ಬ್ರೇಕಿಂಗ್ ನ್ಯೂಸ್
11-08-21 06:09 pm Mangaluru Correspondent ಕ್ರೈಂ
ಬಂಟ್ವಾಳ, ಆಗಸ್ಟ್ 11: ಮಂಗಳೂರಿನಿಂದ ಹಾಸನಕ್ಕೆ ಸರಬರಾಜಾಗುವ ಡೀಸೆಲ್ ಪೈಪ್ ಲೈನ್ ಕನ್ನ ಹಾಕಿ, ಡೀಸೆಲ್ ಕಳವು ಮಾಡುತ್ತಿದ್ದ ಪ್ರಕರಣದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಜಾಗದ ಮಾಲೀಕ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಸೊರ್ನಾಡು ಗ್ರಾಮದ ಅರಳದಲ್ಲಿ ಇಪ್ಪತ್ತು ಅಡಿ ಆಳದ ಪೈಪ್ ಲೈನಿಗೆ ಕನ್ನ ಹಾಕಿ, ಮತ್ತೊಂದು ಪೈಪ್ ಮೂಲಕ ಡೀಸೆಲ್ ಕಳವು ಮಾಡಲಾಗುತ್ತಿತ್ತು. ಜಾಗದ ಮಾಲೀಕ ಐವನ್ ಪಿಂಟೋ ಎಂಬಾತನಾಗಿದ್ದು, ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಐವನ್ ಸೇರಿದಂತೆ ಅಜಿತ್ ಮತ್ತು ಪ್ರೀತಂ ಎಂಬಿಬ್ಬರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿಯಾಗಿರುವ ಮಂಗಳೂರಿನ ರಿಚರ್ಡ್, ಮಡಿಕೇರಿ ಮೂಲದ ಹರೀಶ್ ಮತ್ತು ಸಮೀರ್ ಎಂಬವರು ನಾಪತ್ತೆಯಾಗಿದ್ದಾರೆ. ಮಂಗಳೂರು ಮೂಲದ ರಿಚರ್ಡ್ ಪ್ರಮುಖ ಆರೋಪಿಯಾಗಿದ್ದು, ಈ ಹಿಂದೆ ಬಸ್, ಟ್ಯಾಂಕರ್ ಚಾಲಕನಾಗಿದ್ದ. ಆಬಳಿಕ ಡೀಸೆಲ್ ಕಳವು ಜಾಲದಲ್ಲಿ ಸಕ್ರಿಯನಾಗಿದ್ದ.
ಪೈಪ್ ಲೈನ್ ಪಕ್ಕದಲ್ಲಿ ಬಾವಿ ತೋಡಿಸಿದ್ದ
ಆರೋಪಿ ಐವನ್ ಪಿಂಟೋ, ತನ್ನ ತೋಟದ ನಡುವಿನ ಜಾಗದಲ್ಲಿ ಬಾವಿ ತೋಡಲೆಂದು ಹೊರಗಿನ ಕಾರ್ಮಿಕರನ್ನು ಕರೆಸಿ, ಅರ್ಧಕ್ಕೆ ಬಾವಿ ತೋಡಿಸಿದ್ದ. ಹತ್ತಡಿ ಆಳದ ಬಾವಿ ಆದಬಳಿಕ ಕಾರ್ಮಿಕರನ್ನು ಕಳಿಸಿಕೊಟ್ಟು ಬಾವಿ ನಿರ್ಮಾಣ ಸ್ಥಗಿತಗೊಳಿಸುವುದಾಗಿ ಹೇಳಿದ್ದರು. ಪೈಪ್ ಲೈನ್ ಪಕ್ಕದಲ್ಲೇ ಬಾವಿ ತೋಡಿದ್ದು ಅಲ್ಲಿಂದ ಆರೋಪಿಗಳು ಡೀಸೆಲ್ ಪೈಪ್ ಲೈನಿಗೆ ಕನ್ನ ಹಾಕಿದ್ದರು. ಮಂಗಳೂರಿನಿಂದ ಹಾಸನಕ್ಕೆ ಸಾಗುವ ಪ್ರಮುಖ ಡೀಸೆಲ್ ಕೊಳವೆಗೆ ಕನ್ನ ಕೊರೆದು ಎರಡು ಇಂಚು ಗಾತ್ರದ ಪೈಪ್ ನಲ್ಲಿ ಸಂಪರ್ಕ ನೀಡಿದ್ದರು. ಅಲ್ಲಿಂದ 50 ಮೀಟರ್ ದೂರಕ್ಕೆ ತಗ್ಗಿನ ಪ್ರದೇಶದಲ್ಲಿ ಪೈಪನ್ನು ಹೊರಬಿಟ್ಟು ಅಲ್ಲಿಂದ ಡೀಸೆಲ್ ಹೊರ ತೆಗೆಯುವ ರೀತಿ ಮಾಡಿದ್ದರು. ಅಜಿತ್ ಮತ್ತು ಪ್ರೀತಂ ವೆಲ್ಡಿಂಗ್ ವೃತ್ತಿಯಲ್ಲಿದ್ದು, ಕಬ್ಬಿಣದ ಪ್ರಮುಖ ಕೊಳವೆಗೆ ತೂತು ಕೊರೆದು ಅಲ್ಲಿಂದ ಇನ್ನೊಂದು ಪೈಪ್ ಕೊಟ್ಟು ವೆಲ್ಡ್ ಮಾಡಿ ಪೈಪ್ ಸಂಪರ್ಕ ಕೊಡಿಸಿದ್ದರು. ಅಜಿತ್ ಬೋಂದೆಲ್ ನಿವಾಸಿಯಾಗಿದ್ದರೆ, ಪ್ರೀತಂ ಡಿಸೋಜ ಅಡ್ಯಾರ್- ಕಣ್ಣೂರು ನಿವಾಸಿ.
