ಆಟೋ ಡಿಕ್ಕಿಯಾಗಿಸಿ ಜಡ್ಜ್ ಕೊಲೆ ; ಸುಪ್ರೀಂ ಗರಂ, ವಾರದೊಳಗೆ ವರದಿ ನೀಡಲು ಸೂಚನೆ

30-07-21 06:00 pm       Headline Karnataka News Network   ಕ್ರೈಂ

ರಸ್ತೆ ಬದಿ ವಾಕಿಂಗ್ ಹೋಗುತ್ತಿದ್ದ ನ್ಯಾಯಾಧೀಶರೊಬ್ಬರನ್ನು ಆಟೋ ಡಿಕ್ಕಿಯಾಗಿಸಿ ಕೊಲೆಗೈದ ಆರೋಪದ ಬಗ್ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಪೀಠ ಗರಂ ಆಗಿದ್ದು, ಘಟನೆ ಬಗ್ಗೆ ಒಂದು ವಾರದೊಳಗೆ ವರದಿ ನೀಡುವಂತೆ ಜಾರ್ಖಂಡ್ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದೆ.

ನವದೆಹಲಿ, ಜುಲೈ 30: ಜಾರ್ಖಂಡಿನಲ್ಲಿ ರಸ್ತೆ ಬದಿ ವಾಕಿಂಗ್ ಹೋಗುತ್ತಿದ್ದ ನ್ಯಾಯಾಧೀಶರೊಬ್ಬರನ್ನು ಆಟೋ ಡಿಕ್ಕಿಯಾಗಿಸಿ ಕೊಲೆಗೈದ ಆರೋಪದ ಬಗ್ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಪೀಠ ಗರಂ ಆಗಿದ್ದು, ಘಟನೆ ಬಗ್ಗೆ ಒಂದು ವಾರದೊಳಗೆ ವರದಿ ನೀಡುವಂತೆ ಜಾರ್ಖಂಡ್ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದೆ. ಅಲ್ಲದೆ, ರಾಜ್ಯದ ಕಾನೂನು ಸುವ್ಯವಸ್ಥೆ ಸ್ಥಿತಿಗತಿಯ ಬಗ್ಗೆಯೂ ವರದಿ ನೀಡುವಂತೆ ಸೂಚಿಸಿದೆ.

ಜಾರ್ಖಂಡಿನ ಧನಬಾದ್ ಜಿಲ್ಲೆಯ ಅಡಿಷನಲ್ ಸೆಷನ್ಸ್ ಮತ್ತು ಜಿಲ್ಲಾ ನ್ಯಾಯಾಧೀಶರಾಗಿದ್ದ ಉತ್ತಮ್ ಆನಂದ್, ಜುಲೈ 28ರಂದು ಬೆಳಗ್ಗೆ ವಾಕಿಂಗ್ ನಡೆಸುತ್ತಿದ್ದಾಗ ಆಟೋ ಡಿಕ್ಕಿಯಾಗಿ ಪರಾರಿಯಾಗಿತ್ತು. ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಉದ್ದೇಶಪೂರ್ವಕವಾಗಿ ಆಟೋವನ್ನು ಬದಿಗೆ ಸರಿಸಿ, ಜಡ್ಜ್ ಮೇಲೆ ಡಿಕ್ಕಿ ಹೊಡೆಸಲಾಗಿತ್ತು. ಮೊದಲು ಹಿಟ್ ಅಂಡ್ ರನ್ ಕೇಸ್ ಎಂದು ಹೇಳಲಾಗಿದ್ದರೂ, ಕೃತ್ಯದ ಸಿಸಿಟಿವಿ ಹೊರಬೀಳುತ್ತಿದ್ದಂತೆ, ನ್ಯಾಯಾಧೀಶರನ್ನು ಕೊಲೆ ಮಾಡಲಾಗಿದೆ ಎನ್ನುವ ಶಂಕೆ ವ್ಯಕ್ತವಾಗಿತ್ತು.

ಜಾರ್ಖಂಡ್ ಸರಕಾರ ಕೂಡಲೇ ಪ್ರಕರಣದ ತನಿಖೆಗೆ ಎಸ್ಐಟಿ – ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಪೊಲೀಸರು ಘಟನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಲಖನ್ ವರ್ಮಾ ಮತ್ತು ರಾಹುಲ್ ವರ್ಮಾ ಎಂದು ಗುರುತಿಸಲಾಗಿದೆ. ಅಲ್ಲದೆ, ಕೃತ್ಯಕ್ಕೆ ಬಳಸಲಾಗಿದ್ದ ಮಹಿಳೆಯ ಹೆಸರಲ್ಲಿ ರಿಜಿಸ್ಟರ್ ಆಗಿದ್ದ ಆಟೋ ರಿಕ್ಷಾವನ್ನು ವಶಕ್ಕೆ ಪಡೆಯಲಾಗಿದೆ. ಆಟೋವನ್ನು ಅಂದೇ ಬೆಳಗ್ಗೆ ಆರೋಪಿಗಳು ಕಳವು ಮಾಡಿಕೊಂಡು ತಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಜಡ್ಜ್ ನಡೆಸುತ್ತಿದ್ದ ಪ್ರಕರಣಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಜಿಲ್ಲಾ ನ್ಯಾಯಾಧೀಶರಾಗಿದ್ದ ಉತ್ತಮ್ ಆನಂದ್, ಧನಬಾದ್ ಜಿಲ್ಲೆಯ ಹಲವು ಮಾಫಿಯಾ, ಕೊಲೆ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸುತ್ತಿದ್ದರು. ಇತ್ತೀಚೆಗೆ ಇಬ್ಬರು ಗ್ಯಾಂಗ್ ಸ್ಟರ್ ಗಳಿಗೆ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರು. ಇದೇ ನೆಪದಲ್ಲಿ ಜಡ್ಜ್ ಅವರನ್ನು ಟಾರ್ಗೆಟ್ ಮಾಡಿಕೊಂಡು ಕೊಲ್ಲಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಯಾರು ಕೊಲೆಗೆ ಸಂಚು ಹೂಡಿದ್ದರು ಎನ್ನುವುದು ದೃಢಪಟ್ಟಿಲ್ಲ.

ಘಟನೆ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಸುಪ್ರೀಂ ಕೋರ್ಟ್ ವಕೀಲರ ಸಂಘ, ಇದು ನ್ಯಾಯಾಂಗದ ಸ್ವಾತಂತ್ರ್ಯದ ಮೇಲೆ ನಡೆದಿರುವ ದಾಳಿ. ಘಟನೆ ನೋಡಿದರೆ ಪೂರ್ವ ನಿಯೋಜಿತವಾಗಿ ಪ್ಲಾನ್ ಹಾಕ್ಕೊಂಡು ಕೃತ್ಯ ಎಸಗಿದಂತಿದೆ ಎಂದಿದ್ದಾರೆ.

The shocking daylight murder of Additional District Judge Uttam Anand of Jharkhand was brought to the attention of the Supreme Court by the President. The Jharkhand High Court has taken suo motu cognizance of the killing of a district judge in Dhanbad while he was on his morning jog and the states' advocate general said the decision upholds the sensitivity of the case, according to news agency ANI. "A judge has been killed. Whether it is an accident or murder we need to find it. It is a very sensitive case and hence the court has taken suo moto cognizance," advocate general Rajiv Ranjan told ANI.