ರೋಡ್ ರಾಬರಿಗೆ ಯತ್ನಿಸಿ ಗ್ಯಾಂಗ್ ರೇಪ್ ; ಬಾಳೆಕಾಯಿ ಮಾರಲು ಬಂದಿದ್ದ ತಮಿಳು ಕಾರ್ಮಿಕರ ಕೃತ್ಯ, ಒಬ್ಬ ಬಾಲಾಪರಾಧಿ !!

28-08-21 12:57 pm       Headline Karnataka News Network   ಕ್ರೈಂ

ಗ್ಯಾಂಗ್ ರೇಪ್ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಡಿಜಿಪಿ ಪ್ರವೀಣ್ ಸೂದ್ ಸುದ್ದಿಗೋಷ್ಠಿ ಕರೆದು ದೃಢಪಡಿಸಿದ್ದಾರೆ. ಎಲ್ಲ ಕೂಲಿ ಕಾರ್ಮಿಕರು. ಚಾಲಕ, ಕಾರ್ಪೆಂಟರ್ ಇದ್ದಾರೆ. ಒಬ್ಬ ಬಾಲ ಕಾರ್ಮಿಕ ಇದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ಮೈಸೂರು, ಆಗಸ್ಟ್ 28: ಗ್ಯಾಂಗ್ ರೇಪ್ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಡಿಜಿಪಿ ಪ್ರವೀಣ್ ಸೂದ್ ಸುದ್ದಿಗೋಷ್ಠಿ ಕರೆದು ದೃಢಪಡಿಸಿದ್ದಾರೆ. ಹೈಕೋರ್ಟ್ ಸೂಚನೆ ಪ್ರಕಾರ, ಆರೋಪಿಗಳ ಬಗ್ಗೆ ಹೆಚ್ಚು ಮಾಹಿತಿ ನೀಡಲು ಬರುವುದಿಲ್ಲ. ಆದರೆ, ಎಲ್ಲ ಕೂಲಿ ಕಾರ್ಮಿಕರು. ಚಾಲಕ, ಕಾರ್ಪೆಂಟರ್ ಇದ್ದಾರೆ. ಒಬ್ಬ ಬಾಲ ಕಾರ್ಮಿಕ ಇದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ತಮಿಳುನಾಡಿನ ಸತ್ಯಮಂಗಲ ಆಸುಪಾಸಿನಲ್ಲಿ ಬಾಳೆಕಾಯಿ, ತರಕಾರಿ ಬೆಳೆಯುತ್ತಾರೆ. ಅಲ್ಲಿಂದ ಮಾಲನ್ನು ಪಡೆದು ಮೈಸೂರು ಸಿಟಿಗೆ ತೆಗೆದುಕೊಂಡು ಬರುತ್ತಾರೆ. ಹಿಂತಿರುಗಿ ಹೋಗುವ ಸಂದರ್ಭದಲ್ಲಿ ರಾಬರಿ ಮಾಡುವ ರೂಢಿ ಮಾಡಿಕೊಂಡಿದ್ದರು. ಈ ವೇಳೆ, ಈ ರೀತಿಯ ಅಮಾನುಷ ಕೃತ್ಯ ಮಾಡಿದ್ದಾರೆ. ಗ್ಯಾಂಗ್ ರೇಪ್ ಮತ್ತು ಮೂರು ಲಕ್ಷ ಹಣ ಕೇಳಿದ್ದರು. ಹಣ ಸಿಗದೇ ಇದ್ದುದಕ್ಕೆ ಹಲ್ಲೆ ಮಾಡಿ ತೆರಳಿದ್ದರು. ಘಟನೆಯಲ್ಲಿ ಆರು ಜನ ಇದ್ದು, ಒಬ್ಬ ಸಿಕ್ಕಿಲ್ಲ.

ಒಬ್ಬ ಏಳನೇ ತರಗತಿ, ಇನ್ನೊಬ್ಬ ಎಂಟನೇ ತರಗತಿ ಓದಿದ್ದಾನೆ. ಇನ್ನೊಬ್ಬ ಶಾಲೆಗೇ ಹೋಗಿಲ್ಲ. ಒಬ್ಬನಿಗೆ 17 ವರ್ಷ ಆಗಿದ್ದು, ಬಾಲಾಪರಾಧಿ ಇದ್ದಾನೆ. ಆದರೆ, ನಿರ್ಭಯಾ ಪ್ರಕರಣದ ಬಳಿಕ ಜುವೆನಿಲ್ ಏಕ್ಟ್ ಬಗ್ಗೆ ಸಡಿಲಿಕೆ ಮಾಡಿದ್ದಾರೆ. ಗಂಭೀರ ಪ್ರಕರಣಗಳಲ್ಲಿ 16 ವರ್ಷದ ವರೆಗೂ ಆರೋಪಿಗಳಾಗಿ ಪರಿಗಣಿಸಬಹುದು. ಕೋರ್ಟ್ ನಲ್ಲಿ ಟ್ರಯಲ್ ಮಾಡಬಹುದು ಎಂದಿದೆ. ಅದರಂತೆ, ನಾವು ಟ್ರಯಲ್ ಮಾಡುತ್ತೇವೆ ಎಂದು ಪ್ರವೀಣ್ ಸೂದ್ ತಿಳಿಸಿದ್ದಾರೆ.

ಆರೋಪಿಗಳು ತಿರುಪ್ಪೂರ್ ಜಿಲ್ಲೆಯ ನಿವಾಸಿಗಳು. ಆರೋಪಿಗಳ ಬಗ್ಗೆ ಹೆಸರು ಹೇಳಲು ಬರುವುದಿಲ್ಲ. ಆದಷ್ಟು ಬೇಗ ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ, ಚಾರ್ಜ್ ಶೀಟ್ ಹಾಕಲು ಸೂಚನೆ ನೀಡಿದ್ದೇನೆ. ಆದರೆ, ಪ್ರಕರಣದ ಬಗ್ಗೆ ಸಂತ್ರಸ್ತ ಯುವತಿ ಮತ್ತು ಯುವಕನಿಂದ ಹೆಚ್ಚು ಮಾಹಿತಿ ಸಿಕ್ಕಿಲ್ಲ. ಆದರೂ ಕೆಲವು ಸುಳಿವುಗಳನ್ನು ಆಧರಿಸಿ, ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ಎರಡೇ ದಿನದಲ್ಲಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ ಎಂದು ಪ್ರವೀಣ್ ಸೂದ್ ತಿಳಿಸಿದ್ದಾರೆ.

ಆಗಸ್ಟ್ 24ರಂದು ಸಂಜೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಎಂಬಿಎ ವಿದ್ಯಾರ್ಥಿನಿ ಮತ್ತು ಯುವಕ ಜೊತೆಗಿದ್ದಾಗ ಐವರು ಕಾಮುಕರು ಮೇಲೆರಗಿದ್ದರು. ಮೂರು ಲಕ್ಷ ಹಣ ಕೇಳಿ, ಬಳಿಕ ಯುವಕನಿಗೆ ಹಲ್ಲೆಗೈದು ಯುವತಿಯನ್ನು ಗುಡ್ಡಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದರು. ಘಟನೆ ಮರುದಿನ ಬೆಳಕಿಗೆ ಬರುತ್ತಲೇ ರಾಜ್ಯದಲ್ಲಿ ಭಾರೀ ಆಕ್ರೋಶದ ಅಲೆ ಎಬ್ಬಿಸಿತ್ತು. ಇಡೀ ದೇಶದಲ್ಲೇ ಕ್ಲೀನ್ ಸಿಟಿಯೆಂದು ಹೆಸರು ಮಾಡಿರುವ ಮೈಸೂರಿನಲ್ಲಿ ಈ ರೀತಿಯ ಕೃತ್ಯ ಆಗಿರುವುದು ಆಘಾತ ಮೂಡಿಸಿತ್ತು. ಪ್ರಕರಣದ ಪತ್ತೆಗಾಗಿ ಪೊಲೀಸರ ಐದು ವಿಶೇಷ ತಂಡಗಳನ್ನು ರಚಿಸಲಾಗಿತ್ತು.


Mysore gang rape case five arrested, one juvenil. All are native of thiruppur district, DG Pravin sood confirmed