ಪೈಪ್ ಸೋರಿಕೆ ಪತ್ತೆಯಾಗಿದ್ದು ಹೇಗೆ ?
ಹಿಂದುಸ್ತಾನ್ ಪೆಟ್ರೋಲಿಯಂ ಕಂಪನಿಯಿಂದ ಮಂಗಳೂರಿನಿಂದ ಹಾಸನಕ್ಕೆ ದಿನವೊಂದಕ್ಕೆ ಒಂದು ಲಕ್ಷ ಲೀಟರಿನಷ್ಟು ಡೀಸೆಲ್ ಪೂರೈಕೆ ಆಗುತ್ತಿತ್ತು. ಇದರಲ್ಲಿ 200-300 ಲೀಟರ್ ಡೀಸೆಲ್ ವ್ಯತ್ಯಯ ಆದರೆ, ಅವರಿಗೆ ಗೊತ್ತಾಗುತ್ತಿರಲಿಲ್ಲ. ಆದರೂ, ಜುಲೈ 11ರಿಂದ ತೀವ್ರ ವ್ಯತ್ಯಯ ಆಗಿದ್ದ ಬಗ್ಗೆ ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದರು. ಪೈಪ್ ಲೈನ್ ಜೊತೆಗೆ ಪೆಟ್ರೋನೆಟ್ ಕಂಪನಿಯ ಕೇಬಲ್ ಅಳವಡಿಸಲಾಗಿದೆ. ಪೈಪ್ ಲೈನ್ ನಿಂದ ಡೀಸೆಲ್ ಸೋರಿಕೆಯಾದರೆ ಅಥವಾ ಕನ್ನ ಕೊರೆದು ಪೈಪ್ ಲೈನ್ ಹಾಕಿದರೆ ಅದನ್ನು ಪತ್ತೆ ಮಾಡಲು ಪೆಟ್ರೋನೆಟ್ ಕೇಬಲ್ ಇರುತ್ತದೆ.
ಬಂಟ್ವಾಳ ತಾಲೂಕಿನ ಸೊರ್ನಾಡಿನಲ್ಲಿ ಸೋರಿಕೆ ಆಗುತ್ತಿದ್ದರೂ, ಅದನ್ನು ಮಂಗಳೂರಿನ ಪೆಟ್ರೋನೆಟ್ ಅಧಿಕಾರಿಗಳಿಗೆ ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಪೆಟ್ರೋನೆಟ್ ಕಂಪನಿಯ ಹಾಸನ ವಿಭಾಗದ ತಜ್ಞರು ಬಳಿಕ ಕೇಬಲ್ ಜಾಲಕ್ಕೆ ವಿದ್ಯುತ್ ಸಂಪರ್ಕ ಕೊಟ್ಟು ತಪಾಸಣೆ ನಡೆಸಿದಾಗ ಬಂಟ್ವಾಳದ ಬಳಿ ಸೋರಿಕೆ ಕಂಡುಬಂದಿತ್ತು. ಪೊಲೀಸರು ಮತ್ತು ಕೇಬಲ್ ಜಾಲದ ಅಧಿಕಾರಿಗಳು ಪೈಪ್ ಲೈನ್ ಆಸುಪಾಸಿನಲ್ಲಿ ಇತ್ತೀಚೆಗೆ ತಪಾಸಣೆ ನಡೆಸಿದಾಗ ಐವಾನ್ ಪಿಂಟೋ ಜಾಗದಲ್ಲಿ ಪೈಪ್ ಅಳವಡಿಸಿದ್ದು ಕಂಡುಬಂದಿತ್ತು.
ಕ್ಯಾನುಗಳಲ್ಲಿ ತುಂಬಿಸಿ ಜೀಪಿನಲ್ಲಿ ಸಾಗಿಸುತ್ತಿದ್ದರು
ಐವಾನ್ ಪಿಂಟೋ ಜಾಗ ಇರುವಲ್ಲಿ ತುಂಬ ಏರು ತಗ್ಗಿನ ಪ್ರದೇಶ. ಗುಡ್ಡ ಪ್ರದೇಶದಲ್ಲಿ ಅಡಿಕೆ ನೆಟ್ಟು ತೋಟ ಮಾಡಲಾಗಿದೆ. ಗುಡ್ಡದ ನಡುವೆ ಇಳಿಜಾರಿನ ಹಾದಿಯಲ್ಲಿ ಜೀಪು ಮಾತ್ರ ಹೋಗಿ ಬರುತ್ತದೆ. ಇಂಥ ಜಾಗದಲ್ಲಿ ಪೈಪ್ ಲೈನಿಗೆ ಕನ್ನ ಕೊರೆದಿದ್ದರಿಂದ ಹೊರಗಿನ ಸಾರ್ವಜನಿಕರ ಗಮನಕ್ಕೆ ಬಂದಿರಲಿಲ್ಲ. ಪೈಪ್ ನಲ್ಲಿ ದಿನವೂ ಒಂದೆರಡು ಕ್ಯಾನುಗಳಲ್ಲಿ 200- 300 ಲೀಟರಿನಷ್ಟು ಮಾತ್ರ ಡೀಸೆಲ್ ತೆಗೆಯುತ್ತಿದ್ದರು. ಒಂದು ಲಕ್ಷ ಲೀಟರ್ ಡೀಸೆಲ್ ನಲ್ಲಿ ಪಾಯಿಂಟ್ ಒಂದರಷ್ಟು ಇಲ್ಲದೆ ಕದಿಯುತ್ತಿದ್ದರು. ಕ್ಯಾನುಗಳಲ್ಲಿ ತುಂಬಿಸಿ, ಜೀಪಿನಲ್ಲಿ ಹೊರಗೆ ತರುತ್ತಿದ್ದ. ಇದನ್ನು ಜಾಗದ ಮಾಲೀಕ ಐವಾನ್ ಪಿಂಟೋ ಒಬ್ಬಂಟಿಯಾಗೇ ಮಾಡುತ್ತಿದ್ದ. ಅಲ್ಪ ಸ್ವಲ್ಪ ಡೀಸೆಲ್ ತೆಗೆದರೆ ಗೊತ್ತಾಗಲ್ಲ ಎಂದು ನಿರಂತರ ಕಳವು ಮಾಡುತ್ತಿದ್ದ.
ಜೀಪಿನಲ್ಲಿ ಮಂಗಳೂರಿಗೆ ತಂದು ಕೊಡುತ್ತಿದ್ದ ಡೀಸೆಲನ್ನ ವ್ಯವಸ್ಥಿತವಾಗಿ ಮಾರಾಟ ಮಾಡುತ್ತಿದ್ದುದು ರಿಚರ್ಡ್ ಎಂಬಾತ. ಈ ಹಿಂದೆ ಬಸ್ ಮತ್ತು ಟ್ಯಾಂಕರಿನಲ್ಲಿ ಚಾಲಕನಾಗಿದ್ದ ರಿಚರ್ಡ್ ಗೆ ಮಂಗಳೂರಿನಲ್ಲಿ ಟ್ರಾನ್ಸ್ ಪೋರ್ಟ್ ವಾಹನಗಳ ಬಗ್ಗೆ ಅರಿವು ಇದ್ದು, ನೇರವಾಗಿ ಡೀಸೆಲ್ ತಂದುಕೊಟ್ಟು ಮಾರಾಟ ಮಾಡುತ್ತಿದ್ದ. ಚಿಲ್ಲರೆ ರೂಪದಲ್ಲಿ ಲಾರಿ, ಟ್ಯಾಂಕರ್, ಬಸ್ಸುಗಳಿಗೆ ಡೀಸೆಲ್ ಪೂರೈಕೆ ಆಗುತ್ತಿದ್ದುದರಿಂದ ಇದರ ಬಗ್ಗೆ ಸಂಶಯವೂ ಬರುತ್ತಿರಲಿಲ್ಲ. ರಿಚರ್ಡ್ ಡೀಸೆಲ್ ಜಾಲದ ಪ್ರಮುಖ ಆರೋಪಿಯಾಗಿದ್ದು, ನಾಪತ್ತೆಯಾಗಿದ್ದಾನೆ. ರಿಚರ್ಡ್ ಜೊತೆ ಡೀಸೆಲ್ ಮಾರಾಟಕ್ಕೆ ಹರೀಶ್ ಮತ್ತು ಸಮೀರ್ ಸಹಕರಿಸಿದ್ದಾರೆ.
40-45 ಲಕ್ಷ ಮೌಲ್ಯದ ಡೀಸೆಲ್ ದೋಚಿದ ಶಂಕೆ
ಹಿಂದುಸ್ತಾನ್ ಕಂಪನಿಯವರು 40 ಲಕ್ಷ ರೂ. ಮೌಲ್ಯದ ಡೀಸೆಲ್ ಕಳವಾಗಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಜುಲೈ 11ರಿಂದ ಕಳವು ಬಗ್ಗೆ ಗಮನಕ್ಕೆ ಬಂದಿದ್ದಾಗಿ ಮಾಹಿತಿ ನೀಡಿದ್ದರು. ಆದರೆ, ಆರೋಪಿಗಳ ತಪ್ಪೊಪ್ಪಿಗೆಯಲ್ಲಿ ಕಳೆದ ಫೆಬ್ರವರಿ ತಿಂಗಳಿನಿಂದಲೂ ಡೀಸೆಲ್ ಕಳವು ಆಗುತ್ತಾ ಬಂದಿದೆ ಎನ್ನುವ ಮಾಹಿತಿ ಸಿಕ್ಕಿದೆ. ನಾಲ್ಕೈದು ತಿಂಗಳಲ್ಲಿ ದಿನಕ್ಕೆ 50 ಸಾವಿರ ಲೀಟರಿಗಿಂತಲೂ ಹೆಚ್ಚು ಕಳವು ಮಾಡಿರುವ ಸಾಧ್ಯತೆ ಇದೆ. ಏನಿಲ್ಲ ಅಂದ್ರೂ 40-45 ಲಕ್ಷ ರೂಪಾಯಿ ಮೌಲ್ಯದ ಡೀಸೆಲ್ ಕಳವು ಮಾಡಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆ ಪಿಎಸ್ಐ ಪ್ರಸನ್ನ ಮತ್ತು ಬಂಟ್ವಾಳ ಸರ್ಕಲ್ ಇನ್ ಸ್ಪೆಕ್ಟರ್ ಟಿ.ಡಿ. ನಾಗರಾಜ್ ನೇತೃತ್ವದ ಪೊಲೀಸರು ಡೀಸೆಲ್ ಕಳವು ಜಾಲದ ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯದಲ್ಲೇ ಇನ್ನೂ ಮೂವರನ್ನು ಬಂಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಡೀಸೆಲ್ ಪೈಪ್ ಲೈನಿಗೆ ಕನ್ನ ಕೊರೆದ ಖದೀಮರು ! 20 ಅಡಿ ಆಳಕ್ಕೆ ಪೈಪ್ ಸಿಕ್ಕಿಸಿ ಭಾರೀ ಪ್ರಮಾಣದ ಡೀಸೆಲ್ ಕಳವು
Rural police arrested six people on Tuesday August 10, in connection with the theft of MRPL diesel from the pipeline of a fuel supply company that passes through the land belonging to Ivan Pinto, resident of Arba of Arala village near Sornadu in the taluk. The cops have confiscated cans filled with diesel worth lac of rupees. The operation was conducted by a team led by inspector T D Nagaraj and sub inspector Prasanna M. The arrested people include main accused Ivan Pinto, owner of the land also.
25-11-24 05:51 pm
Bangalore Correspondent
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
Bjp, D K Shivakumar : ಚನ್ನಪಟ್ಟಣ ಗೆಲ್ಲಲು ಬಿಜೆಪ...
24-11-24 08:39 pm
CM Siddaramaiah, BJP, Congress ಆರ್. ಅಶೋಕ್ ಕಾ...
23-11-24 07:43 pm
B Y Vijayendra, DK Shivkumar: ವಿಜಯೇಂದ್ರಗೆ ತೀವ...
23-11-24 02:15 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
25-11-24 11:14 pm
Mangalore Correspondent
Vithoba Rukumai temple case, Mangalore: ವಿಠೋಬ...
25-11-24 10:39 pm
Ullal Dargah, Mangalore: ಎಪ್ರಿಲ್ 24 ರಿಂದ ಮೇ...
25-11-24 02:44 pm
Kukke Subrahmanya Temple, Mangalore: ನ.27ರಿಂದ...
24-11-24 09:13 pm
Hariprasad, Mangalore, Congress: ಮಹಾರಾಷ್ಟ್ರದಲ...
24-11-24 05:16 pm
25-11-24 06:17 pm
HK News Desk
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm