹನಿಟ್ರ್ಯಾಪ್ ಪ್ರಕರಣ. ಮನೆಯಲ್ಲಿ ಪಾರ್ಟಿ ಮಾಡೋಣ ಎಂದು ಹೇಳಿ ಸ್ನೇಹಿತನೇ ಬ್ಲಾಕ್ಮೇಲ್ ಮಾಡಿದ ಪ್ರಕರಣ. ಅವರಿಬ್ಬರ ಮನೆಗಳೂ ಒಂದೇ ಅಪಾರ್ಟ್ಮೆಂಟ್ ನಲ್ಲಿದ್ದವು. ಆದರೆ, ಇತ್ತೀಚೆಗೆ ದುಬೈನಿಂದ ಬಂದಿದ್ದ ಒಬ್ಬಾತನಲ್ಲಿ ಹಣ ಇರುವುದನ್ನು ತಿಳಿದು ಸ್ನೇಹಿತನೇ ಯುವತಿಯ ಮೂಲಕ ದಾಳ ಎಸೆದು ಲಕ್ಷಾಂತರ ರೂಪಾಯಿ ಪೀಕಿಸಿದ್ದಾನೆ.
ಉಳ್ಳಾಲ ಠಾಣೆ ವ್ಯಾಪ್ತಿಯ ಇಂಪಾಲದಲ್ಲಿ ಘಟನೆ ನಡೆದಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳ್ಳಾಲದ ಅಜ್ವಿನ್ ಸಿ. (24) ಮತ್ತು ಜೋಕಟ್ಟೆ ನಿವಾಸಿ ಹತೀಜಮ್ಮ ಅಲಿಯಾಸ್ ಸಪ್ನಾ (23) ಬಂಧಿತರು. ಅಜ್ವಿನ್ ಮತ್ತು ದುಬೈನಿಂದ ಇತ್ತೀಚೆಗಷ್ಟೆ ಬಂದಿದ್ದ ಯುವಕ ಇಂಪಾಲ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಿದ್ದಾರೆ. ಇಬ್ಬರ ಫ್ಲಾಟ್ ಬೇರೆ ಬೇರೆಯಾಗಿದ್ದರೂ, ದುಬೈನಿಂದ ಬಂದ ವ್ಯಕ್ತಿಯಲ್ಲಿ ಹಣ ಇರುವುದನ್ನು ತಿಳಿದು ಅಜ್ವಿನ್ ಒಂದಷ್ಟು ದೋಚಲು ಪ್ಲಾನ್ ಹಾಕಿದ್ದ.

ಜುಲೈ 19ರಂದು ರಾತ್ರಿ 8.30ರ ಸುಮಾರಿಗೆ ಮನೆಯಲ್ಲಿ ಪಾರ್ಟಿ ಮಾಡೋಣ ಎಂದು ಹೇಳಿ, ದುಬೈ ಮೂಲದ ವ್ಯಕ್ತಿಯ ಮನೆಗೆ ಅಜ್ವಿನ್ ಆಗಮಿಸಿದ್ದಾನೆ. ಅಜ್ವಿನ್ ಜೊತೆಗೆ ಸಪ್ನಾ ಕೂಡ ಆತನ ಮನೆಗೆ ಬಂದಿದ್ದಳು. ಈ ವೇಳೆ, ಮದ್ಯ ಕುಡಿದು ಪಾರ್ಟಿ ಮಾಡಿದ ಬಳಿಕ ಅಜ್ವಿನ್ ಸ್ನೇಹಿತನಿಗೆ ಜ್ಯೂಸ್ ಕೊಡಿಸಿದ್ದಾನೆ. ಆದರೆ ಜ್ಯೂಸ್ ಕುಡಿದ ನಂತರ ದುಬೈ ವ್ಯಕ್ತಿ ನೆಲಕ್ಕೆ ಬಿದ್ದಿದ್ದು, ಪ್ರಜ್ಞೆ ತಪ್ಪಿದಂತಾಗಿದೆ. ಆನಂತರ ವ್ಯಕ್ತಿಯನ್ನು ವಿವಸ್ತ್ರ ಮಾಡಿದ್ದು, ಯುವತಿಯನ್ನು ಜೊತೆಗೆ ಕುಳ್ಳಿರಿಸಿ ಫೋಟೋ, ವಿಡಿಯೋ ತೆಗೆದಿದ್ದಾರೆ. ಅಲ್ಲದೆ, ಆತನ ಕೈಯಲ್ಲಿದ್ದ ನವರತ್ನದ ರಿಂಗ್ ಮತ್ತು ಕಪಾಟಿನಲ್ಲಿ ಇರಿಸಿದ್ದ 2.10 ಲಕ್ಷ ರೂಪಾಯಿ ನಗದನ್ನು ದೋಚಿ ಪರಾರಿಯಾಗಿದ್ದಾರೆ.
ಮರುದಿನ ಬೆಳೆಗ್ಗೆ ಪ್ರಜ್ಞೆಯಿಂದ ಎದ್ದ ದುಬೈ ವ್ಯಕ್ತಿಗೆ ತಾನು ಮೋಸ ಹೋಗಿದ್ದು ಅರಿವಾಗಿದೆ. ಅಲ್ಲದೆ, ತನ್ನ ಮೈಯಲ್ಲಿ ಬಟ್ಟೆ ಇಲ್ಲದಿರುವುದನ್ನು ಕಂಡು ಏನೋ ಹಿಕಮ್ಮತ್ ಆಗಿದೆ ಅಂದ್ಕೊಂಡಿದ್ದಾನೆ. ಅಲ್ಲದೆ, ಕಪಾಟು ನೋಡಿದಾಗ ನಗದು ಹಣ ಇಲ್ಲದಿರುವುದು ಕಂಡುಬಂದಿದೆ. ಕೂಡಲೇ ಆತ ಅಜ್ವಿನ್ ಫ್ಲಾಟಿಗೆ ತೆರಳಿದ್ದು, ತನ್ನ ಹಣ ಕದ್ದೊಯ್ದಿರುವುದನ್ನು ಮರಳಿಸುವಂತೆ ತಿಳಿಸಿದ್ದಾನೆ. ಆದರೆ, ಅಜ್ವಿನ್ ಹಣವನ್ನು ಮರಳಿ ಕೊಡುತ್ತೇನೆ ಎನ್ನುತ್ತಲೇ ತನ್ನ ಮೊಬೈಲಲ್ಲಿ ಆತನ ನಗ್ನ ವಿಡಿಯೋ ಇರುವುದನ್ನು ತೋರಿಸಿದ್ದಾನೆ. ವಿಡಿಯೋ ಮುಂದಿಟ್ಟು ಹಣವನ್ನು ಮರಳಿಸುವುದಿಲ್ಲ ಎಂದು ಹೇಳಿ ಈತನನ್ನು ಕಳಿಸಿಕೊಟ್ಟಿದ್ದಾನೆ.
ಘಟನೆಯಿಂದ ಬೇಸತ್ತ ದುಬೈ ರಿಟರ್ನೀ ಯುವಕ ಏನು ಮಾಡುವುದೆಂದು ತೋಚದೆ ವಿಡಿಯೋ ಮುಂದಿಟ್ಟು ಮತ್ತಷ್ಟು ಹಣವನ್ನು ತನ್ನಲ್ಲಿ ಕೇಳುತ್ತಾನೆ ಎಂದರಿತು ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಲ್ಲಿ ಆಗಿರುವ ಘಟನೆ ಬಗ್ಗೆ ಹೇಳಿದ್ದಾನೆ. ಈ ಬಗ್ಗೆ ಉಳ್ಳಾಲದಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ಪೊಲೀಸ್ ಅಧಿಕಾರಿ, ಅಜ್ವಿನ್ ಮತ್ತು ಆತನಿಗೆ ಸಹಕಾರ ನೀಡಿದ್ದ ಯುವತಿ ಸಪ್ನಾಳನ್ನು ಬಂಧಿಸುವಂತೆ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಶಶಿಕುಮಾರ್, ಆರೋಪಿಗಳು ಈ ಹಿಂದೆ ಬೇರೆ ಎಲ್ಲಾದರೂ ಇದೇ ರೀತಿಯ ಪ್ರಕರಣ ಮಾಡಿದ್ದಾರೆಯೇ ಎನ್ನುವ ಬಗ್ಗೆ ಮಾಹಿತಿಯಿಲ್ಲ. ಯಾರಾದ್ರೂ ವಂಚನೆಗೆ ಒಳಗಾಗಿದ್ದರೆ ಬಂದು ಮಾಹಿತಿ ನೀಡಿ. ನಾವು ಅವರ ಮಾಹಿತಿಯನ್ನು ಗುಪ್ತವಾಗಿಟುತ್ತೇವೆ ಎಂದು ತಿಳಿಸಿದ್ದಾರೆ.
Two including a lady hailing from Ullal were arrested in connection to a honeytrap case under Ullal police station limits in Mangalore. The arrested are Azwin (24) and Hatijamma (23). The duo were residing at an apartment at Ullal. They came in touch with a neighbour who came from Dubai and invited him for dinner made him naked and were blackmailing him.
02-01-26 10:24 pm
HK News Desk
CM Siddaramaiah, Ballari Clash, MLA Bharat Re...
02-01-26 06:09 pm
Ballari Banner Fight, FIR, Death: ಬ್ಯಾನರ್ ವಿಚ...
02-01-26 04:13 pm
ಕೋಗಿಲು ಬಡಾವಣೆ ನಿರಾಶ್ರಿತರಿಗೆ ಮನೆ ಹಂಚಿಕೆ ; ವ್ಯಾ...
02-01-26 01:58 pm
ಎಲ್ಲರಂತೆ ನನಗೂ ಆಕಾಂಕ್ಷೆ ಇದೆ ; ಕುರ್ಚಿ ಫೈಟ್ ನಡು...
01-01-26 06:21 pm
02-01-26 06:43 pm
HK News Desk
ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದು ವ್ಯಕ್ತಿಗೆ ಬೆಂಕಿ ಹ...
01-01-26 09:34 pm
ಸ್ವಿಟ್ಜರ್ಲ್ಯಾಂಡ್ ನಲ್ಲಿ ಶೋಕವಾಗಿ ಮಾರ್ಪಟ್ಟ ಹೊಸ...
01-01-26 09:30 pm
ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದು ಯುವಕನ ಹತ್ಯೆ ;...
30-12-25 06:48 pm
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
02-01-26 09:32 pm
HK News Desk
ಕಿಲಿಮಂಜಾರೋ ಬಳಿಕ ಮೌಂಟ್ ಕೆನ್ಯಾ ಹತ್ತಿದ 11ರ ಪೋರ ;...
02-01-26 02:02 pm
Dr Vinaya Hegde Death, NItte Mangalore: ನಿಟ್ಟ...
01-01-26 09:43 am
ಧರ್ಮಸ್ಥಳ ಪ್ರಕರಣದಲ್ಲಿ ಕ್ಷೇತ್ರದ ಪರ ಬೆಳ್ತಂಗಡಿ ಕೋ...
31-12-25 10:57 pm
ಕೋಗಿಲು ಬಡಾವಣೆಯ ಅಕ್ರಮ ವಲಸಿಗರು ಎಲ್ಲಿಯವರು? ಇಲ್ಲಿ...
31-12-25 09:16 pm
02-01-26 12:58 pm
Mangalore Correspondent
ಮುಂಬೈ ಪೊಲೀಸ್ ಹೆಸರಲ್ಲಿ ಹೆದರಿಸಿ ಡಿಜಿಟಲ್ ಅರೆಸ್ಟ್...
02-01-26 12:32 pm
ಹೊಸ ವರ್ಷ ಸಂಭ್ರಮಾಚರಣೆ ; ಮಂಗಳೂರಿನಲ್ಲಿ ಒಂದು ಸಾವಿ...
01-01-26 08:25 pm
ಕಾರು ಬಾಡಿಗೆ ನೆಪದಲ್ಲಿ ಸುಳ್ಯದಿಂದ ಯುವಕನ ಕರೆದೊಯ್ದ...
31-12-25 07:05 pm
ಶಿರ್ವದಲ್ಲಿ ಸ್ಕೂಟರ್ ಕಳ್ಳತನ ; ಅಂತರ್ ಜಿಲ್ಲಾ ಕಳ್ಳ...
31-12-25 07:05 pm