ಮನೆಯ ಶೆಡ್ ನಲ್ಲಿ ದನದ ಕರು ಕಡಿದು ಮಾಂಸ ; ಒಬ್ಬನ ಬಂಧನ, ಇಬ್ಬರು ಪರಾರಿ

27-08-21 04:32 pm       Mangaluru Correspondent   ಕ್ರೈಂ

ಕಡಬ ತಾಲೂಕಿನ ಕಳಾರ ಎಂಬಲ್ಲಿ ದನದ ಕರುವನ್ನು ಕಡಿದು ಮಾಂಸ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಕಡಬ ಪೊಲೀಸರು ದಾಳಿ ನಡೆಸಿದ್ದು, ಒರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಪುತ್ತೂರು, ಆಗಸ್ಟ್ 27:ಕಡಬ ತಾಲೂಕಿನ ಕಳಾರ ಎಂಬಲ್ಲಿ ಮನೆ ಹಿಂಬದಿಯ ಶೆಡ್ ನಲ್ಲಿ ದನದ ಕರುವನ್ನು ಕಡಿದು ಮಾಂಸ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಕಡಬ ಪೊಲೀಸರು ದಾಳಿ ನಡೆಸಿದ್ದು, ಒರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಮಹಮ್ಮದ್ ಇಸ್ಮಾಯಿಲ್ ಎಂಬವರ ಪಾಳು ಬಿದ್ದ ಮನೆ ಹಿಂಬದಿಯ ಶೆಡ್ ನಲ್ಲಿ ಇಂದು ಬೆಳಗ್ಗೆ ಅಕ್ರಮವಾಗಿ ಗೋವುಗಳನ್ನು ಕಡಿದು ಮಾಂಸ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ದೊರೆತು ಪೊಲೀಸರು ದಾಳಿ ನಡೆಸಿದ್ದು ಅಲ್ಲಿದ್ದ ಮೂವರು ವ್ಯಕ್ತಿಗಳು ಓಡಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ, ಅಬ್ದುಲ್ ರಹಿಮಾನ್ ಎಂಬಾತನನ್ನು ಬೆನ್ನಟ್ಟಿ ಹಿಡಿದು ಬಂಧಿಸಿದ್ದಾರೆ.

ಆರೋಪಿಗಳು ದನದ ಕರುವನ್ನು ಕಡಿದು ಮಾಂಸ ಮಾಡುತ್ತಿದ್ದರು. ಪ್ಲಾಸ್ಟಿಕ್ ಟರ್ಪಾಲಿನಲ್ಲಿ ಮಾಡಿಟ್ಟಿದ್ದ 40 ಕೇಜಿ ದನದ ಮಾಂಸ, ದನದ ನಾಲ್ಕು ಕಾಲುಗಳು, ಇಲೆಕ್ಟ್ರಾನಿಕ್ ತೂಕಮಾಪನ, ಕಬ್ಬಿಣದ ಕತ್ತಿಗಳು, ನಾಲ್ಕು ಚೂರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶೆಡ್ ಹೊರಗಡೆ ಕಟ್ಟಿಹಾಕಿದ್ದ ನಾಲ್ಕು ಕರುಗಳನ್ನು ರಕ್ಷಿಸಿದ್ದಾರೆ. ಮಾಂಸ ಮತ್ತು ಜೀವಂತ ಇರುವ ದನದ ಕರುಗಳ ಒಟ್ಟು ಮೌಲ್ಯ 19,500 ಆಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಓಡಿ ಪರಾರಿಯಾಗಿರುವ ಮಹಮ್ಮದ್ ಶರೀಫ್ ಹಾಗೂ ಮಹಮ್ಮದ್ ಮುಸ್ತಫ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.