ಬ್ರೇಕಿಂಗ್ ನ್ಯೂಸ್

ಜಾತಿ ಗಣತಿ ಮೊದಲೇ ಮನೆಗಳಿಗೆ ಸ್ಟಿಕ್ಕರ್ ಅಂಟಿಸಿ ಗೊಂದಲ, ತರಾತುರಿಯಲ್ಲಿ ಸಮೀಕ್ಷೆಗಿಳಿಸಿ ಶಿಕ್ಷಕರನ್ನೇ ಗಲಿಬಿಲಿ ಮಾಡಿಸಿದ್ದಾರೆ, ಮತ್ತೆ ನೂರಾರು ಕೋಟಿ ಹಣ ಕೊಳ್ಳೆ ಹೊಡೀಬೇಡಿ ; ಸತೀಶ್ ಕುಂಪಲ    |    Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿಂಗರತಿ ಲೈಂಗಿಕ ದೌರ್ಜನ್ಯ ; ಬೇಕಲ ಶಿಕ್ಷಣಾಧಿಕಾರಿ, ರೈಲ್ವೇ ಉದ್ಯೋಗಿ, ಜಮಾತೆ ಇಸ್ಲಾಮಿ, ಲೀಗ್ ಕಾರ್ಯಕರ್ತರು ಸೇರಿ ಹತ್ತು ಮಂದಿ ಪೊಲೀಸ್ ಬಲೆಗೆ, ಕಾಸರಗೋಡಿನಲ್ಲಿ ಸಂಚಲನ ಮೂಡಿಸಿದ ಪ್ರಕರಣ     |    ಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನುಷ್ಯನ ಎಲುಬು, ಬುರುಡೆಗಳು ಪತ್ತೆ, ಧರ್ಮಸ್ಥಳ ಪ್ರಕರಣಕ್ಕೆ ಮತ್ತೆ ತಿರುವು, ಎಸ್ಐಟಿ ಶೋಧ ಕಾರ್ಯ ಮುಂದುವರಿಕೆಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನುಷ್ಯನ ಎಲುಬು, ಬುರುಡೆಗಳು ಪತ್ತೆ, ಧರ್ಮಸ್ಥಳ ಪ್ರಕರಣಕ್ಕೆ ಮತ್ತೆ ತಿರುವು, ಎಸ್ಐಟಿ ಶೋಧ ಕಾರ್ಯ ಮುಂದುವರಿಕೆ    |   

ಆ್ಯಪ್​ ಮೂಲಕ ಪ್ರೀತಿ, ಸುತ್ತಾಡಿಕೊಂಡಿದ್ದ ಜೋಡಿ ; ಎಲ್ಲ ಮುಗಿಸಿ ಪರಾರಿಯಾದ ಕೇಡಿ

20-08-21 01:33 pm       Headline Karnataka News Network   ಕ್ರೈಂ

ಆ್ಯಪ್​ವೊಂದರ ಮೂಲಕ ಯುವಕನೊಬ್ಬ ಅಮೆರಿಕದಲ್ಲಿ ಓದುತ್ತಿದ್ದ ಯುವತಿ ಜತೆ ಸಂಪರ್ಕ ಬೆಳೆಸಿ ವಂಚಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಹೈದರಾಬಾದ್, ಆಗಸ್ಟ್ 20: ಆ್ಯಪ್​ವೊಂದರ ಮೂಲಕ ಯುವಕನೊಬ್ಬ ಅಮೆರಿಕದಲ್ಲಿ ಓದುತ್ತಿದ್ದ ಯುವತಿ ಜತೆ ಸಂಪರ್ಕ ಬೆಳೆಸಿ ವಂಚಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಯುವತಿ ಹೈದರಾಬಾದ್ ಪೊಲೀಸರಿಗೆ ದೂರು ನೀಡಿದ್ದಾಳೆ.

ಸಂತ್ರಸ್ತೆಯು ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದು, ಆ್ಯಪ್​ವೊಂದರ ಮೂಲಕ ಆದಿತ್ಯ ಎಂಬಾತನ ಪರಿಚಯವಾಗಿದೆ. ಈ ವೇಳೆ, ಯುವಕ ನನ್ನ ಬಳಿ ಒಂದು ಕೋಟಿ ರೂಪಾಯಿ ಮೌಲ್ಯದ ಆಸ್ತಿಯಿದೆ. ನಾನು ನಿನ್ನನ್ನು ಮದುವೆಯಾಗುತ್ತೇನೆ. ಹೈದರಾಬಾದ್​ಗೆ ಬಾ ಎಂದು ಕರೆದಿದ್ದಾನೆ.

ಇದನ್ನು ನಂಬಿದ ಆಕೆ, ಹೈದರಾಬಾದ್​ಗೆ ಬಂದು ಮಣಿಕೊಂಡದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾಳೆ. ಬಳಿಕ ಇಬ್ಬರು ಧರ್ಮಶಾಲಾ, ಜಮ್ಮುಕಾಶ್ಮೀರ, ಶ್ರೀನಗರ, ಗೋವಾ ಎಲ್ಲಾ ಸುತ್ತಾಡಿದ ನಂತರ ಬಂಜಾರ ಹಿಲ್ಸ್​ಗೆ ಮನೆ ಶಿಫ್ಟ್ ಮಾಡಿದ್ದಾರೆ.

ಕೆಲ ದಿನಗಳ ನಂತರ ಸಂತ್ರಸ್ತೆಯು ತಂದೆಯ ಜನ್ಮದಿನಕ್ಕೆಂದು ಹೈದರಾಬಾದ್​ನ ಎಂಎಸ್ ಮಕ್ತಾಗೆ ಹೋಗಿದ್ದು, ಯುವಕ ಬೆಂಗಳೂರಿಗೆ ಹೋಗಿದ್ದಾನೆ. ಎಷ್ಟೇ ದಿನಗಳಾದರೂ ಯುವಕ ಮರಳಿ ಬಂದಿಲ್ಲ. ಅವನ ಮೊಬೈಲ್​ ಕೂಡ ಸ್ವಿಚ್ಡ್ ಆಫ್ ಬರುತ್ತಿದ್ದು, ಯುವತಿ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾಳೆ.