ಬ್ರೇಕಿಂಗ್ ನ್ಯೂಸ್
28-07-21 08:26 pm Mangaluru correspondent ಕ್ರೈಂ
ಮಂಗಳೂರು, ಜುಲೈ 28: ಆಟೋ ರಿಕ್ಷಾ ಚಾಲಕನಿಂದ ಕಿರುಕುಳ ಆಗ್ತಿದೆ ಎಂದು ಅಪ್ರಾಪ್ತ ಬಾಲಕಿಯೊಬ್ಬಳು ತಾಯಿ ಜೊತೆಗೆ ಪೊಲೀಸರಿಗೆ ದೂರು ನೀಡಲು ಬಂದಿದ್ದಳು. ದೂರು ಪಡೆದ ಪೊಲೀಸ್ ಪೇದೆ ಆಟೋ ಚಾಲಕನನ್ನು ಗದರಿಸಿ, ಹುಡುಗಿಯ ನಂಬರ್ ಪಡೆದಿದ್ದ. ಆನಂತರ ಕಿರುಕುಳಕ್ಕೆ ಒಳಗಾದ ಹುಡುಗಿಯ ಜೊತೆ ತಾನೇ ಚಾಟ್ ಮಾಡಲು ಆರಂಭಿಸಿದ್ದ. ನ್ಯಾಯ ಕೇಳಿಕೊಂಡು ಬಂದ ಹುಡುಗಿಗೆ ತಾನೇ ಕಿರುಕುಳ ಕೊಡಲು ಆರಂಭಿಸಿದ್ದ.
ಸಿನಿಮಾಗಳಲ್ಲಿ ಸ್ಲಂ ಹುಡುಗಿಯರನ್ನು ಯಾಮಾರಿಸಿದ ಆಟೋ ಚಾಲಕನನ್ನು ದೂರಕ್ಕೆ ತಳ್ಳಿ ಪೊಲೀಸರೇ ಕಾಮತೃಷೆ ತೀರಿಸಿಕೊಳ್ಳುವ ಕತೆಯಿರುತ್ತೆ. ಆದರೆ, ಈಗ ನಾವು ಹೇಳ್ತಿರೋದು ಯಾವ ಸಿನಿಮಾ ಕತೆಯೂ ಅಲ್ಲ. ಬುದ್ಧಿವಂತರು ಎಂದು ಕರೆಸಿಕೊಳ್ಳುವ ಮಂಗಳೂರು ನಗರದಲ್ಲೇ ಆಗಿರುವ ರಿಯಲ್ ಕತೆ.


ಅಪ್ರಾಪ್ತ ಹುಡುಗಿ ಕಳೆದ ಜನವರಿಯಲ್ಲಿ ಆಟೋ ಚಾಲಕನ ಕಿರುಕುಳ ತಾಳಲಾರದೆ ದೂರು ಹಿಡಿದು ಬಂದಿದ್ದಳು. ಈ ಬಗ್ಗೆ ಆಟೋ ಚಾಲಕನನ್ನು ಗದರಿಸುತ್ತೇನೆಂದು ಹುಡುಗಿಯ ನಂಬರ್ ಪಡೆದಿದ್ದ ಪೊಲೀಸಪ್ಪ ತಾನು ಹೇಳಿದ ಕೆಲಸವನ್ನು ಮಾಡಿದ್ದಾನೆ. ಆದರೆ, ಸದಾ ಕಳ್ಳರು, ದರೋಡೆಕೋರರು, ಪಾಪಿಗಳ ಜೊತೆಗೆ ಇದ್ದುಕೊಂಡಿದ್ದ ಕಾರಣಕ್ಕೋ ಏನೋ, ಆ ಪೊಲೀಸಪ್ಪನಿಗೂ ಅದೇ ವರ್ತನೆ ಬಂದಿದೆ. ಪಾಪದ ಹುಡುಗಿಗೆ ವಿಕೃತ ಕಿರುಕುಳ ನೀಡಲು ಮುಂದಾಗಿದ್ದ. ಸೆಕ್ಸ್ ವಿಚಾರದಲ್ಲಿ ಚಾಟಿಂಗ್ ಮಾಡುತ್ತಾ ಕಿರುಕುಳ ಕೊಟ್ಟಿದ್ದಾನೆ. ತಾನು ಪೊಲೀಸ್, ತನ್ನದೇನೂ ಹೊರಗೆ ಬರುವುದಿಲ್ಲ. ಪಾಪದ ಹುಡುಗಿ ಏನು ಮಾಡುತ್ತಾಳೆಂಬ ದರ್ಪದಲ್ಲಿ ಇಂಥ ಕೃತ್ಯಕ್ಕೆ ಇಳಿದಿದ್ದನೋ ಏನೋ..
ಹುಡುಗಿಯ ಮನೆಯವರು ಪೊಲೀಸ್ ಪೇದೆಯ ಕಿರುಕುಳ ತಾಳಲಾರದೆ, ವಿಧಿ ಕಾಣದೆ ಯಾರೋ ಹೇಳಿದರೆಂದು ಚೈಲ್ಡ್ ಲೈನ್ ಸಂಸ್ಥೆಯವರಲ್ಲಿ ವಿಷಯ ಹೇಳಿಕೊಂಡಿದ್ದಾರೆ. ಮೊಬೈಲಿನಲ್ಲಿ ವಿಕೃತವಾಗಿದ್ದ ಚಾಟಿಂಗ್ ರೆಕಾರ್ಡನ್ನು ನೋಡಿದ ಅಲ್ಲಿನ ಸಿಬಂದಿ ಮಂಗಳೂರಿನ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ಕಂಕನಾಡಿ ನಗರ ಠಾಣೆಯ ಪೇದೆ ಬೆಂಗ್ರೆ ನಿವಾಸಿ ವಿನೋದ್ ನನ್ನು ಬಂಧಿಸಿದ್ದಾರೆ. ಅಲ್ಲದೆ, ಅಪ್ರಾಪ್ತ ಹುಡುಗಿಗೆ ಕಿರುಕುಳ ನೀಡಿದ್ದ ಕಾರಣಕ್ಕೆ ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಿಸಿದ್ದಾರೆ.
ಪೊಲೀಸ್ ಕರ್ತವ್ಯದಲ್ಲಿದ್ದುಕೊಂಡು ಈ ರೀತಿಯ ಕೃತ್ಯ ಮಾಡಬಾರದು ಎಂದು ಖುದ್ದು ಪೊಲೀಸ್ ಕಮಿಷನರ್ ಸಾಹೇಬ್ರೇ ವಿಷಯ ಗೊತ್ತಾಗುತ್ತಲೇ ಖಡಕ್ಕಾಗಿ ಕ್ರಮ ಜರುಗಿಸಲು ಸೂಚಿಸಿದ್ದಾರೆ.
POCSO case is filed against a police constable of Kankandy Town Police. The police constable has been arrested. The arrested has been identified as Vinod.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am