50 ಕ್ಕೂ ಹೆಚ್ಚು ಕರುಗಳ ಅಮಾನುಷ ಸಾಗಣೆ ; ಟೆಂಪೋ ಪಲ್ಟಿಯಾಗಿ 20 ಕರುಗಳು ಸಾವು!

19-08-21 03:59 pm       Headline Karnataka News Network   ಕ್ರೈಂ

ಕರುಗಳನ್ನು ಟೆಂಪೋದಲ್ಲಿ ಅಮಾನುಷವಾಗಿ ಸಾಗಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿ 20ಕ್ಕೂ ಹೆಚ್ಚು ಕರುಗಳು ದಾರುಣ ಮೃತಪಟ್ಟ ಘಟನೆ ನಡೆದಿದೆ.‌

ಹಾಸನ, ಆಗಸ್ಟ್ 19 : ಇತ್ತೀಚೆಗಷ್ಟೇ ಮಂಗಗಳ ಮಾರಣಹೋಮಕ್ಕೆ ಸಾಕ್ಷಿಯಾಗಿದ್ದ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಮತ್ತೊಂದು ಅಮಾನವೀಯ ಬೆಳಕಿಗೆ ಬಂದಿದೆ.‌ ಕರುಗಳನ್ನು ಟೆಂಪೋದಲ್ಲಿ ಅಮಾನುಷವಾಗಿ ಸಾಗಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿ 20ಕ್ಕೂ ಹೆಚ್ಚು ಕರುಗಳು ದಾರುಣ ಮೃತಪಟ್ಟ ಘಟನೆ ನಡೆದಿದೆ.‌

ಬೇಲೂರು ತಾಲೂಕಿನ ದ್ಯಾವಪ್ಪನಹಳ್ಳಿ ಬಳಿಯಿಂದ ಗೂಡ್ಸ್ ವಾಹನದಲ್ಲಿ 50ಕ್ಕೂ ಹೆಚ್ಚು ಕರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಗೋಹತ್ಯೆ ನಿಷೇಧ ಹಿನ್ನೆಲೆ ರಾತ್ರೋರಾತ್ರಿ ಕರುಗಳಿಗೆ ಬಾಯಿ, ಕಾಲುಗಳಿಗೆ ಹಗ್ಗ ಕಟ್ಟಿ ಅಮಾನವೀಯವಾಗಿ ಸಾಗುಸುತ್ತಿದ್ದರು. 

ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿಯಾಗಿದೆ. ಈ ವೇಳೆ ಗೂಡ್ಸ್ ವಾಹನದಲ್ಲಿದ್ದ 20ಕ್ಕೂ ಹೆಚ್ಚು ಕರುಗಳು ಮೃತಪಟ್ಟಿವೆ. ಕೆಲವು ಕರುಗಳು ವಾಹನದಲ್ಲಿಯೇ ಉಸಿರುಗಟ್ಟಿ ಸಾವು ಕಂಡಿದ್ದರೆ, ಕೆಲವು ಕರುಗಳು ಅಪಘಾತದ ತೀವ್ರತೆಗೆ ಮೃತಪಟ್ಟಿವೆ ಎನ್ನಲಾಗಿದೆ. 30 ಕರುಗಳನ್ನು ಪೊಲೀಸರು ರಕ್ಷಿಸಿದ್ದು ಸ್ಥಳದಲ್ಲಿಯೇ ಕಟ್ಟಿ ಹಾಕಿದ್ದಾರೆ.

Illegal cattle trafficking 20 calves killed after accident in which tempo topples at Hassan.  30 cows were rescued by people.