ಹೆಣ್ಮಕ್ಕಳ ಹೇರ್ ಬ್ಯಾಂಡಿನಲ್ಲೂ ಚಿನ್ನ ಸಾಗಣೆ ; ಕಸ್ಟಮ್ಸ್ ಕೈಗೆ ಸಿಕ್ಕಿಬಿದ್ದ ಖದೀಮ

21-08-21 05:52 pm       Mangaluru Correspondent   ಕ್ರೈಂ

ಭಟ್ಕಳ ಮೂಲದ ವ್ಯಕ್ತಿ ಹೆಣ್ಮಕ್ಕಳ ಹೇರ್ ಬ್ಯಾಂಡ್​ನಲ್ಲಿ ಚಿನ್ನವನ್ನು ಬಚ್ಚಿಟ್ಟು ತರುತ್ತಿದ್ದಾಗ ಮಂಗಳೂರು ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. 

ಮಂಗಳೂರು, ಆಗಸ್ಟ್ 21 : ಕೆಲವರು ಚಿನ್ನ ಕಳ್ಳಸಾಗಣೆಗೆ ಏನೆಲ್ಲಾ ಕಸರತ್ತು ಮಾಡುತ್ತಾರೆ. ಇಲ್ಲೊಬ್ಬ ಭಟ್ಕಳ ಮೂಲದ ವ್ಯಕ್ತಿ ಹೆಣ್ಮಕ್ಕಳ ಹೇರ್ ಬ್ಯಾಂಡ್​ನಲ್ಲಿ ಚಿನ್ನವನ್ನು ಬಚ್ಚಿಟ್ಟು ತರುತ್ತಿದ್ದಾಗ ಮಂಗಳೂರು ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. 

ದುಬೈನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಬಂದಿದ್ದ ಭಟ್ಕಳದ ಮುರುಡೇಶ್ವರ ನಿವಾಸಿ ಹೊಸ ವಿಧಾನದಲ್ಲಿ ಚಿನ್ನ ಕಳ್ಳಸಾಗಣೆಗೆ ಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ತಪಾಸಣೆ ಮಾಡುವ ಸಂದರ್ಭದಲ್ಲಿ ಮಹಿಳೆಯರ ಹೇರ್ ಬ್ಯಾಂಡ್ ಸಿಕ್ಕಿದೆ. ಹೇರ್ ಬ್ಯಾಂಡ್​ನ ಮೇಲ್ಬಾಗದಲ್ಲಿ ತಂತಿ ರೂಪದಲ್ಲಿ ಚಿನ್ನವನ್ನು ಅಡಗಿಸಿ ತಂದಿದ್ದಾನೆ. ಪರಿಶೀಲನೆ ನಡೆಸಿದಾಗ 115 ಗ್ರಾಂ ಚಿನ್ನ ಪತ್ತೆಯಾಗಿದ್ದು, ಇದನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಚಿನ್ನದ ಮೌಲ್ಯ ರೂ 5,58,900 ಎಂದು ಅಂದಾಜಿಸಲಾಗಿದೆ.

ಇದೇ ಆಗಸ್ಟ್ 12 ರಂದು ಏರ್ ಇಂಡಿಯಾ ಎಕ್ಸ್​ಪ್ರೆಸ್ ವಿಮಾನದಲ್ಲಿ ಬಂದಿದ್ದ ಕಾಸರಗೋಡು ಮೂಲದ ಪ್ರಯಾಣಿಕನ ಬಳಿ ರೂ. 16,85,087 ಮೌಲ್ಯದ 350.330 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು.

ತೋಳು, ಸೊಂಟ ದೇಹದ ಇನ್ನಿತರ ಒಳಭಾಗದಲ್ಲಿ ಚಿನ್ನವನ್ನು ಅಡಗಿಸಿಕೊಂಡು ಸಾಗಿಸುತ್ತಿದ್ದಾಗ, ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾನೆ. ಎರಡು ಪ್ರಕರಣಗಳಲ್ಲಿ ಪ್ರಯಾಣಿಕರು ಮತ್ತು ಚಿನ್ನವನ್ನು ವಶಕ್ಕೆ ಪಡೆದುಕೊಂಡ ಕಸ್ಟಮ್ಸ್ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

350 grams of gold smuggled in hair band  seized from Mangalore international airport from Dubai returnee. The passenger is said to be from Kasargod.