ಬ್ರೇಕಿಂಗ್ ನ್ಯೂಸ್
14-08-21 08:03 pm Mangaluru Correspondent ಕ್ರೈಂ
ಮಂಗಳೂರು, ಆಗಸ್ಟ್ 14: ವಿದೇಶಕ್ಕೆ ತೆರಳಲು ನಕಲಿ ಪಾಸ್ ಪೋರ್ಟ್ ಮಾಡಿಕೊಳ್ಳುವುದು, ಆಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಸೇರುವುದನ್ನು ಕೇಳಿದ್ದೇವೆ. ಆದರೆ, ಕೇರಳ ಗಡಿಭಾಗದಲ್ಲೀಗ ಅಂತಾರಾಜ್ಯ ಸಂಚಾರಕ್ಕಾಗಿ ಕೋವಿಡ್ ಟೆಸ್ಟ್ ವರದಿಯನ್ನೇ ನಕಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಿರುವ ಹಿನ್ನೆಲೆಯಲ್ಲಿ ಕರ್ನಾಟಕ ಪ್ರವೇಶಕ್ಕೆ ಕೋವಿಡ್ ನೆಗೆಟಿವ್ ಕಡ್ಡಾಯ ಮಾಡಲಾಗಿದೆ. ಈ ರೀತಿಯ ನಿರ್ಬಂಧ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಜೊತೆ ನಿಕಟ ಬಾಂಧವ್ಯ ಹೊಂದಿರುವ ಕಾಸರಗೋಡು ಜಿಲ್ಲೆಯ ನಿವಾಸಿಗಳಿಗೆ ಇಕ್ಕಟ್ಟು ಸೃಷ್ಟಿಸಿದೆ. ಆದರೆ, ಸರಕಾರದ ನಿರ್ಬಂಧಕ್ಕೆ ಪರ್ಯಾಯವೋ ಎನ್ನುವಂತೆ ಕೆಲವರು ಆರ್ ಟಿಪಿಸಿಆರ್ ವರದಿಯನ್ನೇ ನಕಲಿ ಮಾಡಿಕೊಂಡಿದ್ದಾರೆ.
ತುರ್ತಾಗಿ ತೆರಳಬೇಕಿದ್ದಲ್ಲಿ ಆರ್ ಟಿಪಿಸಿಆರ್ ಟೆಸ್ಟ್ ಮಾಡಿಕೊಂಡು ಕಾಯಲು ಸಮಯ ಇರುವುದಿಲ್ಲ. ಹೀಗಾಗಿ ಟೆಸ್ಟ್ ರಿಪೋರ್ಟ್ ವರದಿಯನ್ನೇ ನಕಲಿಯಾಗಿಸಿ, ತಮ್ಮ ಹೆಸರಲ್ಲಿ ಮಾಡಿಕೊಂಡು ಗಡಿಭಾಗದಲ್ಲಿ ತೆರಳುತ್ತಿರುವುದು ಪೊಲೀಸರ ತನಿಖೆಯಲ್ಲಿ ಕಂಡುಬಂದಿದೆ. ಕಾಸರಗೋಡು ಜಿಲ್ಲೆಯಿಂದ ಕೊಡಗಿಗೆ ತೆರಳುವ ಅಮ್ಮತ್ತಿ ಚೆಕ್ ಪೋಸ್ಟ್ ನಲ್ಲಿ ವಿರಾಜಪೇಟೆ ಪೊಲೀಸರ ಕೈಗೆ ದಂಪತಿ ಸಿಕ್ಕಿಬಿದ್ದಿದ್ದಾರೆ.
ಮಂಜೇಶ್ವರ ತಾಲೂಕಿನ ಉದ್ಯಾವರ ನಿವಾಸಿಗಳಾದ ಸೈಯದ್ ಮಹಮ್ಮದ್ (32) ಮತ್ತು ಆತನ ಪತ್ನಿ ಆಯಿಷತ್ ರೆಹಮಾನ್ ಎಂಬವರ ವಿರುದ್ಧ ನಕಲಿ ದಾಖಲೆ ಸೃಷ್ಟಿ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಮ್ಮತ್ತಿ ಚೆಕ್ ಪೋಸ್ಟ್ ಮೂಲಕ ತೆರಳುತ್ತಿದ್ದಾಗ ಪೊಲೀಸರು ಕಾರಿನಲ್ಲಿ ಬಂದಿದ್ದ ದಂಪತಿಯನ್ನು ತಪಾಸಣೆ ನಡೆಸಿದ್ದಾರೆ. ಕೋವಿಡ್ ನೆಗೆಟಿವ್ ವರದಿಯಲ್ಲಿ ಏನೋ ಸಂಶಯ ಬಂದು ಅದರಲ್ಲಿದ್ದ ಕ್ಯೂ ಆರ್ ಕೋಡ್ ಪರಿಶೀಲನೆ ನಡೆಸಿದ್ದು, ಈ ವೇಳೆ ಸರ್ಫುದ್ದೀನ್ ಎಂಬ ಹೆಸರು ನಮೂದಾಗಿರುವುದು ಕಂಡುಬಂದಿದೆ. ವರದಿ ನಕಲಿ ಎನ್ನುವುದು ಕಂಡುಬರುತ್ತಿದ್ದಂತೆ, ಆರೋಪಿಗಳು ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ. ಸೈಯದ್ ಮೊಹಮ್ಮದ್ ಪತ್ನಿಯ ಮನೆ ಮಡಿಕೇರಿಯ ಎಮ್ಮೆಮಾಡುವಿನಲ್ಲಿದ್ದು, ಅಲ್ಲಿಗೆ ತೆರಳುವುದಕ್ಕಾಗಿ ಮಂಜೇಶ್ವರದಲ್ಲಿ ನಕಲಿ ವರದಿಯನ್ನು ರೆಡಿ ಮಾಡಿದ್ದ. ಬಳಿಕ ಸಂಪಾಜೆ ಮೂಲಕ ಎಮ್ಮೆಮಾಡುವಿಗೆ ಬಂದಿದ್ದ.
ಕೊಡಗಿನಲ್ಲಿ ಅರೆಸ್ಟ್ ಆಗಿದ್ದ ಪತ್ರಕರ್ತ
ಕಳೆದ ಮೇ 26ರಂದು ಕೊಡಗಿನಲ್ಲಿ ಇಂಥದ್ದೇ ನಕಲಿ ಆರ್ ಟಿಪಿಸಿಆರ್ ಟೆಸ್ಟ್ ರಿಪೋರ್ಟ್ ಮಾಡಿಸಿಕೊಡುತ್ತಿದ್ದ ಪತ್ರಕರ್ತನನ್ನು ಪೊಲೀಸರು ಬಂಧಿಸಿದ್ದರು. ಕೇರಳ - ಕೊಡಗು ಮಧ್ಯೆ ಅಡ್ಡಾಡುವ ಮಂದಿಗೆ ಈತ ತನ್ನ ಸ್ಟುಡಿಯೋದಲ್ಲಿ ನಕಲಿ ಆರ್ ಟಿಪಿಸಿಆರ್ ಮಾಡಿಕೊಡುತ್ತಿದ್ದ. ಕುಟ್ಟ ಚೆಕ್ ಪೋಸ್ಟ್ ನಲ್ಲಿ ಜಂಶೀರ್ ಎಂಬ ಯುವಕನನ್ನು ಪೊಲೀಸರು ತಪಾಸಣೆ ನಡೆಸಿದಾಗ, ಆತನಲ್ಲಿ ನಕಲಿ ರಿಪೋರ್ಟ್ ಇರುವುದು ಪತ್ತೆಯಾಗಿತ್ತು. ಆತ ನೆಲ್ಲಿಹುದಿಕೇರಿಯಿಂದ ಕೇರಳಕ್ಕೆ ತೆರಳುತ್ತಿದ್ದ. ಬಳಿಕ ತಪಾಸಣೆ ನಡೆಸಿದಾಗ ರಾಜ್ಯ ಮಟ್ಟದ ಪತ್ರಿಕೆಯೊಂದರ ಪ್ರತಿನಿಧಿಯೇ ಈ ರೀತಿ ಫೇಕ್ ರಿಪೋರ್ಟ್ ರೆಡಿ ಮಾಡುತ್ತಿದ್ದುದು ಬಯಲಾಗಿತ್ತು. ಆತನನ್ನು ಅಜೀಜ್ ಎಂ.ಎ. ಎಂದು ಗುರುತಿಸಿದ್ದು, ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದರು.
ದಕ್ಷಿಣ ಕನ್ನಡ ಗಡಿಯಲ್ಲಿ ಪೊಲೀಸರು ಅಲರ್ಟ್
ಆರ್ ಟಿಪಿಸಿಆರ್ ವರದಿಯನ್ನೇ ನಕಲಿ ಮಾಡಿಕೊಂಡು ಕರ್ನಾಟಕ ಪ್ರವೇಶಿಸುತ್ತಿರುವುದು ಕೊಡಗಿನಲ್ಲಿ ಬೆಳಕಿಗೆ ಬರುತ್ತಲೇ ದಕ್ಷಿಣ ಕನ್ನಡ ಗಡಿಭಾಗದಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ನಕಲಿ ಸರ್ಟಿಫಿಕೇಟ್ ಎಂದು ಸಂಶಯ ಬಂದರೆ, ಕೂಡಲೇ ಕ್ಯು ಆರ್ ಕೋಡ್ ಚೆಕ್ ಮಾಡುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಕೊಡಗಿನಲ್ಲಿ ಆಗಿರುವ ಘಟನೆ ಬಗ್ಗೆ ಅಲ್ಲಿನ ಎಸ್ಪಿಯಿಂದ ಮಾಹಿತಿ ಪಡೆದಿದ್ದೇನೆ. ಅಲ್ಲಿ ಆರೋಪಿಗಳ ವಿರುದ್ಧ ಎಪಿಡಮಿಕ್ ಆಕ್ಟ್ ಮತ್ತು ದಾಖಲೆಗಳನ್ನು ಪೋರ್ಜರಿ ಮಾಡಿದ್ದಕ್ಕಾಗಿ ಐಪಿಸಿ 465, 468 ಮತ್ತು 471 ಸೆಕ್ಷನ್ ಅಡಿ ಕೇಸು ದಾಖಲಿಸಿಕೊಂಡಿದ್ದಾರೆ. ಸರಕಾರಿ ದಾಖಲೆಗಳ ಪೋರ್ಜರಿ ಮಾಡುವುದು ಗಂಭೀರ ಅಪರಾಧವಾಗಿದ್ದು, ಆ ಬಗ್ಗೆ ಕೇಸು ದಾಖಲಿಸಿಕೊಳ್ಳಲು ಚೆಕ್ ಪೋಸ್ಟ್ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
Manjeshwar Couple caught for Fake RT PCR report Kerala Police alert at Borders.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm