ವೈದ್ಯನೆಂದು ಪರಿಚಯಿಸಿ ಮಹಿಳೆಯಿಂದ 19 ಲಕ್ಷ ಪೀಕಿಸಿಕೊಂಡು ನಾಪತ್ತೆ !

05-08-21 01:36 pm       Udupi Correspondent   ಕ್ರೈಂ

ವೈದ್ಯನೆಂದು ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ ಮಹಿಳೆಯೋರ್ವರಿಗೆ ವಂಚಿಸಿ, ಬರೋಬ್ಬರಿ 19 ಲಕ್ಷ ರೂಪಾಯಿ ಹಣ ಪೀಕಿಸಿ ದೋಖಾ ಮಾಡಿದ ಘಟನೆ ಬೆಳಕಿಗೆ ಬಂದಿದೆ. 

ಉಡುಪಿ, ಆ.5 : ಫೇಸ್‌ಬುಕ್‌ನಲ್ಲಿ ವೈದ್ಯನೆಂದು ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ ಮಹಿಳೆಯೋರ್ವರಿಗೆ ವಂಚಿಸಿ, ಬರೋಬ್ಬರಿ 19 ಲಕ್ಷ ರೂಪಾಯಿ ಹಣ ಪೀಕಿಸಿ ದೋಖಾ ಮಾಡಿದ ಘಟನೆ ಬೆಳಕಿಗೆ ಬಂದಿದೆ. 

ಉಡುಪಿ ಮೂಲದ ಲಿನೆಟ್‌ ಸೀಮಾ ರೋಡ್ರಿಗಸ್‌ (38) ಕುವೈತ್‌ನಲ್ಲಿ ಉದ್ಯೋಗದಲ್ಲಿದ್ದರು. ಈ ನಡುವೆ, ಫೇಸ್‌ಬುಕ್‌ನಲ್ಲಿ ಡಾ. ಆಂಡ್ರಿವ್‌ ಫೆಲಿಕ್ಸ್‌ ಅನ್ನೋ ವ್ಯಕ್ತಿಯ ಪರಿಚಯವಾಗಿತ್ತು. ಇಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ ಮೊಬೈಲ್‌ ನಂಬರ್‌ ಹಂಚಿಕೊಂಡಿದ್ದಾರೆ. ಈ ವೇಳೆಯಲ್ಲಿ ಆರೋಪಿ ತಾನು ವೈದ್ಯನೆಂದು ಪರಿಚಯ ಮಾಡಿಕೊಂಡಿದ್ದ.

ದೆಹಲಿಯಲ್ಲಿ ಫಾರ್ಮಸಿಯನ್ನು ತೆರೆಯುವುದಾಗಿ ಮಹಿಳೆಯನ್ನು ನಂಬಿಸಿದ್ದಾನೆ. ಮಹಿಳೆಯಿಂದ ಹಣ ಕೇಳಿದ್ದು ಡಾ.ಆಂಡ್ರಿವ್‌ ಫೆಲಿಕ್ಸ್‌ ಖಾತೆಗೆ ಬರೋಬ್ಬರಿ 19 ಲಕ್ಷ ರೂಪಾಯಿಯನ್ನು ಹಂತ ಹಂತವಾಗಿ ವರ್ಗಾಯಿಸಿದ್ದಾರೆ. ಆದರೆ ಹಣ ಪಡೆದುಕೊಂಡ ಆರೋಪಿ ನಂತರದಲ್ಲಿ ಮಹಿಳೆಯ ಸಂಪರ್ಕವನ್ನೇ ಕಡಿತ ಮಾಡಿಕೊಂಡಿದ್ದಾನೆ.

ಇದೀಗ ಮಹಿಳೆ ಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಲಯದ ಸೂಚನೆ ಮೇರೆಗೆ ಉಡುಪಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Udupi cyber crime Man cheats woman as doctor on Facebook and loots 19 lakhs online. A case has been registered at the Udupi Police station.