ಬ್ರೇಕಿಂಗ್ ನ್ಯೂಸ್
26-08-21 05:39 pm Headline Karnataka News Network ಕ್ರೈಂ
ಮಂಗಳೂರು, ಆಗಸ್ಟ್ 26: ಅದು ಅತ್ಯಂತ ಅಪರೂಪದ ರತ್ನ. ಅಷ್ಟೇ ಅಲ್ಲಾ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿ ಬೆಲೆಯುಳ್ಳ ಸಾಮಗ್ರಿ. ಹಿಂದಿನ ರಾಜರ ಕಾಲದಲ್ಲಿ ವಜ್ರ, ವೈಢೂರ್ಯಗಳಿದ್ದವು ಎನ್ನುವುದನ್ನು ಕೇಳಿದ್ದೆವು. ಆದರೆ, ವೈಢೂರ್ಯ ಸಾಮಾನ್ಯವಾಗಿ ನೋಡಲು ಸಿಗುವುದಿಲ್ಲ. ಆದರೆ, ಒಂದು ಕೇಜಿ ತೂಕದ ವೈಢೂರ್ಯ ಶಿವಮೊಗ್ಗದಲ್ಲಿ ಎರಡು ವರ್ಷಗಳ ಹಿಂದೆ ದರೋಡೆಯಾಗಿತ್ತು. ವಿಟ್ಲ ಮತ್ತು ಕಾಸರಗೋಡು ಭಾಗದ ಖದೀಮರ ತಂಡ ಅದನ್ನು ಖರೀದಿಸುವ ಸೋಗಿನಲ್ಲಿ ಶಿವಮೊಗ್ಗಕ್ಕೆ ತೆರಳಿ, ಅಲ್ಲಿಂದಲೇ ಎಗರಿಸಿತ್ತು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಂದಾಜು ಒಂದೂವರೆ ಕೋಟಿ ರೂಪಾಯಿ ಮೌಲ್ಯ ಇದೆ ಎನ್ನಲಾಗುವ ವೈಢೂರ್ಯ ನಾಪತ್ತೆಯಾಗಿತ್ತು. ಅದನ್ನು ಖರೀದಿಸುವ ನೆಪದಲ್ಲಿ ಆ ಮನೆಗೆ ತೆರಳಿದ್ದ ಖದೀಮರು ವೈಢೂರ್ಯವನ್ನು ಅದೆಷ್ಟೋ ವರ್ಷಗಳಿಂದ ಜತನದಿಂದ ಕಾಪಾಡಿಕೊಂಡು ಬಂದಿದ್ದ ಕುಟುಂಬಕ್ಕೆ ದೋಖಾ ಮಾಡಿದ್ದರು. ಬಳಿಕ ವೈಢೂರ್ಯವನ್ನು ದರೋಡೆ ಆಗಿರುವ ಬಗ್ಗೆ ವ್ಯಕ್ತಿಯೊಬ್ಬರು ಶಿವಮೊಗ್ಗ ನಗರದ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರು ದಾಖಲಾಗಿ, ಎರಡು ವರ್ಷವಾದ್ರೂ ಯಾವುದೇ ಸುಳಿವು ಇರಲಿಲ್ಲ. ಪೊಲೀಸರು ಕೂಡ ಮರೆತು ಬಿಟ್ಟಿದ್ದರೋ ಏನೋ..
ಆದರೆ, ಕಳೆದ ವರ್ಷ 2020ರ ಅಕ್ಟೋಬರ್ ತಿಂಗಳ ಅಂತರದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮತ್ತು ಮಂಗಳೂರಿನ ಉಳ್ಳಾಲದಲ್ಲಿ ಖೋಟಾ ನೋಟು ಜಾಲ ಪತ್ತೆಯಾಗಿತ್ತು. ಚಿಕ್ಕಮಗಳೂರಿನಲ್ಲಿ 5.5 ಲಕ್ಷ ಖೋಟಾ ನೋಟು ಸಿಕ್ಕಿದ್ದರೆ, ಉಳ್ಳಾಲದಲ್ಲಿ ಎರಡೂವರೆ ಲಕ್ಷ ಮೌಲ್ಯದ ಖೋಟಾ ನೋಟು ಪತ್ತೆಯಾಗಿತ್ತು. ಪ್ರಕರಣದಲ್ಲಿ ಕೆಲವರನ್ನು ಪೊಲೀಸರು ಬಂಧಿಸಿದ್ದರು. ಅದರಲ್ಲಿ ಪ್ರಮುಖರಾಗಿದ್ದವರು ವಿಟ್ಲ ಬಳಿಯ ಕೊಡುಂಗಾಯಿ ಪ್ರದೇಶದ ಕಳ್ಳರ ತಂಡ. ವಿಟ್ಲ, ಕನ್ಯಾನ ಮತ್ತು ಕೇರಳದ ಗಡಿಭಾಗ ಕಾಸರಗೋಡಿನ ಒಂದು ಕುಖ್ಯಾತ ತಂಡ ಈ ರೀತಿಯ ಕಳವು, ಅಪಹರಣ, ಬ್ಲಾಕ್ಮೇಲ್, ಹನಿಟ್ರ್ಯಾಪ್ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಕಂಡುಬಂದಿತ್ತು.
ವಿಟ್ಲದ ಖದೀಮರ ತಂಡ ಖೋಟಾ ನೋಟು, ಹಾಸನ, ಶಿವಮೊಗ್ಗದಲ್ಲಿ ದರೋಡೆ ಪ್ರಕರಣದಲ್ಲಿರುವುದು ತಿಳಿಯುತ್ತಿದ್ದಂತೆ, ಚಿಕ್ಕಮಗಳೂರು ಪೊಲೀಸರು ಒಂದು ಮೂಲವನ್ನು ಆಧರಿಸಿ ಕೇರಳದಲ್ಲಿ ಕಾರ್ಯಾಚರಣೆ ಆರಂಭಿಸಿದ್ದರು. ಖೋಟಾ ನೋಟು ಜಾಲದಲ್ಲಿ ಪ್ರಮುಖ ಆರೋಪಿ ಯಾರೆಂದು ಗೊತ್ತಿದ್ದರೂ, ಆತನ ಸುಳಿವಿಗಾಗಿ ತಪಾಸಣೆಯಲ್ಲಿ ತೊಡಗಿದ್ದರು. ಅದಕ್ಕೂ ಮುನ್ನ ವೈಢೂರ್ಯವನ್ನು ರಾಬರಿ ಮಾಡಿಕೊಂಡು ಹೋದ ತಂಡದಲ್ಲಿಯೂ ಮಂಗಳೂರಿನವರು ಇದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಖೋಟಾ ನೋಟು ಮತ್ತು ವೈಢೂರ್ಯ ದರೋಡೆ ಮಾಡಿದ್ದ ತಂಡದಲ್ಲಿ ಒಂದೇ ತಂಡ ಭಾಗಿಯಾಗಿರುವ ಶಂಕೆ ಇತ್ತಾದರೂ, ಯಾವುದೇ ಸುಳಿವು ಸಿಕ್ಕಿರಲಿಲ್ಲ.
ವೇಷ ಮರೆಸಿಕೊಂಡು ಕೇರಳಕ್ಕೆ ತೆರಳಿದ್ದ ಚಿಕ್ಕಮಗಳೂರು ಸೈಬರ್ ಪೊಲೀಸರ ತಂಡ, ಎರ್ನಾಕುಲಂ ಜಿಲ್ಲೆಯಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಕೊಂಡು ತಲೆಮರೆಸಿಕೊಂಡಿದ್ದ ಇಬ್ಬರನ್ನು ಅರೆಸ್ಟ್ ಮಾಡಿದ್ದರು. ವಿಟ್ಲ ಸಮೀಪದ ಕೊಡುಂಗಾಯಿ ನಿವಾಸಿ ಜುಬೇರ್ ಎನ್ನುವಾತ ಖೋಟಾ ನೋಟು ಜಾಲದ ಪ್ರಮುಖ ಆರೋಪಿಯಾಗಿದ್ದು ಎರ್ನಾಕುಲಂನಲ್ಲಿದ್ದೇ ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ. ಅದರ ಜೊತೆಗೆ, ವೇಶ್ಯಾವಾಟಿಕೆ ದಂಧೆಯನ್ನೂ ಮಾಡುತ್ತಾ ಬ್ಲಾಕ್ಮೇಲ್, ಹನಿಟ್ರಾಪ್ ರೀತಿಯ ಹರಾಮಿ ಕೆಲಸವನ್ನೂ ಮಾಡುತ್ತಿದ್ದ. ಹೀಗೆ ಸಿಕ್ಕಿಬಿದ್ದ ಜುಬೇರ್ ಮೇಲೆ ಪೋಲೀಸ್ ಟ್ರೀಟ್ಮೆಂಟ್ ಬೀಳುತ್ತಲೇ ವೈಢೂರ್ಯ ದರೋಡೆ ಪ್ರಕರಣವೂ ಹೊರಬಿದ್ದಿದೆ. ಆತನ ಜೊತೆಗಿದ್ದ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿ ಗುರತಿಸಲ್ಪಟ್ಟಿದ್ದ ಕಾಸರಗೋಡು ನಿವಾಸಿಯನ್ನೂ ಪೊಲೀಸರು ಎತ್ತಾಕ್ಕೊಂಡು ಬಂದಿದ್ದಾರೆ. ಅಲ್ಲಿಗೆ, ಖೋಟಾ ನೋಟು ಜಾಲ ಮತ್ತು ಕೋಟ್ಯಂತರ ಬೆಲೆಯುಳ್ಳ ವೈಢೂರ್ಯ ದರೋಡೆ ಪ್ರಕರಣವೂ ಹೊರಬಂದಿತ್ತು. ಜೋಪಾನವಾಗಿಟ್ಟಿದ್ದ ವೈಢೂರ್ಯವನ್ನೂ ಆರೋಪಿಗಳ ಕೈಯಿಂದ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳ ಬಳಿಯಿಂದ 500 ರೂ. ಮುಖಬೆಲೆಯ 5.57 ಲಕ್ಷ ನಕಲಿ ನೋಟುಗಳು, ಐದು ಸಾವಿರ ರೂ. ನಗದು, ಮೂರು ಕಾರು, ಐದು ಮೊಬೈಲ್ ಫೋನ್, ನಕಲಿ ನೋಟು ಮುದ್ರಿಸಲು ಬಳಸುತ್ತಿದ್ದ ಕಂಪ್ಯೂಟರ್, ಪ್ರಿಂಟರ್, ಪೆನ್ ಡ್ರೈವ್, ನೋಟಿಗೆ ಬಳಸುತ್ತಿದ್ದ ಪೇಪರ್ ಇತ್ಯಾದಿ ಪರಿಕರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವೈಢೂರ್ಯ ಎಲ್ಲಿಂದ ಸಿಕ್ಕಿತ್ತು ಗೊತ್ತಾ ?
ಸುಮಾರು 300 ವರ್ಷಗಳ ಹಿಂದೆ, ಮೈಸೂರು ರಾಜರು ವೈಢೂರ್ಯವನ್ನು ಗಿಫ್ಟ್ ಕೊಟ್ಟಿದ್ದರಂತೆ. ಶಿವಮೊಗ್ಗದ ವ್ಯಕ್ತಿಯ ಮನೆಯಲ್ಲಿ ಅಜ್ಜಂದಿರ ಕಾಲದಿಂದಲೂ ಇದ್ದ ವೈಢೂರ್ಯದ ಬಗ್ಗೆ ಆತನಿಗೆ ಹೆಚ್ಚೇನೂ ಗೊತ್ತಿರಲಿಲ್ಲ. ರಾಜರ ಕಾಲದ ಅಮೂಲ್ಯ ರತ್ನಗಳು, ಮೂರ್ತಿಗಳನ್ನು ಯಾವುದೇ ಕಾರಣಕ್ಕೆ ಖಾಸಗಿ ವ್ಯಕ್ತಿಗಳು ಇರಿಸಿಕೊಳ್ಳುವಂತಿಲ್ಲ. ಆದರೆ, ಈ ವೈಢೂರ್ಯಕ್ಕೆ ವಜ್ರಕ್ಕಿಂತಲೂ ಹೆಚ್ಚು ಬೆಲೆ ಇದೆ ಎನ್ನುವುದನ್ನು ತಿಳಿದ ಖದೀಮರು ಕೇರಳದ ನಿಗೂಢ ಜಾಗದಲ್ಲಿ ಇರಿಸಿಕೊಂಡು ಅದನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸಪ್ಲೈ ಮಾಡಲು ನೋಡುತ್ತಿದ್ದರು. ಆದರೆ, ಅದಕ್ಕೆ ತಕ್ಕಷ್ಟು ಬೆಲೆ ಕುದುರದೇ ಇರುವುದು ಮತ್ತು ಅದನ್ನು ಮಾರ್ಕೆಟ್ ಮಾಡಲು ಸಾಧ್ಯವಾಗದೆ ಉಳಿದುಕೊಂಡಿತ್ತು.
Two from Vitla arrested by Chikmagalur police for robbery of one crore worth precious diamond from Shivamogga. The gang is said to be Involved in Honey trap, extrotion, and high end prostitution in Mangalore and Other parts of Karnataka.
25-11-24 05:51 pm
Bangalore Correspondent
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
Bjp, D K Shivakumar : ಚನ್ನಪಟ್ಟಣ ಗೆಲ್ಲಲು ಬಿಜೆಪ...
24-11-24 08:39 pm
CM Siddaramaiah, BJP, Congress ಆರ್. ಅಶೋಕ್ ಕಾ...
23-11-24 07:43 pm
B Y Vijayendra, DK Shivkumar: ವಿಜಯೇಂದ್ರಗೆ ತೀವ...
23-11-24 02:15 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
25-11-24 11:14 pm
Mangalore Correspondent
Vithoba Rukumai temple case, Mangalore: ವಿಠೋಬ...
25-11-24 10:39 pm
Ullal Dargah, Mangalore: ಎಪ್ರಿಲ್ 24 ರಿಂದ ಮೇ...
25-11-24 02:44 pm
Kukke Subrahmanya Temple, Mangalore: ನ.27ರಿಂದ...
24-11-24 09:13 pm
Hariprasad, Mangalore, Congress: ಮಹಾರಾಷ್ಟ್ರದಲ...
24-11-24 05:16 pm
25-11-24 06:17 pm
HK News Desk
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm