ಬ್ರೇಕಿಂಗ್ ನ್ಯೂಸ್
17-08-21 08:10 am Mangaluru Correspondent ಕ್ರೈಂ
ಮಂಗಳೂರು, ಆಗಸ್ಟ್ 17: ಕೊರೊನಾ ಸೋಂಕು ತಗಲಿದೆ ಎಂಬ ಭಯದಲ್ಲಿ ದಂಪತಿ ಪೊಲೀಸ್ ಕಮಿಷನರ್ ಗೆ ಕರೆ ಮಾಡಿ, ನೇಣು ಬಿಗಿದು ಸಾವಿಗೆ ಶರಣಾಗಿರುವ ಘಟನೆ ಬೈಕಂಪಾಡಿ ಬಳಿ ನಡೆದಿದೆ.
ರಮೇಶ್ ಸುವರ್ಣ (45) ಮತ್ತು ಅವರ ಪತ್ನಿ ಗುಣ ಸುವರ್ಣ ಎಂಬ ದಂಪತಿ ಸಾವಿಗೆ ಶರಣಾದವರು. ಪತ್ನಿ ಗುಣ ಸುದೀರ್ಘ ಡೆತ್ ನೋಟ್ ಬರೆದಿಟ್ಟಿದ್ದು ನೋವು ಹೇಳಿಕೊಂಡಿದ್ದಾರೆ.
ಸ್ವತಃ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದೇನೆ. ದಿನಕ್ಕೆ ಎರಡು ಇನ್ಸುಲಿನ್ ಇಂಜೆಕ್ಷನ್ ಪಡೆದುಕೊಂಡರೂ ಸುಗರ್ ಕಂಟ್ರೋಲ್ ಬರ್ತಾ ಇಲ್ಲ. ಜೊತೆಗೆ, ಮೆಡಿಸಿನ್ ದೇಹಕ್ಕೆ ಒಗ್ಗಿಕೊಳ್ಳುತ್ತಿಲ್ಲ. ಮಕ್ಕಳಾಗಿಲ್ಲ. ಎರಡು ಬಾರಿ ಗರ್ಭಿಣಿಯಾಗಿ ತೊದರೆ ಆಗಿತ್ತು. ಒಮ್ಮೆ ಮಗುವಾಗಿ 13 ದಿನದಲ್ಲಿ ತೀರಿಕೊಂಡಿತ್ತು. ನಾವು 2000 ಇಸವಿಯಲ್ಲಿ ಮದುವೆಯಾಗಿದ್ದು ಸುದೀರ್ಘ ಕಾಲದಿಂದ ನೋವು ಕಂಡಿದ್ದೇವೆ. ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಸಕ್ಕರೆ ಕಾಯಿಲೆ ಉಂಟಾಗಿತ್ತು. ಆಬಳಿಕ ಮೆಡಿಸಿನ್ ದೇಹಕ್ಕೆ ಹಿಡಿಯದೇ ನರಕಪಡುತ್ತಿದ್ದೆ.
ಕಳೆದ ಒಂದು ವಾರದಿಂದ ಕೋವಿಡ್ ಸೋಂಕಿನ ಲಕ್ಷಣ ಕಂಡುಬಂದಿದೆ. ಗಂಡನಿಗೂ ಅದೇ ರೀತಿಯ ಲಕ್ಷಣಗಳಿವೆ. ಟಿವಿಯಲ್ಲಿ ಬರುವ ಸುದ್ದಿಗಳನ್ನು ನೋಡಿ ಹೆದರಿದ್ದೇವೆ. ಸಕ್ಕರೆ ಕಾಯಿಲೆ ಇದ್ದವರಿಗೆ ಬ್ಲಾಕ್ ಫಂಗಸ್ ಬರುತ್ತದೆ. ಕಣ್ಣು , ಮೂಗನ್ನು ಕೊಯ್ದು ತೆಗೆಯುತ್ತಾರೆ ಎಂದು ಹೇಳುತ್ತಿದ್ದು ನನಗೂ ಹಾಗೇ ಆಗಬಹುದೆಂದು ಭಯವಾಗುತ್ತಿದೆ. ಇದರಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ನಮ್ಮ ಅಂತ್ಯಕ್ರಿಯೆ ಹಿಂದು ಸಂಪ್ರದಾಯ ಪ್ರಕಾರ ನಡೆಯಬೇಕು. ಒಂದು ಲಕ್ಷ ರೂ. ಇಟ್ಟಿದ್ದು ನಮ್ಮ ಅಂತ್ಯಕ್ರಿಯೆಗೆ ಬಳಸಿಕೊಳ್ಳಿ. ಶರಣ್ ಪಂಪ್ವೆಲ್ ಮತ್ತು ಸತ್ಯಜಿತ್ ಸುರತ್ಕಲ್ ಅವರೊಂದಿಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ಅಂತ್ಯಕ್ರಿಯೆಗೆ ಸಹಕರಿಸಿ. ಮನೆ ಒಳಗಿನ ವಸ್ತುಗಳನ್ನು ಯಾರಿಗಾದರೂ ಬಡವರಿಗೆ ನೀಡಿ. ನನ್ನ ಮನೆಯವರಿಗಾಗಲೀ, ಗಂಡನ ಮನೆಯವರಿಗಾಗಲೀ ಇದರ ಅಗತ್ಯವಿಲ್ಲ ಎಂದು ಪತ್ರದಲ್ಲಿ ಗುಣ ಸುವರ್ಣ ಬರೆದಿದ್ದಾರೆ.
ಗಂಡ ಆರ್ಯ ಸುವರ್ಣ, ಇಂದು ಬೆಳಗ್ಗೆ ಏಳು ಗಂಟೆ ಸುಮಾರಿಗೆ ಪೊಲೀಸ್ ಕಮಿಷನರ್ ಗೆ ವಾಯ್ಸ್ ಮೆಸೇಜ್ ಕಳಿಸಿದ್ದು ತಾನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಹೇಳಿಕೊಂಡಿದ್ದರು. ಕೂಡಲೇ ಪೊಲೀಸ್ ಕಮಿಷನರ್ ಅವರಿಗೆ ಪ್ರತಿಕ್ರಿಯಿಸಿ, ದುಡುಕಿನ ನಿರ್ಧಾರ ಮಾಡದಂತೆ ಮನವಿ ಮಾಡಿದ್ದಾರೆ. ಆದರೆ, ತಿರುಗಿ ಫೋನ್ ಮಾಡಿದರೆ ರಿಸೀವ್ ಮಾಡದೇ ಇದ್ದುದರಿಂದ ಕಮಿಷನರ್ ಶಶಿಕುಮಾರ್ ಆತನ ಪತ್ತೆಗೆ ತುರ್ತಾಗಿ ಪೊಲೀಸರನ್ನು ಅಲರ್ಟ್ ಮಾಡಿದ್ದಾರೆ.
ಅಲ್ಲದೆ, ಮೀಡಿಯಾ ಗ್ರೂಪಿನಲ್ಲಿ ಆತನ ವಾಯ್ಸ್, ಫೋಟೊ ಷೇರ್ ಮಾಡಿ, ಆತನ ಪತ್ತೆಗೆ ಮತ್ತು ರಕ್ಷಣೆ ಮಾಡುವಂತೆ ಕೇಳಿಕೊಂಡಿದ್ದಾರೆ. ಅಲ್ಲದೆ, ಬೈಕಂಪಾಡಿ ಏರಿಯಾದಲ್ಲಿ ಯಾರಾದ್ರೂ ಇದ್ದರೆ ಈತನ ರಕ್ಷಣೆ ಮಾಡುವಂತೆ ಸೂಚಿಸಿದ್ದಾರೆ. 20 ನಿಮಿಷದಲ್ಲಿ ಪೊಲೀಸರ ತಂಡ ಬೈಕಂಪಾಡಿಯ ರಹೇಜಾ ಅಪಾರ್ಟ್ಮೆಂಟ್ ತಲುಪಿದ್ದು ಅಲ್ಲಿನ ಎಂಟನೇ ಮಹಡಿಯಲ್ಲಿ ಆತ್ಮಹತ್ಯೆ ಮಾಡಿದ್ದು ಕಂಡುಬಂದಿದೆ. ದಂಪತಿ ಇಬ್ಬರು ಕೂಡ ಮನೆಯ ಒಳಗೆ ಹಾಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಆರ್ಯ ಸುವರ್ಣ, ಪೊಲೀಸ್ ಕಮಿಷನರ್ ಸೇರಿದಂತೆ ತನ್ನ ಅಣ್ಣ, ಸಂಬಂಧಿಕರು, ಗೆಳೆಯರಿಗೂ ವಾಯ್ಸ್ ಮೆಸೇಜ್ ಕಳಿಸಿದ್ದಾರೆ. ನಾನು ಜೀವನ ಅಂತ್ಯ ಮಾಡಿಕೊಳ್ಳುತ್ತಿದ್ದೇನೆ. ಆದರೆ, ಇದರಿಂದ ಯಾರಿಗೂ ಹೊರೆಯಾಗಬಾರದು. ಅಂತ್ಯಕ್ರಿಯೆ ವೇಳೆ ಜಾಗ್ರತೆ ವಹಿಸಿ. ಕೊರೊನಾ ಆಗಿ ಉಸಿರಾಟದ ಸಮಸ್ಯೆ ಎದುರಾಗಿದೆ. ಉಸಿರುಕಟ್ಟಿದ ರೀತಿ ಆಗುತ್ತಿದೆ ಎಂದು ಹೇಳಿರುವ ಆಡಿಯೋ ಮೆಸೇಜ್ ಇದೆ. ಪೊಲೀಸರು ಮೊಬೈಲ್ ನಂಬರ್ ಆಧರಿಸಿ, ಜಾಗ ಟ್ರೇಸ್ ಮಾಡಿದ್ದಾರೆ. ಆದರೆ, ನಿನ್ನೆ ರಾತ್ರಿಯೇ ಆತ್ಮಹತ್ಯೆಗೆ ನಿರ್ಧರಿಸಿದಂತೆ ಕಂಡುಬಂದಿದೆ. ಬೆಳಗ್ಗೆ ಎದ್ದ ಕೂಡಲೇ ಪತ್ನಿ ಮೊದಲಿಗೆ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದು ಆ ಬಗ್ಗೆ ಗಂಡ ಪೊಲೀಸ್ ಕಮಿಷನರ್ ಬಳಿ ಹೇಳಿಕೊಂಡಿದ್ದರು. ಒಂದು ಲಕ್ಷ ರೂಪಾಯಿ ಹಣವನ್ನೂ ಟೇಬಲ್ ಮೇಲೆ ಪತ್ರದ ಜೊತೆಗಿಟ್ಟಿದ್ದು ದಂಪತಿಯ ದುರಂತ ಅಂತ್ಯಕ್ಕೆ ಸಾಕ್ಷಿ ಹೇಳುತ್ತಿದೆ.
In a shocking incident married couple have committed suicide at their flat for being tested covid positive. Husband calls the commissioner of police Shashi Kumar, Naleen Kumar Kateel, and Sharan Pumpwell before hanging to death. The Commissioner of police tried to stop him from taking the extreme step but unfortunately when the police team arrived the spot duo were found dead. A case has been registered at Surathkal Police station.
23-04-25 08:04 pm
Bangalore Correspondent
Karnataka, D K Shivakumar, Pahalgam: ಕಾಶ್ಮೀರ...
23-04-25 06:54 pm
Pahalgam Terror Attack, Bharath Bhushan: ಪಹಲ್...
23-04-25 02:51 pm
Harish Poonja, Speaker U T Khader: ಸ್ಪೀಕರ್ ಧರ...
23-04-25 01:06 pm
ಒಂದೇ ಸಮುದಾಯವನ್ನು ಶಿಕ್ಷಣ, ಉದ್ಯೋಗ ಕಾರಣಕ್ಕೆ ಪ್ರತ...
22-04-25 10:15 pm
23-04-25 09:25 pm
HK News Desk
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಲಷ್ಕರ್...
23-04-25 05:16 pm
Pahalgam terror attack Live: ಜಮ್ಮು ಕಾಶ್ಮೀರದಲ್...
22-04-25 10:33 pm
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
23-04-25 09:45 pm
Mangalore Correspondent
Terror Attack, Mangalore Mp, Brijesh Chowta:...
23-04-25 09:36 pm
Bearys Group, Bearys Turning Point mall, Dera...
23-04-25 09:23 pm
ವಿನೂತನ ಒಳ ಮೀಸಲಾತಿ ನೀತಿ ಪ್ರಕಟಿಸಲು ಒತ್ತಾಯ ; ಬೀದ...
21-04-25 10:32 pm
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
23-04-25 01:03 pm
Mangalore Correspondent
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm