ಬ್ರೇಕಿಂಗ್ ನ್ಯೂಸ್
21-08-21 05:23 pm Headline Karnataka News Network ಕ್ರೈಂ
ಗುವಾಹಟಿ, ಆಗಸ್ಟ್ 21: ಸಾಮಾಜಿಕ ಜಾಲತಾಣದಲ್ಲಿ ತಾಲಿಬಾನ್ ಪರವಾಗಿ ಪೋಸ್ಟ್ ಮಾಡಿದ ಕಾರಣದಿಂದಾಗಿ ಅಸ್ಸಾಂನ ಹನ್ನೊಂದು ಜಿಲ್ಲೆಗಳಿಂದ 14 ಜನರನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಸುಮಾರು 20 ವರ್ಷಗಳ ಬಳಿಕ ಅಮೆರಿಕವು ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ಹಿಂದಕ್ಕೆ ಪಡೆಯುತ್ತಿದ್ದಂತೆ ತಾಲಿಬಾನ್ ಅಪ್ಘಾನಿಸ್ತಾವನ್ನು ವಶಕ್ಕೆ ಪಡೆದಿದೆ. ಈ ತಾಲಿಬಾನ್ ಉಗ್ರರ ಪರವಾಗಿ ಈ ಬಂಧಿತ 14 ಜನರು ಪೋಸ್ಟ್ ಮಾಡಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿ, "ಅಸ್ಸಾಂನಲ್ಲಿ ಒಟ್ಟು 14 ಜನರನ್ನು ತಾಲಿಬಾನ್ ಪರ ಪೋಸ್ಟ್ ಹಾಕಿದ ಕಾರಣ ಬಂಧನ ಮಾಡಲಾಗಿದೆ. ಈ 14 ಮಂದಿ ಅಸ್ಸಾಂನ 11 ಜಿಲ್ಲೆಗಳಿಗೆ ಸೇರಿದವರು ಆಗಿದ್ದಾರೆ. ಈ ಬಂಧಿತ ವ್ಯಕ್ತಿಗಳ ಪೈಕಿ ಹೈಲಕಂಡಿಯ ಎಮ್‌ಬಿಬಿಎಸ್ ವಿದ್ಯಾರ್ಥಿಯೂ ಸೇರಿದ್ದಾನೆ. ಈ ವಿದ್ಯಾರ್ಥಿಯು ತೇಜ್‌ಪುರ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾನೆ. ಇನ್ನೂ ಬೇರೆ ಇಬ್ಬರು ವಿದ್ಯಾರ್ಥಿಗಳನ್ನು ಕೂಡಾ ಬಂಧನ ಮಾಡಲಾಗಿದೆ," ಎಂದು ಮಾಹಿತಿ ನೀಡಿದ್ದಾರೆ.
"ಇನ್ನು ಈ ಪೈಕಿ ಕೆಲವರು ನೇರವಾಗಿ ತಾಲಿಬಾನ್ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರೆ, ಇನ್ನೂ ಕೆಲವರು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ದಾಳಿ ವಿಚಾರದಲ್ಲಿ ಭಾರತವನ್ನು ಟೀಕೆ ಮಾಡಿದ್ದಾರೆ. ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡ ತಾಲಿಬಾನ್ ಪರವಾಗಿ ಮಾತನಾಡದ ಭಾರತ ಹಾಗೂ ಭಾರತದ ಮಾಧ್ಯಮಗಳ ವಿರುದ್ದ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಬಂಧನಕ್ಕೆ ಒಳಪಟ್ಟಿದ್ದಾರೆ," ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಸ್ಸಾಂನ ಸೈಬರ್ ಸೆಲ್‌ನ ಮುಖಾಂತರ ಸಾಮಾಜಿಕ ಜಾಲತಾಣದಲ್ಲಿ ತಾಲಿಬಾನ್ ಪರವಾಗಿ, ಭಾರತದ ವಿರುದ್ದವಾಗಿ ಪೋಸ್ಟ್ ಮಾಡಿದ ಜನರನ್ನು ಪತ್ತೆ ಹಚ್ಚಲಾಗಿದ್ದು, ಬಳಿಕ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಕೂಡಾ ಹಲವು ಮಂದಿ ಆರೋಪಿಗಳಿಗಾಗಿ ವಿಶೇಷ ಪೊಲೀಸ್ ಅಧಿಕಾರಿಗಳು ಬಲೆ ಬೀಸಿದ್ದಾರೆ ಎಂದು ಅಸ್ಸಾಂ ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ವೈಲೆಟ್ ಬರೂವಾ, "ತಾಲಿಬಾನ್ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದವರ ವಿರುದ್ದವಾಗಿ ಅಸ್ಸಾಂ ಪೊಲೀಸರು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಈ ತಾಲಿಬಾನ್ ಪರವಾಗಿ ಮಾಡಲಾದ ಪೋಸ್ಟ್‌ಗಳು ಭಾರತದ ಭದ್ರತೆಗೆ ಅಪಾಯವಾಗಿದೆ," ಎಂದು ಅಭಿಪ್ರಾಯಿಸಿದ್ದಾರೆ.
ಇನ್ನು "ಈ ತಾಲಿಬಾನ್ ಪರವಾಗಿ ಮಾತನಾಡುವ ಜನರ ವಿರುದ್ದ ನಾವು ಕ್ರಿಮಿನಲ್ ಪ್ರಕರಣಗಳನ್ನು ದಾಖಲು ಮಾಡುತ್ತಿದ್ದೇವೆ. ಇಂತಹ ತಾಲಿಬಾನ್ ಪರವಾದ ಹೇಳಿಕೆ ಅಥವಾ ಪೋಸ್ಟ್‌ಗಳ ಬಗ್ಗೆ ಗಮನಕ್ಕೆ ಬಂದರೆ ದಯವಿಟ್ಟು ಪೊಲೀಸರಿಗೆ ಮಾಹಿತಿ ನೀಡಿ," ಎಂದು ಟ್ವೀಟ್ ಮೂಲಕ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ವೈಲೆಟ್ ಬರೂವಾ ಮನವಿ ಮಾಡಿದ್ದಾರೆ.
ತಾಲಿಬಾನ್ ಪರವಾಗಿ ಅಥವಾ ಭಯೋತ್ಪಾದನೆ ಪರವಾಗಿ ಮಾಡಲಾದ ಸುಮಾರು 17 ರಿಂದ 20 ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವುದು ಈವರಗೆ ಗಮನಕ್ಕೆ ಬಂದಿದೆ. ಈ ಪೋಸ್ಟ್‌ಗಳನ್ನು ಮಾಡಲಾಗಿರುವ ಖಾತೆಗಳ ಬಗ್ಗೆ ಮಾಹಿತಿಯನ್ನು ಅಸ್ಸಾಂನ ಸೈಬರ್ ಸೆಲ್‌ನ ಮುಖಾಂತರ ಪತ್ತೆ ಹಚ್ಚಲಾಗಿದೆ. ಈವರೆಗೆ 14 ಮಂದಿಯನ್ನು ಬಂಧಿಸಲಾಗಿದ್ದು, ಇನ್ನು ಹಲವಾರು ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ಲಭಿಸಿದೆ.
ಅಸ್ಸಾಂ ರಾಜ್ಯದ 11 ಜಿಲ್ಲೆಗಳಿಂದ ತಾಲಿಬಾನ್ ಪರವಾಗಿ ಪೋಸ್ಟ್‌ಗಳನ್ನು ಮಾಡಲಾಗಿದೆ. ಈ ಜನರು ಅಸ್ಸಾಂನಲ್ಲೇ ಇರುವವರು ಆಗಿದ್ದಾರೆ. ಇನ್ನುಳಿದಂತೆ ಸೌದಿ ಅರೇಬಿಯಾ, ದುಬೈ ಹಾಗೂ ಮುಂಬೈನಿಂದ ಮಾಡಲಾಗಿದೆ. ಈ ಜನರು ಕೂಡಾ ಅಸ್ಸಾಂನವರೇ ಆಗಿದ್ದಾರೆ. ಪ್ರಸ್ತುತ ಅಲ್ಲಿ ನೆಲೆಸಿದ್ದು ಅಲ್ಲಿಂದ ಪೋಸ್ಟ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಅಸ್ಸಾಂನಿಂದ ಹೊರಗೆ ನೆಲೆಸಿರುವ ಈ ಮೂರು ಜನರ ಬಗ್ಗೆ ಅಧಿಕ ಮಾಹಿತಿಯನ್ನು ಅಸ್ಸಾಂನ ಸೈಬರ್ ಸೆಲ್‌ನ ಪೊಲೀಸರು ಕಲೆ ಹಾಕುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಲಭಿಸಿದ ಬಳಿಕ ಅಸ್ಸಾಂನ ಸೈಬರ್ ಸೆಲ್‌ನ ಪೋಲಿಸರು ಮಾಹಿತಿಯನ್ನು ಗುಪ್ತಚರ ಸಿಬ್ಬಂದಿಗಳಿಗೆ ನೀಡಲಿದ್ದಾರೆ ಎಂದು ಹೇಳಲಾಗಿದೆ.
Police in Assam have arrested 14 people for allegedly making pro-Taliban posts on social media. These posts expressed support for the hardline Islamic militant outfit’s takeover of Afghanistan.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm