ಬ್ರೇಕಿಂಗ್ ನ್ಯೂಸ್
06-08-21 05:59 pm Mangaluru Correspondent ಕ್ರೈಂ
ಭಟ್ಕಳ, ಆಗಸ್ಟ್ 6: ತನ್ನ ಐಡೆಂಟಿಟಿಯನ್ನೇ ಮುಚ್ಚಿಟ್ಟುಕೊಂಡು, ತಾನು ಅಫ್ಘಾನಿಸ್ತಾನದಲ್ಲಿ ಇರೋದಾಗಿ ಹೇಳಿಕೊಂಡು ಭದ್ರತಾ ಏಜನ್ಸಿಗಳ ಕಣ್ಣು ತಪ್ಪಿಸಿ ಐಸಿಸ್ ರಿಕ್ರೂಟ್ ಮೆಂಟ್, ಐಸಿಸ್ ಮ್ಯಾಗಜಿನ್ ನಡೆಸುತ್ತಿದ್ದ ಮೋಸ್ಟ್ ವಾಂಟೆಡ್ ಐಸಿಸ್ ಉಗ್ರನನ್ನು ಎನ್ಐಎ ಅಧಿಕಾರಿಗಳು ಭಟ್ಕಳದಲ್ಲಿ ಸೆರೆಹಿಡಿದಿದ್ದಾರೆ.
ಬಂಧಿತನನ್ನು ಜುಫ್ರೀ ಜವ್ಹಾರ್ ದಾಮುದಿ ಅಕ ಅಬು ಹಾಜಿರ್ ಅಲ್ ಬದ್ರಿ ಎಂದು ಎನ್ಐಎ ಅಧಿಕಾರಿಗಳು ಗುರುತಿಸಿದ್ದಾರೆ. ಇಂದು ಮಧ್ಯಾಹ್ನ ಮಸೀದಿಗೆಂದು ಹೊರಗೆ ಬಂದಿದ್ದ ವೇಳೆ ಆತನನ್ನು ಸಹಚರ ಅಮೀನ್ ಜುಹೇಬ್ ಜೊತೆಗೆ ಬಂಧಿಸಿದ್ದಾರೆ. ಸಿರಿಯಾ ಮೂಲದ ಐಸಿಸ್ ಸಂಘಟನೆಗೆ ಯುವಕರನ್ನು ಸೇರಿಸುವುದು ಸೇರಿದಂತೆ ಐಸಿಸ್ ಸಂಬಂಧೀ ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಡುತ್ತಿದ್ದರಲ್ಲಿ ನಿಪುಣನಾಗಿದ್ದ. ಕಂಪ್ಯೂಟರ್ ಮತ್ತು ಮೊಬೈಲ್ ತಾಂತ್ರಿಕತೆಯಲ್ಲಿ ಅತ್ಯಂತ ಪರಿಣತಿ ಪಡೆದಿದ್ದ.
ಈತನ ತಾಂತ್ರಿಕ ಪರಿಣತಿ ಎಷ್ಟಿತ್ತು ಎಂದರೆ, ಭಾರತದಲ್ಲಿದ್ದುಕೊಂಡೇ ತಾನು ಅಫ್ಘಾನಿಸ್ತಾನದ ಗಡಿಭಾಗ ಪಾಕಿಸ್ತಾನದಲ್ಲಿದ್ದೇನೆ ಎಂಬುದಾಗಿ ಬಿಂಬಿಸಿಕೊಂಡಿದ್ದ. ಐಸಿಸ್ ಪ್ರೇರಿತ ವಾಯ್ಸ್ ಆಫ್ ಹಿಂದ್ ಎನ್ನುವ ಆನ್ ಲೈನ್ ಮಾಸಿಕ ಮ್ಯಾಗಜೀನ್ ನಡೆಸುತ್ತಿದ್ದ. ಐಸಿಸ್ ವಿಚಾರಧಾರೆಗಳನ್ನು ಬಿತ್ತರಿಸುತ್ತಿದ್ದ ಈ ಆನ್ ಲೈನ್ ಮ್ಯಾಗಜಿನ್ ಕರ್ತೃ ಯಾರೆಂದು ಪತ್ತೆಹಚ್ಚಲು ಭದ್ರತಾ ಏಜನ್ಸಿಗಳಿಗೆ ಸಾಧ್ಯವಾಗಿರಲಿಲ್ಲ. ಎರಡು ವರ್ಷಗಳಿಂದ ಎನ್ಐಎ ವಿಭಾಗದ ತಜ್ಞರು ಈ ಬಗ್ಗೆ ಬೆನ್ನುಬಿದ್ದಿದ್ದರು.
ಇದಲ್ಲದೆ, ತನ್ನ ಕೆಲಸಕ್ಕಾಗಿ ಇಂಡಿಯನ್ ಮುಜಾಹಿದೀನ್ ಸಂಘಟನೆಯಿಂದ ಫಂಡಿಂಗ್ ಪಡೆಯುತ್ತಿದ್ದ. ಅಫ್ಘಾನಿಸ್ತಾನದ ಐಸಿಸ್ ಖೊರಸಾನ್ ಉಗ್ರರ ಜೊತೆ ಡೈರೆಕ್ಟ್ ಸಂಪರ್ಕವನ್ನೂ ಸಾಧಿಸಿದ್ದ. ಈತನಿಗೆ ಸ್ಫೋಟಕ ಇನ್ನಿತರ ಶಸ್ತ್ರಾಸ್ತ್ರಗಳ ಪೂರೈಕೆ ಬಗ್ಗೆಯೂ ಮಾಹಿತಿಗಳು ಬರುತ್ತಿದ್ದವು. ಸೈಬರ್ ಕಾಂಟ್ಯಾಕ್ಟ್ ಮೂಲಕ ಕಾಫಿರರನ್ನು ಕೊಂದು ಹಾಕಲು ಪ್ರೇರಣೆ ನೀಡುತ್ತಿದ್ದ. ಪೊಲೀಸರು, ಪತ್ರಕರ್ತರು ಹಿಟ್ ಲಿಸ್ಟ್ ನಲ್ಲಿದ್ದು ಸರಕಾರಿ ಆಸ್ತಿಗಳು, ದೇವಸ್ಥಾನಗಳನ್ನು ಒಡೆದು ಹಾಕುವುದು ಈತನ ಪ್ರಮುಖ ಟಾರ್ಗೆಟ್ ಆಗಿದ್ದುವು.
ಅಫ್ಘಾನಿಸ್ತಾನದಲ್ಲಿ ಇರುವುದಾಗಿ ಹೇಳಿಕೊಂಡಿದ್ದ
ಸೈಬರ್ ಸ್ಪೇಸ್ ನಲ್ಲಿ ತನ್ನ ಹೆಸರನ್ನು ಅಬು ಹಾಜಿರ್ ಅಲ್ ಬದ್ರಿ ಎಂಬುದಷ್ಟೇ ತೋರಿಸಿಕೊಂಡಿದ್ದ. ಅಲ್ಲದೆ, ತಾನು ಅಫ್ಘಾನಿಸ್ತಾನದಲ್ಲೇ ಇರುವುದಾಗಿ ಹೇಳಿಕೊಂಡಿದ್ದ. ಗುಪ್ತಚರ ಏಜನ್ಸಿಗಳಿಂದ ತಪ್ಪಿಸಿಕೊಳ್ಳಲು ಬೇಕಾದ ಸೆಕ್ಯುರಿಟಿ ಕ್ರಮಗಳನ್ನು ತೆಗೆದುಕೊಂಡಿದ್ದೇನೆ. ಸೋಶಿಯಲ್ ಮೀಡಿಯಾದಲ್ಲಿ ತಾನು ಖೊರಸಾನಲ್ಲಿ ಇರೋದಾಗಿ ಹೇಳಿಕೊಂಡಿದ್ದರೂ, ಅಬು ಹಾಜಿರ್ ಅಲ್ ಬದ್ರಿ ಭಾರತದಲ್ಲೇ ಇರುವ ಬಗ್ಗೆ ತಾಂತ್ರಿಕ ಪರಿಣತರು ಕಂಡುಕೊಂಡಿದ್ದರು. ಆದರೆ, ಈ ರೀತಿಯ ವ್ಯಕ್ತಿ ಎಲ್ಲಿದ್ದಾನೆ ಅನ್ನುವ ಮಾಹಿತಿಗಳಿಲ್ಲದೇ ಇದ್ದುದರಿಂದ ಭದ್ರತಾ ಏಜನ್ಸಿಗಳು ತುಂಬ ತಲೆಕೆಡಿಸಿಕೊಂಡಿದ್ದವು.
ಬೇರೆ ಏನಾದ್ರೂ ಮಾಹಿತಿ ಸಿಗಬಹುದೇ ಎಂದು ಪರಿಶೀಲನೆಯಲ್ಲಿರುವಾಗಲೇ ಕಳೆದ ಜುಲೈ 11ರಂದು ಜಮ್ಮು ಕಾಶ್ಮೀರದಲ್ಲಿ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದ ಕಾಸಿಮ್ ಖುರಾಸಾನಿ ಅಕ ಉಮರ್ ನಿಸಾರ್ ಬಂಧನಕ್ಕೀಡಾಗಿದ್ದ. ವಾಯ್ಸ್ ಆಫ್ ಹಿಂದ್ (ಸ್ವಾತ್ ಅಲ್ ಹಿಂದ್) ಮ್ಯಾಗಜಿನ್ ನಲ್ಲಿ ಐಸಿಸ್ ಚಟುವಟಿಕೆಗಳ ಬಗ್ಗೆ ಎಕ್ಸ್ ಕ್ಲೂಸಿವ್ ಇಂಟರ್ವ್ಯೂ ಕೊಟ್ಟಿದ್ದನ್ನು ಗಮನಿಸಿದ ಭದ್ರತಾ ಏಜನ್ಸಿಗಳು ಆತನನ್ನು ಪತ್ತೆ ಮಾಡಿ ಬಂಧಿಸಿದ್ದವು.
ಮ್ಯಾಗಜೀನ್ ಮಾಹಿತಿ ನೀಡಿದ್ದ ಖುರಾಸಾನಿ
ಈ ವೇಳೆ, ಆತ ಕೆಲವು ಮಾಹಿತಿಗಳನ್ನು ನೀಡಿದ್ದ. ವಾಯ್ಸ್ ಆಫ್ ಹಿಂದ್ ಅನ್ನುವ ಮ್ಯಾಗಜಿನ್ ಪಾಕಿಸ್ತಾನದಲ್ಲಿ ಬಿಡುಗಡೆಯಾಗುತ್ತಿದೆ. ಕಳೆದ 2020ರ ಫೆಬ್ರವರಿಯಲ್ಲಿ ಲಾಂಚ್ ಆಗಿದ್ದು, ಈವರೆಗೆ 17 ಸಂಚಿಕೆಗಳು ಬಂದಿವೆ ಎನ್ನುವ ಮಾಹಿತಿಯನ್ನು ನೀಡಿದ್ದ. ನಾವು ಐಸಿಸ್ ವಾರಿಯರ್ ಗಳನ್ನು ಎರಡಾಗಿ ವಿಭಜಿಸಿ ಹೋರಾಟಕ್ಕಿಳಿದಿದ್ದೇವೆ. ಒಂದು ತಳಮಟ್ಟದಲ್ಲಿಯಾದರೆ, ಇನ್ನೊಂದು ಮೀಡಿಯಾದಲ್ಲಿ. ನಮ್ಮ ಹೋರಾಟಗಾರರು ಒಂದ್ವೇಳೆ ಕೊಲ್ಲಲ್ಪಟ್ಟರೆ, ಅವರಲ್ಲಿರುವ ಶಸ್ತ್ರಗಳನ್ನು ತಪ್ಪಿಸುವುದು, ತರಬೇತು ನೀಡುವುದು, ಸಂದರ್ಭವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಮೀಡಿಯಾದಲ್ಲಿರುವ ಮಂದಿಯ ಜವಾಬ್ದಾರಿ ಎಂದಿದ್ದ. ಅಲ್ಲದೆ, ಈ ವೇಳೆ ಭದ್ರತಾ ಏಜನ್ಸಿಗಳ ಕೈಗೆ ಸಿಗದಂತೆ ಎಚ್ಚರ ವಹಿಸಬೇಕು. ಹೋರಾಟಗಾರರು ಯಾರು ಕೂಡ ಮೊಬೈಲ್ ಸಿಮ್ ಬಳಕೆ ಮಾಡಬಾರದು. ಕೇವಲ ವೈಫೈ ಮತ್ತು ವಿಪಿಎನ್ ಮಾತ್ರ ಬಳಸಬೇಕು. ಒಂದ್ವೇಳೆ ಸಿಕ್ಕಿಬಿದ್ದರೂ ಭದ್ರತಾ ಏಜನ್ಸಿಗೆ ಮೊಬೈಲ್ ಸಿಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದ.
ಕಾಸಿಮ್ ಖರಸಾನಿ ನೀಡಿದ ಮಾಹಿತಿ ಆಧರಿಸಿ, ವಾಯ್ಸ್ ಆಫ್ ಹಿಂದ್ ಬಗ್ಗೆ ಸರ್ಚಿಂಗ್ ನಡೆಸಿದ್ದರು. ವಿದೇಶದಲ್ಲಿ ಮುಂಚೂಣಿಯಲ್ಲಿರುವ ಭದ್ರತಾ ಏಜನ್ಸಿಗಳ ಮೂಲಕ ವಾಯ್ಸ್ ಆಫ್ ಹಿಂದ್ ಮತ್ತು ಆಲ್ ಹಾಜಿ ಬದ್ರಿ ಬಗ್ಗೆ ಮಾಹಿತಿ ಕೆದಕಿದಾಗ, ಬದ್ರಿ ಭಟ್ಕಳದಲ್ಲಿರುವುದನ್ನು ತೋರಿಸಿತ್ತು. ಜುಫ್ರಿ ಜವ್ಹಾರ್ ದಾಮುದಿಯೇ ಹಾಜಿರ್ ಅಲ್ ಬದ್ರಿ ಎನ್ನುವುದನ್ನು ಪತ್ತೆ ಮಾಡಿತ್ತು. ಎಲ್ಲ ಮಾಹಿತಿಗಳನ್ನು ಕ್ರೋಡೀಕರಿಸಿದ ಬಳಿಕ ಜುಫ್ರಿ ಬಗ್ಗೆ ಮಾಹಿತಿ ಕಲೆಹಾಕಿದ್ದರು.
ಭಟ್ಕಳದ ಸಾಗರ್ ರೋಡ್ ನಲ್ಲಿ ಮನೆ ಮಾಡಿಕೊಂಡಿದ್ದ ಜುಫ್ರಿ ಯಾವತ್ತೂ ಮನೆಯಿಂದ ಹೊರಗೆ ಬರುತ್ತಿರಲಿಲ್ಲ. ಶುಕ್ರವಾರ ಮಧ್ಯಾಹ್ನ ಮಸೀದಿಗೆಂದು ಮಾತ್ರ ಹೊರಗೆ ಬರುತ್ತಿದ್ದ. ಈ ವಿಚಾರ ಪತ್ತೆ ಮಾಡಿದ ಭದ್ರತಾ ಏಜನ್ಸಿಗಳು ಇಂದು ಶುಕ್ರವಾರ ಮಧ್ಯಾಹ್ನ ನೂರಕ್ಕೂ ಹೆಚ್ಚು ಮಂದಿ ಭದ್ರತಾ ಏಜನ್ಸಿಗಳ ಜೊತೆ ಹಠಾತ್ ದಾಳಿ ನಡೆಸಿದೆ. ಸ್ಥಳೀಯ ಪೊಲೀಸರು ಮತ್ತು 50ಕ್ಕೂ ಹೆಚ್ಚು ಎನ್ಐಎ, ರಾ ಇನ್ನಿತರ ಅಧಿಕಾರಿಗಳು ಸುತ್ತುವರಿದು ಬೇನಾಮಿ ಸೋಗಿನಲ್ಲಿ ಮನೆಗೆ ಹೊಕ್ಕು ಜುಫ್ರಿಯನ್ನು ಹೊರಗೆ ಎಳೆತಂದಿದ್ದಾರೆ.
The National Investigation Agency (NIA) has arrested suspected ISIS operative Jufri Jawhar Damudi aka Abu Hajir Al Badri from Bhatkal in Karnataka in a coordinated counter-terrorism operation led by India’s Intelligence agency, NIA and the state Police. According to the NIA, Jufri Jawhar Damudi aka Abu Hajir Al Badri was high up in the hierarchy of ISKP and a key ISIS operative. He was arrested along with one of his associates Ameen Zuhaib on August 6.
25-11-24 05:51 pm
Bangalore Correspondent
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
Bjp, D K Shivakumar : ಚನ್ನಪಟ್ಟಣ ಗೆಲ್ಲಲು ಬಿಜೆಪ...
24-11-24 08:39 pm
CM Siddaramaiah, BJP, Congress ಆರ್. ಅಶೋಕ್ ಕಾ...
23-11-24 07:43 pm
B Y Vijayendra, DK Shivkumar: ವಿಜಯೇಂದ್ರಗೆ ತೀವ...
23-11-24 02:15 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
25-11-24 10:39 pm
Mangalore Correspondent
Ullal Dargah, Mangalore: ಎಪ್ರಿಲ್ 24 ರಿಂದ ಮೇ...
25-11-24 02:44 pm
Kukke Subrahmanya Temple, Mangalore: ನ.27ರಿಂದ...
24-11-24 09:13 pm
Hariprasad, Mangalore, Congress: ಮಹಾರಾಷ್ಟ್ರದಲ...
24-11-24 05:16 pm
Naxal Vikram Gowda, Murdeshwar, Mangalore: ಪೊ...
24-11-24 03:21 pm
25-11-24 06:17 pm
HK News Desk
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm