ಬ್ರೇಕಿಂಗ್ ನ್ಯೂಸ್
03-08-21 05:30 pm Headline Karnataka News Network ಕ್ರೈಂ
ಎರ್ನಾಕುಲಂ, ಆಗಸ್ಟ್ 3: ಕೆಲವೊಮ್ಮೆ ಮನಸ್ಸು, ಬುದ್ಧಿ ಸ್ಥಿಮಿತ ಕಳಕೊಂಡರೆ ಏನೆಲ್ಲಾ ಅನಾಹುತಗಳಾಗುತ್ತೆ ಅನ್ನೋದಕ್ಕೆ ಈ ಸ್ಟೋರಿಯೇ ಸಾಕ್ಷಿ. ಆಕೆ 24ರ ಹರೆಯದ ಸ್ನಿಗ್ಧ ರೂಪದ ಚೆಲುವೆ. ಬಿಡಿಎಸ್ ಸರ್ಜರಿ ಕಲಿಯುತ್ತಿದ್ದಾಕೆ. ತನ್ನ ಕಾಲೇಜು ಬಳಿಯಲ್ಲೇ ಇತರೇ ಸಹಪಾಠಿ ಹುಡುಗಿಯರ ಜೊತೆ ವಾಸವಿದ್ದಳು. ಮೊನ್ನೆ ಮಧ್ಯಾಹ್ನ ಊಟ ಮುಗಿಸಿ, ತಮ್ಮಷ್ಟಕ್ಕೆ ಹರಟೆ ಹೊಡೆಯುತ್ತಾ ಕುಳಿತಿದ್ದ ಹುಡುಗಿಯರಿಗೆ ಅರೆಕ್ಷಣದಲ್ಲಿ ಆಘಾತ ಎದುರಾಗಿತ್ತು. ಯಾರೂ ನಿರೀಕ್ಷೆಯೇ ಮಾಡಿರದ ಘಟನೆ ರೆಪ್ಪೆ ಮಿಟುಕಿಸುವಷ್ಟರಲ್ಲಿ ನಡೆದು ಹೋಗಿತ್ತು. ರೂಮಿನೊಳಕ್ಕೆ ಬಂದ ಆಗಂತುಕ ಯುವಕನೊಬ್ಬ ನೇರವಾಗಿ ಆಕೆಯ ಹಣೆಗೆ ಗುರಿಯಿಟ್ಟು ಪಿಸ್ತೂಲ್ ಒತ್ತಿದ್ದಾನೆ. ಆಮೇಲೆ ತನ್ನ ಹಣೆಗೂ ಪಿಸ್ತೂಲ್ ಇರಿಸಿ ಟ್ರಿಗರ್ ಅದುಮಿದ್ದ. ಕೆಲವೇ ಕ್ಷಣದಲ್ಲಿ ಇಬ್ಬರೂ ನೆಲಕ್ಕೆ ಉರುಳಿದ್ದರು.
ಯಾರೋ ಯುವಕ ರೂಮಿನೊಳಗೆ ಬಂದಿದ್ದನ್ನು ಗಮನಿಸಿ, ಕೆಳಗೆ ವಾಚ್ ಮನ್ ಗೆ ಹೇಳಲೆಂದು ಇತರೇ ಹುಡುಗಿಯರು ಮೆಟ್ಟಿಲು ಇಳಿದು ಕೆಳಕ್ಕೆ ತೆರಳಿದ್ದರು. ಆದರೆ, ಮೇಲಿನಿಂದ ಫಟಾರ್, ಟಪಾರ್ ಎನ್ನುವ ಪಿಸ್ತೂಲ್ ಸಪ್ಪಳ ಬರುತ್ತಿದ್ದಂತೆ, ಕೆಳಗಿದ್ದ ಹುಡುಗಿಯರು ಓಡೋಡಿ ಮೇಲಕ್ಕೆ ಬಂದಿದ್ದರು. ಬಂದು ನೋಡಿದರೆ, ತಮ್ಮ ಸಹಪಾಠಿ ಮಾನಸಾ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ಯುವಕನೂ ರಕ್ತದೋಕುಳಿಯಲ್ಲಿ ನೆಲಕ್ಕೆ ಬಿದ್ದು ನರಳಾಡುತ್ತಿದ್ದ. ಕೆಲವೇ ಕ್ಷಣಗಳಲ್ಲಿ ಇಬ್ಬರ ಪ್ರಾಣವೂ ಹೋಗಿತ್ತು. ಕೇಳಿದರೆ ಮೈ ಝುಮ್ಮೆನಿಸುವ ರೀತಿಯ ಈ ಘಟನೆ ನಡೆದಿದ್ದು ಎರ್ನಾಕುಲಂ ಜಿಲ್ಲೆಯ ಕೊತ್ತಮಂಗಲಂ ಗಾಂಧಿ ಇನ್ಸ್ ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ಕಾಲೇಜು ಕಟ್ಟಡದ ಬಳಿ.
ಜುಲೈ 30ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಾಲೇಜು ಬಳಿಯ ಅಪಾರ್ಟ್ಮೆಂಟ್ ಕಟ್ಟಡದಲ್ಲಿ ಘಟನೆ ನಡೆದಿತ್ತು. ಅದೇ ಕಾಲೇಜಿನಲ್ಲಿ ಬಿಡಿಎಸ್ ಸರ್ಜನ್ ವಿಭಾಗದಲ್ಲಿ ಕಲಿಯುತ್ತಿದ್ದ 24ರ ಹರೆಯದ ಯುವತಿ ಮಾನಸ ಮಾಧವನ್ ಕೊಲೆಯಾಗಿದ್ದಳು. ಕಣ್ಣೂರು ಮೂಲದ ರಾಖಿಲ್ ರಘುತ್ತಮನ್ ಎಂಬ ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್ ಆಗಿದ್ದ ಯುವಕ ತನಗೆ ತಾನೇ ಪಿಸ್ತೂಲ್ ಹಾರಿಸಿಕೊಂಡು ಸಾವಿಗೆ ಶರಣಾಗಿದ್ದ.
ಮೊದಲಿಗೆ, ಈ ಹುಡುಗ ಯಾರು. ಈತ ಯಾಕೆ ವಿದ್ಯಾರ್ಥಿನಿಯರಿದ್ದ ರೂಮಿಗೆ ಬಂದಿದ್ದಾನೆ. ಯಾಕಾಗಿ ಕೊಲೆ ನಡೆಸಿದ್ದಾನೆ ಅನ್ನೋದು ಯಾರಿಗೂ ಗೊತ್ತಾಗಿರಲಿಲ್ಲ. ಈ ರೀತಿ ಸ್ಫುರದ್ರೂಪಿ ಚೆಲುವೆಯನ್ನು ಬರ್ಬರ ಕೊಲೆ ಮಾಡಿದ್ದು ಮತ್ತು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದರ ಹಿಂದೆ ಏನಿತ್ತು ನಂಟು ಅನ್ನುವ ಕುತೂಹಲ ಎಲ್ಲರಿಗಿತ್ತು. ಕೊತ್ತಮಂಗಲಂ ಬಿಡಿಎಸ್ ಕಾಲೇಜಿನ ಸಹಪಾಠಿಗಳಿಗಾಗಲೀ, ಅಲ್ಲಿನ ಕಾಲೇಜು ಸಿಬಂದಿಗಾಗಲೀ ಯುವಕ ಯಾರೆಂದು ಗೊತ್ತಿರಲಿಲ್ಲ. ಆ ಊರಿಗೇ ಯುವಕ ಹೊಸಬನಾಗಿದ್ದ. ಆದರೆ ಘಟನೆ ಬೆಳಕಿಗೆ ಬರುತ್ತಲೇ ಯುವಕನ ಹಳೆ ಇತಿಹಾಸ ಹೊರಬಿದ್ದಿದೆ.
ಕೆಲವು ಮೂಲಗಳ ಪ್ರಕಾರ, ಈ ಹುಡುಗ ಮತ್ತು ಹುಡುಗಿ ಇಬ್ಬರೂ ಕಣ್ಣೂರು ಜಿಲ್ಲೆಯವರು. ಹಿಂದೆ ಪ್ರೀತಿಯಲ್ಲಿದ್ದವರು ಎರಡು-ಮೂರು ತಿಂಗಳ ಹಿಂದೆ ಬ್ರೇಕಪ್ ಆಗಿತ್ತಂತೆ. ಹುಡುಗಿ ತನ್ನಷ್ಟಕ್ಕೇ ಎರ್ನಾಕುಲಂ ಜಿಲ್ಲೆಯ ಕೊತ್ತಮಂಗಲಂನಲ್ಲಿ ಬಿಡಿಎಸ್ ಓದುತ್ತಿದ್ದಳು. ಈ ವಿಚಾರ ಅರಿತುಕೊಂಡ ಯುವಕ ರಾಖಿಲ್, ಮನಸ್ಸಲ್ಲೇ ಏನನ್ನೋ ಟಾರ್ಗೆಟ್ ಮಾಡಿಕೊಂಡಿದ್ದ. ಅದಕ್ಕಾಗಿ ಕಾಲೇಜಿನ ಬಳಿ ಮಾನಸ ಉಳಿದುಕೊಂಡಿದ್ದ ಕಟ್ಟಡದ ಬಳಿಯಲ್ಲೇ ಲಾಡ್ಜ್ ನಲ್ಲಿ ರೂಮ್ ಪಡೆದಿದ್ದ. ಜುಲೈ 4ರಂದು ರಾಖಿಲ್ ರೂಮ್ ಪಡೆದಿದ್ದು, ಅಲ್ಲಿಂದ ಹುಡುಗಿಯಿದ್ದ ಮನೆ ನೇರವಾಗಿ ಕಾಣುವಂತಿತ್ತು. ಯಾವಾಗ ಕಾಲೇಜು ಹೋಗುತ್ತಾಳೆ, ಅಲ್ಲಿಂದ ಎಷ್ಟೊತ್ತಿಗೆ ಹಿಂತಿರುಗಿ ಬರುತ್ತಾಳೆ ಎಲ್ಲವೂ ಕಾಣುತ್ತಿತ್ತು. ಈ ನಡುವೆ, ರಾಖಿಲ್ ಅಲ್ಲಿ ಅಡ್ಡಾಡುವುದನ್ನು ಗಮನಿಸಿದ್ದ ಮಾನಸ ತನ್ನ ತಂದೆಗೆ ಫೋನ್ ಮಾಡಿ ತಿಳಿಸಿದ್ದಳು. ಹೋಮ್ ಗಾರ್ಡ್ ಆಗಿದ್ದ ತಂದೆ ಮಾಧವನ್, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೆ, ಈ ಬಗ್ಗೆ ರಾಖಿಲ್ ಮತ್ತು ಆತನ ಮನೆಯವರಿಗೆ ವಾರ್ನ್ ಮಾಡುವಂತೆ ಪೊಲೀಸರ ಮೇಲೆ ಒತ್ತಡ ಹೇರಿದ್ದರು.
ಕಣ್ಣೂರು ಡಿವೈಎಸ್ಪಿ ಸದಾನಂದನ್ ಈ ಬಗ್ಗೆ, ರಾಖಿಲ್ ಮತ್ತು ಆತನ ಮನೆಯವರಿಗೆ ಫೋನ್ ಮಾಡಿ ಗದರಿಸಿದ್ದರು. ಅವಳ ತಂಟೆಗೆ ಹೋದರೆ ಜಾಗ್ರತೆ ಎಂದು ರಾಖಿಲ್ ಗೆ ಫೋನ್ ಮಾಡಿ ಬೆದರಿಸಿದ್ದೂ ಆಗಿತ್ತು. ಇವೆಲ್ಲವನ್ನೂ ಲೆಕ್ಕ ಹಾಕಿದ್ದ ರಾಖಿಲ್ ಸದ್ದಿಲ್ಲದೇ ತನ್ನ ಟಾರ್ಗೆಟ್ ಇಟ್ಟಿದ್ದ. ಲಾಡ್ಜ್ ನಲ್ಲಿ ರೂಮ್ ಪಡೆಯುವಾಗ ಬಿಸಿನೆಸ್ ಪರ್ಪಸ್ ಎಂದು ನಮೂದಿಸಿದ್ದ. ಅಲ್ಲದೆ, ತಾನೊಬ್ಬ ಪ್ಲೈವುಡ್ ವ್ಯಾಪಾರಿ ಎಂದು ಹೇಳಿಕೊಂಡಿದ್ದ. ಜುಲೈ 22ರಂದು ಊರಿಗೆಂದು ಹೋಗಿದ್ದ ಎರಡು ದಿನಗಳ ನಂತರ ಮರಳಿದ್ದ.
ರಾಖಿಲ್ ಗೆಳೆಯ ಆದಿತ್ಯನ್ ಹೇಳುವ ಪ್ರಕಾರ, ರಾಖಿಲ್ ಕೊತ್ತಮಂಗಲಂ ಹೋಗಿದ್ದು ಮಾನಸಾಳನ್ನು ಭೇಟಿ ಮಾಡುವುದಕ್ಕೇ ಅಂತೆ. ಆಕೆಯನ್ನು ಇನ್ನೊಮ್ಮೆ ಭೇಟಿ ಮಾಡಿ, ಮಾತನಾಡುವ ಬಗ್ಗೆ ಹೇಳಿಕೊಂಡಿದ್ದ. ಆದರೆ, ಹೀಗೆ ಮಾಡುತ್ತಾನೆಂದು ಊಹಿಸಿರಲಿಲ್ಲ. ಕೊನೆಯ ಬಾರಿಗೆ ಅವಳನ್ನು ಭೇಟಿಯಾಗುತ್ತೇನೆ ಎಂದು ಹೇಳಿದ್ದ ಅಷ್ಟೇ ಎಂದು ಆದಿತ್ಯನ್ ಏಶ್ಯಾನೆಟ್ ವಾಹಿನಿ ಜೊತೆ ಹೇಳಿಕೊಂಡಿದ್ದಾನೆ. ರಾಖಿಲ್ ಸೋದರನ ಪ್ರಕಾರ, ರಾಖಿಲ್ ಗೆ ಇದು ಎರಡನೇ ಬಾರಿ ಹುಡುಗಿ ಜೊತೆಗಿನ ಸಂಬಂಧ ಬ್ರೇಕ್ ಅಪ್ ಆಗಿದ್ದಂತೆ. ಈ ಹಿಂದೆಯೂ ಒಬ್ಬಳ ಜೊತೆ ಲವ್ ಆಗಿ ಅನಂತರ ಸಂಬಂಧ ಕಡಿದುಹೋಗಿತ್ತು. ಈ ಬಾರಿಯೂ ಹೀಗಾಗಿದ್ದು ಆತನಲ್ಲಿ ಬೇಸರ ಮೂಡಿಸಿತ್ತು.
ವಿದೇಶಿ ನಿರ್ಮಿತ ಪಿಸ್ತೂಲ್ ಸಿಕ್ಕಿದ್ದು ಎಲ್ಲಿ ?
ಪೊಲೀಸರ ಮಾಹಿತಿ ಪ್ರಕಾರ, ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್ ಸಾಮಾನ್ಯದ್ದಲ್ಲ. ವಿದೇಶಿ ನಿರ್ಮಿತ ಆಧುನಿಕ ಮಾದರಿಯ ಪಿಸ್ತೂಲ್ ಇದಾಗಿದ್ದು ಕೆಲವು ಲಕ್ಷ ಕೊಟ್ಟು ಖರೀದಿಸಿರಬೇಕು. ಇದು ಹೇಗೆ ಈತನಿಗೆ ಸಿಕ್ಕಿದ್ದು ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದಿದ್ದಾರೆ. ಜುಲೈನಲ್ಲಿ ಕರ್ನಾಟಕ, ಬಿಹಾರಕ್ಕೆ ತೆರಳಿದ್ದ ಎನ್ನುವ ಮಾಹಿತಿಗಳಿವೆ. ಈತನಿಗೆ ಪಿಸ್ತೂಲ್ ಒದಗಿಸಲು ಯಾರೋ ನೆರವಾಗಿದ್ದಾರೆ. ಈ ಪಿಸ್ತೂಲ್ ಗೆ ಏನಿಲ್ಲ ಅಂದ್ರೂ ನಾಲ್ಕು ಲಕ್ಷ ರೂಪಾಯಿ ಇದೆ. ಇದು ಹೇಗೆ ಸಿಗ್ತು ಅನ್ನೋದ್ರ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
A 24-year-old medical student in Kerala's Ernakulam district was gunned down on Friday, 30 July, by her former partner who allegedly stalked her for nearly a month, following which he took his own life, reported The News Minute. The victim, Manasa Madhavan, was pursuing a degree in medicine at the Gandhi Institute of Dental Sciences in Kothamangalam. She ended ties with Rakhil Raghuthaman, the accused, two months back.
09-09-25 09:14 pm
Bangalore Correspondent
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
09-09-25 09:38 pm
HK News Desk
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
09-09-25 08:01 pm
Mangalore Correspondent
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
MLA Vedavyas Kamath, Mangalore, Yakshangana:...
09-09-25 04:47 pm
Mangalore, Bajilakere, Suicide: ನನ್ನವರೇ ನನ್ನನ...
09-09-25 03:07 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm