ಬ್ರೇಕಿಂಗ್ ನ್ಯೂಸ್
31-07-21 03:19 pm Mangaluru Correspondent ಕ್ರೈಂ
ಬಂಟ್ವಾಳ, ಜುಲೈ 31: ಮಂಗಳೂರಿನಿಂದ ಹಾಸನ ಭಾಗಕ್ಕೆ ಡೀಸೆಲ್ ಸರಬರಾಜು ಮಾಡುವ ಪೈಪ್ ಲೈನಿಗೆ ಕನ್ನ ಕೊರೆದು ಡೀಸೆಲ್ ಕಳವು ಮಾಡುತ್ತಿದ್ದ ಜಾಲವನ್ನು ಬಂಟ್ವಾಳ ಪೊಲೀಸರು ಪತ್ತೆ ಮಾಡಿದ್ದು, ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಹಿಂದುಸ್ತಾನ್ ಪೆಟ್ರೋಲಿಯಂ ಕಂಪನಿಗೆ ಸೇರಿದ ಡೀಸೆಲ್ ಪೈಪ್ ಲೈನ್ ಮಂಗಳೂರಿನಿಂದ ಬಂಟ್ವಾಳ ಮೂಲಕ ಹಾದು ಹೋಗಿದ್ದು, ಅದಕ್ಕೆ ಬಂಟ್ವಾಳ ತಾಲೂಕಿನ ಸೊರ್ನಾಡು ಎಂಬಲ್ಲಿ ಖಾಸಗಿ ವ್ಯಕ್ತಿಯ ಜಮೀನಿನಲ್ಲಿ ಕನ್ನ ಕೊರೆಯಲಾಗಿದೆ. ಡೀಸೆಲ್ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಕಂಡುಬಂದಿದ್ದರಿಂದ ಹಿಂದುಸ್ತಾನ್ ಕಂಪನಿಯ ಅಧಿಕಾರಿಗಳು ಪತ್ತೆ ಕಾರ್ಯ ಮಾಡಿದ್ದರು. ಬಂಟ್ವಾಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಸೊರ್ನಾಡು ಎಂಬಲ್ಲಿ ಸೋರಿಕೆ ಆಗುತ್ತಿರುವ ಶಂಕೆಯಿಂದ ಪೊಲೀಸರಿಗೆ ದೂರು ನೀಡಿದ್ದರು.
ಜುಲೈ 11ರಿಂದ 30ರ ನಡುವೆ ಡೀಸೆಲ್ ಪೂರೈಕೆಯಲ್ಲಿ ಒಂದು ಸಾವಿರ ಲೀಟರ್ ನಷ್ಟು ವ್ಯತ್ಯಾಸ ಕಂಡುಬಂದಿದ್ದು, ಇದರಿಂದ ಕಂಪನಿಯ ತಂತ್ರಜ್ಞರು ಮೆಟಾಲಿಕ್ ತಂತ್ರಜ್ಞಾನದ ಮೂಲಕ ಪತ್ತೆ ಕಾರ್ಯ ಮಾಡಿದ್ದಾರೆ. ಶಂಕೆಯ ಮೇರೆಗೆ ಸೊರ್ನಾಡು ಎಂಬಲ್ಲಿ ಐವನ್ ಎಂಬವರಿಗೆ ಸೇರಿದ ಖಾಸಗಿ ಜಮೀನಿನಲ್ಲಿ ಪೈಪ್ ಲೈನ್ ಹಾದು ಹೋಗುತ್ತಿರುವ ಜಾಗದಲ್ಲಿ ಪರಿಶೀಲನೆ ನಡೆಸಿದಾಗ ಕನ್ನ ಹಾಕಿರುವುದು ಕಂಡುಬಂದಿದೆ.
ಆರೋಪಿಗಳು 20 ಅಡಿ ಆಳದಲ್ಲಿ ಹಾದು ಹೋಗಿರುವ ಪೈಪ್ ಲೈನನ್ನು ಕೊರೆದಿದ್ದು, ಅದಕ್ಕೆ ಒಂದೂವರೆ ಇಂಚಿನ ಇನ್ನೊಂದು ಪೈಪ್ ಸಿಕ್ಕಿಸಿ 50 ಮೀಟರ್ ದೂರದಲ್ಲಿ ಮಣ್ಣಿನಡಿಯಲ್ಲೇ ಸಾಗಿಸಿ ಹೊರಬಿಟ್ಟಿರುವ ಪೈಪ್ ನಲ್ಲಿ ಗೇಟ್ ವಾಲ್ ಹಾಕಿರುವುದು ಕಂಡುಬಂದಿದೆ. ಡೀಸೆಲ್ ಕಳವು ಮಾಡುತ್ತಿದ್ದ ಜಾಗವು ಐವನ್ ಎಂಬವರಿಗೆ ಸೇರಿರುವುದರಿಂದ ಕೃತ್ಯದಲ್ಲಿ ಐವನ್ ಪಾತ್ರ ಇರುವ ಅನುಮಾನ ವ್ಯಕ್ತವಾಗಿದೆ. ಪೈಪ್ ಲೈನ್ ಒಡೆದು ಹಾನಿಯಾಗಿದ್ದರಿಂದ ಇದಕ್ಕೆ 90 ಸಾವಿರ ರೂ. ನಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳವಾದ ಡೀಸೆಲ್ ಮೌಲ್ಯದ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲವಾರು ಸಮಯಗಳಿಂದ ಈ ರೀತಿ ವ್ಯವಸ್ಥಿತವಾಗಿ ಡೀಸೆಲ್ ಕಳವು ಜಾಲ ನಡೆಯುತ್ತಿರುವ ಶಂಕೆಯಿದ್ದು, ಇದರಲ್ಲಿ ಹಲವರು ಕೈಯಾಡಿಸಿರುವ ಸಾಧ್ಯತೆಯಿದೆ. ಡೀಸೆಲ್ ಕಳವು ಮಾಡಿ, ಟ್ಯಾಂಕರಿನಲ್ಲೇ ಅಲ್ಲಿಂದ ಬೇರೆ ಕಡೆಗೆ ಸಾಗಿಸಿರುವ ಅನುಮಾನವಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
An incident of diesel theft by rigging a hole in the underground pipeline of MRPL came to light on Friday July 30. Diesel was reportedly stolen from the pipeline which supplies diesel to Hassan. The incident was reported at Arbi, Sornadu here. Bantwal rural police have started a probe.
02-04-25 10:48 pm
HK News Desk
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
02-04-25 07:35 pm
HK News Desk
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
02-04-25 11:02 pm
Mangalore Correspondent
Kora Kannada Movie, Release, P Murthy, Sunami...
02-04-25 04:11 pm
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
Mangalore, MLA Vedavyas Kamath: ಜೈಲಿನ ಅಧಿಕಾರಿ...
01-04-25 09:12 pm
ರಾಜ್ಯದಲ್ಲಿ ಬೆಲೆ ಏರಿಕೆ ಗಗನಕ್ಕೆ ; ರೇಷನ್ ಅಂಗಡಿಗಳ...
01-04-25 07:12 pm
02-04-25 05:49 pm
Mangalore Correspondent
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm
Bangalore Honeytrap, Businessman, Sridevi: ಒಂ...
01-04-25 10:42 pm
Davangere Bank Robbery, Police; ಉದ್ಯಮ ವಿಸ್ತರಣ...
01-04-25 05:32 pm